ಮೊಬೈಲ್ ನಿಂದ ತೆಗೆದ ಒಂದು ಫೋಟೋ ಮಗುವಿನ ಪ್ರಾಣ ಉಳಿಸಿದ್ದು ಹೇಗೆ ಗೊತ್ತಾ?? ನಿಜಕ್ಕೂ ಶಾಕ್ ಆಗ್ತೀರಾ

ನಮಸ್ಕಾರ ಸ್ನೇಹಿತರೇ ಇಂದಿನ ದಿನಗಳಲ್ಲಿ ಎಲ್ಲರ ಕೈಯಲ್ಲಿ ಕೂಡ ಮೊಬೈಲ್ ಇದ್ದೆ ಇರುತ್ತದೆ. ಇನ್ನು ಮೊಬೈಲ್ ಕೇವಲ ಯುವಕರಲ್ಲಿ ಅಥವಾ ಹಿರಿಯರಲ್ಲಿ ಮಾತ್ರವಲ್ಲದೆ ಚಿಕ್ಕ ಮಕ್ಕಳ ಕೂಡ ಅದನ್ನು ಉಪಯೋಗಿಸುತ್ತಾರೆ. ಇದೀಗ ಅದರ ಪ್ರಭಾವ ಎಷ್ಟು ಬೀರಿದೆಯೆಂದರೆ ಇದೀಗ ಎಷ್ಟು ಚಿಕ್ಕ ಮಕ್ಕಳು ಅದು ಕೈಯಲ್ಲಿದ್ದರೆ ಮಾತ್ರ ಊಟ ಮಾಡುತ್ತಾರೆ. ಅಷ್ಟರಮಟ್ಟಿಗೆ ಮೊಬೈಲನ್ನು ಅವರು ಹಚ್ಚಿಕೊಂಡಿರುತ್ತಾರೆ.

ಇನ್ನು ಮೊಬೈಲ್ ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂದು ಸಾಕಷ್ಟು ಸಂಶೋಧನೆಗಳು ತಿಳಿಸಿವೆ. ಹೌದು ಮೊಬೈಲ್ ನಿಂದ ಹೊರ ಬರುವ ಕಿರಣಗಳು ನಮ್ಮ ಕಣ್ಣಿಗೆ ಹಾಗೂ ನಮ್ಮ ಭಾರಿ ಪ್ರಮಾಣದಲ್ಲಿ ಹಾನಿಕಾರಕ ಎಂದು ಸಾಕಷ್ಟು ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ. ಇದರಿಂದಾಗಿ ಮೊಬೈಲ್ ಇಲ್ಲದಿದ್ದರೆ ನಮ್ಮ ಜೀವನ ಚೆನ್ನಾಗಿರುತ್ತದೆ ಎಂದು ಸಾಕಷ್ಟು ಪಾಲಕರು ಕೂಡ ಅಂದುಕೊಂಡಿದ್ದುಂಟು. ಆದರೂ ಏನೇ ಆಗಲೇ ಮೊಬೈಲ್ ಮಾತ್ರ ಬಿಡುವುದಿಲ್ಲ ಎಂದು ಸಾಕಷ್ಟು ಯುವಕರು ಹಾಗೂ ಮಕ್ಕಳು ಇಂದಿನ ಜೀವನದಲ್ಲಿ ವ್ಯಸ್ತರಾಗಿದ್ದಾರೆ.

ಇನ್ನು ಮೊಬೈಲ್ ಮಕ್ಕಳನ್ನು ಹಾಳು ಮಾಡುತ್ತವೆ ಎಂದು ಅದೆಷ್ಟೋ ಪಾಲಕರು ಹೇಳಿರುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ಪುಟ್ಟ ಮಗು ಮೊಬೈಲ್ ನಿಂದಾಗಿ ಜೀವ ಉಳಿಸಿಕೊಂಡಿದೆ. ಹೌದು ಮಗುವಿನ ತಾಯಿ ಫೋಟೋ ಹೊಡೆದು ಆ ಫೋಟೋ ಇಂದಾಗಿ ಅದರ ಜೀವ ಉಳಿದಿದೆ. ಇದು ನಿಮಗೆ ವಿಚಿತ್ರ ಅನ್ನಿಸಿದರೂ ಕೂಡ ಸತ್ಯವಾದದ್ದು. ಇನ್ನು ಈ ಘಟನೆ ನಡೆದಿದ್ದು ಅಮೆರಿಕಾದಲ್ಲಿ. ಹೌದು ತಾಯಿಯೊಬ್ಬಳು ತನ್ನ ಮೊಬೈಲ್ ಹಳೆಯದಾಗಿದ್ದರಿಂದ ಅದನ್ನು ಬಿಟ್ಟು ಹೊಸ ಮೊಬೈಲ್ ಖರೀದಿ ಮಾಡಿದ್ದಾಳೆ.

