ಹೊರ ಹೋಗಿದ್ದ ಮಗ ಮನೆಗೆ ಬಂದಾಗ ಕಾದಿತ್ತು ಬಿಗ್ ಶಾಕ್; ಮತ್ತೆ ಬಾರದ ಲೋಕಕ್ಕೆ ಹೋದ ಅಮ್ಮ

ಸುದ್ದಿ

ನಮಸ್ಕಾರ ಸ್ನೇಹಿತರೇ, ಎಂತಹ ನೋವನ್ನು ಬೇಕಾದ್ರೂ ಸಹಿಸಿಕೊಳ್ಳಬಹುದು ಆದರೆ ತಾಯಿ ಮಗುವನ್ನು ಅಗಲುವ ನೋವನ್ನು ಸಹಿಸಿಕೊಳ್ಳಲು ಸಾಧ್ಯವೇ? ಹೌದು ಅಮ್ಮ ಎಂದರೆ ಮಗುವಿನ ಪ್ರಪಂಚ. ಆಕೆಯೇ ಇಲ್ಲದಿದ್ದರೆ ಮಗುವಿಗೆ ಇನ್ಯಾರು ದಿಕ್ಕು! ಹೀಗೆ ತನ್ನ ಮಗುವನ್ನು ಅನಾಥ ಮಾಡಿ ಹೋದ ತಾಯಿಯ ಕಥೆ ಇದು.

ಟ್ಯೂಷನ್ ಗೆಂದು ಹೋದ ಮಗ ಮರಳಿ ಮನೆಗೆ ಬರುವಷ್ಟರಲ್ಲಿ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಈ ಘಟನೆ ನಡೆದದ್ದು ಅನ್ನಪೂರ್ಣೇಶ್ವರಿ ನಗರದಲ್ಲಿ. ಕಾಂತರಾಜು ಹಾಗೂ ರೂಪಾ ದಂಪತಿಗಳ ನಡುವೆ ವೈಮನಸ್ಸಿನ ಕಾರಣ ರೂಪಾ ಪ್ರಾಣಬಿಡುವಂತಾಯಿತು. ಕಾಂತರಾಜು ರೀಯಲ್ ಎಸ್ಟೇಟ್ ಉದ್ಯಮಿ. ಈತನಿಗೆ ಪತ್ನಿ ರೂಪಾ (34ವರ್ಷ) ಅವಳ ಮೇಲೆ ಯಾವಾಗಲೂ ಅ’ನುಮಾನ. ಆಕೆಯ ನಡವಳಿಕೆಯನ್ನು ಪ್ರಶ್ನಿಸಿ ದಂಪತಿಗಳ ನಡುವೆ ಯಾವಾಗಲೂ ಮನಸ್ತಾಪಗಳು ನಡೆಯುತ್ತಲೇ ಇತ್ತು. ಆದರೆ ಬುಧವಾರ ಸಂಜೆ 4.30 ಕ್ಕೆ ಈ ಜಗಳ ಸಾವಿನಲ್ಲಿ ಅಂತ್ಯ ಕಂಡಿದೆ.

ಬುಧವಾರ ಸಂಜೆ ಮನೆಗೆ ಬಂದ ಕಾಂತರಾಜು ಪತ್ನಿಯ ಮೊಬೈಲ್ ಚೆಕ್ ಮಾಡಿ ಆಕೆ ಬೇರೆಯೊಬ್ಬನ ಜೊತೆ ಮಾತನಾಡಿದ್ದನ್ನು ಗುರುತಿಸಿದ್ದಾನೆ, ಈ ಸಂಬಂಧ ವಾದಮಾಡಿ ಅಡುಗೆ ಮನೆಯಿಂದ ಚುರಿ ತಂದು ರೂಪಾಳನ್ನು ಮುಗಿಸಿ ಪರಾರಿಯಾಗಿದ್ದಾನೆ. ಟ್ಯೂಷನ್ ಮುಗಿಸಿ ಮನೆಗೆ ಬಂದ ಮಗ ಶಾಕ್ ಆಗಿ ಆಚೆ ಓಡಿ ಬಂದಾಗ ಸ್ಥಳೀಯರಿಗೆ ಈ ವಿಷಯ ಗೊತ್ತಾಗಿದೆ. ಕೂಡಲೇ ಪೋಲಿಸರಿಗೆ ವಿಷಯ ತಿಳಿಸಲಾಗಿದೆ. ಆಗಮಿಸಿದ ಪೋಲಿಸರು ಕೇಸ್ ದಾಖಲಿಸಿಕೊಂಡು ಕಾಂತರಾಜು ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *