ತಂದೆ ಇಲ್ಲ ಎಂದು ಕೂಲಿ ಮಾಡಿ ಸಾಕಿದರೇ ಮಗಳು ಕಾಲೇಜಿನಲ್ಲಿ ಫಸ್ಟ್ ಕ್ಲಾಸ್ ಏನೋ ಬಂದಳು, ಆದರೆ ಆಮೇಲೆ ನಡೆದ್ದದು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ತಂದೆ ತಾಯಿಯರೆಂದರೆ ಹಾಗೆ ಅಲ್ವ? ಮಕ್ಕಳನ್ನು ಕಷ್ಟ ಪಟ್ಟು ದುಡಿದು ಸಾಕುತ್ತಾರೆ. ತಮಗೆ ಆದ ಯಾವ ನೋವನ್ನೂ ಅವರ ಮುಂದೆ ತೋರ್ಪಡಿಸದೇ, ತಾವು ಪಟ್ಟ ಕಷ್ಟವನ್ನು, ನೋವನ್ನು ತಮ್ಮ ಮಕ್ಕಳು ಅನುಭವಿಸಬಾರದು ಎಂದು ಅವರನ್ನು ಕೈಲಾದಷ್ಟು ಮಟ್ಟಿಗೆ ಉತ್ತಮವಾಗಿಯೇ ಸಾಕುತ್ತಾರೆ. ಆದರೆ ಕೆಲವೊಮ್ಮೆ ಮಕ್ಕಳೇ ತಂದೆ ತಾಯಿಗೆ ಇನ್ನಿಲ್ಲದಷ್ಟು ನೋವನ್ನು ಕೊಟ್ಟುಬಿಡುತ್ತಾರೆ.

ಈ ಘಟನೆ ನಡೆದಿದ್ದು, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಜ್ಜಪ್ಪ ವಡೇರಹಳ್ಳಿಯಲ್ಲಿ. ನಾಗರಾಜಪ್ಪ, ಚಂದ್ರಮ್ಮ ಹಾಗೂ ಮಗಳು ರಕ್ಷಿತಾ ಅವರ ಒಂದು ಪುಟ್ಟ ಕುಟುಂಬ. ತಂದೆ ತಾಯಿ ಕೂಲಿ ನಾಲಿ ಮಾಡಿಯಾದರೂ ಮಗಳನ್ನು ಓದಿಸುವ ಇಚ್ಛೆ ಹೊಂದಿದ್ದವರು. ಆದರೆ ದುರದೃಷ್ಟವಶಾತ್ ನಾಗರಾಜಪ್ಪ ಕೆಲಸಕ್ಕೆಂದು ಧರ್ಮಸ್ಥಳಕ್ಕೆ ಹೋಗಿದ್ದವರು ಆಕಸ್ಮಿಕ ಕರೆಂಟ್ ತಗುಲಿ ಇಹಲೋಕ ತ್ಯಜಿಸುತ್ತಾರೆ.

ಇತ್ತ ಚಂದ್ರಮ್ಮ ಗಂಡನನ್ನು ಕಳೆದುಕೊಂಡು ಒಪ್ಪತ್ತಿನ ಊಟಕ್ಕೂ ಕಷ್ಟಪಡುವಂಥ ಪರಿಸ್ಥಿತಿ. ಗಂಡ ತೀರಿಕೊಂಡು ಮೂರು ವರ್ಷಗಳಾದರೂ ಮಗಳನ್ನು ಮಾತ್ರ ಹೊಟ್ಟೆ ಬಟ್ಟೆ ಕಟ್ಟಿ ಸಾಕುತ್ತಿದ್ದಳು ಚಂದ್ರಮ್ಮ. ಚಂದ್ರಮ್ಮ ಅವರ ಮಗಳು ರಕ್ಷಿತಾಳಿಗೆ ಇನ್ನೂ ಓದುವ ಆಸೆ. ಆದರೆ ಚಂದ್ರಮ್ಮ ಬಳಿ ಅಷ್ಟು ಹಣವಿರಲಿಲ್ಲ. ಹಾಗಾಗಿ ಫೀಸ್ ಕಟ್ಟಲು ಇನ್ನಷ್ಟು ಸಮಯ ಕೊಡು ತಾನು ವ್ಯವಸ್ಥೆ ಮಾಡುತ್ತೇನೆ ಎಂದು ಹೇಳುತ್ತಾಳೆ. ಆದರೆ ಮಗಳು ದುಡುಕಿ ಬೇರೆಯದೇ ನಿರ್ಧಾರ ತೆಗೆದುಕೊಳ್ಳುತ್ತಾಳೆ.

ಹೌದು, ರಕ್ಷಿತಾ, ಮನೆಯಲ್ಲಿ ತಾಯಿ ಇಲ್ಲದ ಸಮಯ ನೋಡಿ, ತನ್ನ ಉಸಿರನ್ನು ತಾನೇ ತೆಗೆದುಕೊಳ್ಳುತ್ತಾಳೆ. ಇದೀಗ ಚಂದ್ರಮ್ಮನ ಆಕ್ರಂದನ ಮುಗಿಲು ಮುಟ್ಟಿದೆ. ತಾನು ಇಷ್ಟು ಕಷ್ಟಪಟ್ತು ಮಗಳನ್ನು ಸಾಕಿದ್ದರೂ ಆಕೆ ಇಷ್ಟು ಸಣ್ಣ ವಯಸ್ಸಿನಲ್ಲಿ ಅಂದರೆ ಕೇವಲ 18 ವರ್ಷ ವಯಸ್ಸಿನಲ್ಲಿ ತನ್ನನ್ನು ಬಿಟ್ಟು ಹೋಗಿದ್ದಕ್ಕೆ ಪರಿಪರಿಯಾಗಿ ರೋಧಿಸುತ್ತಾರೆ ಚಂದ್ರಮ್ಮ. ತಮ ಕಣ್ಣಮುಂದೆಯೇ ಬೆಳೆದು ನಿಂತ ಮಕ್ಕಳನ್ನು ಕಳೆದುಕೊಳ್ಳುವ ಪರಿಸ್ಥಿತಿ ಯಾವ ತಂದೆ ತಾಯಿಗೂ ಬಾರದಿರಲಿ.

Comments are closed.