ಖರೀದಿಸಿದ ಖುಷಿಯಲ್ಲಿ ತನ್ನ ಪುಟ್ಟ ಮಗುವಿನ ಫೋಟೋವನ್ನು ಮೊಬೈಲ್ ಮೂಲಕ ತೆಗೆದಿದ್ದಾಳೆ. ಈ ಸಂದರ್ಭದಲ್ಲಿ ಮೊಬೈಲ್ ಫೋಟೋ ಯೋಚಿಸುವಾಗ ಮಗುವಿನ ಕಣ್ಣು ಹೊಳೆಯುತ್ತಿರುವುದು ಗಮನಿಸಿದ್ದಾಳೆ. ಆಗ ತಾಯಿ ರಾತ್ರಿ ವೇಳೆ ಫೋಟೋ ಹೊಡೆದಿದ್ದ ಕಾರಣ ಹೊಳೆಯುತ್ತಿರಬೇಕು ಅಥವಾ ಮೊಬೈಲ್ ಫ್ಲಾಶ್ ಲೈಟ್ ಇಂದಾಗಿ ಹೊಳೆಯುತ್ತಿರಬೇಕು ಎಂದು ತಿಳಿದುಕೊಂಡು ರಾತ್ರಿ ವೇಳೆ ಸುಮ್ಮನೆ ಮಲಗಿದ್ದಾರೆ. ಆದರೂ ಕೂಡ ತಲೆಯಲ್ಲಿ ಏನೋ ಒಂದು ಆಲೋಚನೆಯಾಗಿ ಆ ಫೋಟೋವನ್ನು ತನ್ನ ತಂಗಿಗೆ ತೋರಿಸಿದ್ದಾರೆ.

ಆಗ ಅವರ ತಂಗಿ ಗಮನಿಸಿ ಇದು ಸಾಮಾನ್ಯವಾಗಿ ಹೊಳೆಯುತ್ತಿಲ್ಲ ಪ್ರಾಣಿಗಳ ಕಣ್ಣುಗಳು ರಾತ್ರಿ ವೇಳೆ ಹೊಳೆಯುವಂತೆ ಹೊಳೆಯುತ್ತಿದೆ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೆ ತಂಗಿ ಕೂಡ ಮೊಬೈಲ್ ಬೆಳಕಿನಿಂದಾಗಿ ಹೊಳೆಯುತ್ತಿರಬೇಕು ಎಂದು ಹೇಳಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ಆ ತಾಯಿಗೆ ಏನೋ ಒಂದು ರೀತಿಯ ಸಮಾಧಾನ ಸಿಗಲಿಲ್ಲ. ನಂತರ ಆ ತಾಯಿ ತನ್ನ ಮಗುವನ್ನು ಕರೆದುಕೊಂಡು ವೈದ್ಯರ ಬಳಿ ಹೋಗಿದ್ದಾಳೆ. ವೈದ್ಯರ ಬಳಿ ಹೋಗಿ ತನ್ನ ಮಗನ ಕಣ್ಣು ಇಷ್ಟು ಯಾಕೆ ಹೊಳೆಯುತ್ತಿದೆ ಎಂದು ಕೇಳಿದ್ದಾಳೆ. ಆಗ ವೈದ್ಯರು ಕೂಡ ಅನುಮಾನಪಟ್ಟು ಕೆಲವು ಟೆಸ್ಟ್ ಮಾಡಿಸಲು ಮುಂದಾಗಿದ್ದಾರೆ.

ಇನ್ನೂ ಟೆಸ್ಟ್ ಮಾಡಿಸಿದಾಗ ಮಗುವಿನ ಕಣ್ಣಿನಲ್ಲಿ ಕ್ಯಾನ್ಸರ್ ಇರುವುದು ಕಂಡು ಬಂದಿದೆ. ಆಗ ವೈದ್ಯರು ಈ ರೀತಿಯ ಕ್ಯಾನ್ಸರ್ ಕಂಡು ಬರುವುದು ತೀರ ವಿರಳ ಎಂದು ಹೇಳಿದಾಗ ತಾಯಿ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ದೇವರು ತಾಯಿಯ ಕಡೆಗೆ ಇದ್ದ ಏನೋ ಅದು ಆರಂಭದ ಹಂತದಲ್ಲಿ. ಹೀಗಾಗಿ ವೈದ್ಯರು ಚಿಕಿತ್ಸೆ ಆರಂಭಿಸಿ ಕೊನೆಗೆ ಆ ಮಗುವಿನ ಜೀವ ರಕ್ಷಿಸಿದರು. ಇದೀಗ ಆ ಮಗು ಕ್ಯಾನ್ಸರ್ ಮುಕ್ತವಾಗಿದ್ದು, ಒಂದು ಫೋಟೋ ಇದ್ದಾಗೆ ಅದು ಇಂದು ಜೀವಂತವಾಗಿದೆ ಎಂದು ಹೇಳಬಹುದು.

Comments are closed.