ನೇರವಾಗಿ ಮಹಾರಾಷ್ಟ್ರ ಸರ್ಕಾರದ ಬುಡಕ್ಕೆ ಇಟ್ಟ ಮಾಜಿ ಕಮಿಷನರ್ ಮತ್ತೊಂದು ಮಹತ್ವದ ಹೆಜ್ಜೆ ! ಸರ್ಕಾರದ ಕಥೆಯೇನು?

ನಮಸ್ಕಾರ ಸ್ನೇಹಿತರೇ ಮುಂಬೈ ನಗರದ ಮಾಜಿ ಪೊಲೀಸ್ ಆಯುಕ್ತ ಪರಮೇಶ್ವರ್ ಅವರು ಇದೀಗ ಪರೋಕ್ಷವಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಅಧಿಕಾರದಲ್ಲಿರುವ ಮಹ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸುವ ಅಂತಹ ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ಆರೋಪ ಮತ್ತು ಪ್ರತ್ಯಾರೋಪಗಳು ಇಂದಿನ ರಾಜಕೀಯದಲ್ಲಿ ಸಾಮಾನ್ಯವಾದರೂ ಕೂಡ ಇವರು ಇಟ್ಟಿರುವ ಹೆಜ್ಜೆ ಇದೀಗ ಮತ್ತಷ್ಟು ಮಹತ್ವವಿದೆ

ಹೌದು ಸ್ನೇಹಿತರೇ ಗೃಹ ಸಚಿವ ರಾಗಿರುವ ಅನಿಲ್ ರವರು ನೂರು ಕೋಟಿ ರೂಗಳನ್ನು ಕಲೆಕ್ಟ್ ಮಾಡುವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪತ್ರ ಬರೆದಿದ್ದ ಪರಮ್ ರವರು ಅನಿಲ್ ರವರು ವಿವಿಧ ತನಿಖೆಗಳಲ್ಲಿ ಇಲ್ಲಿಯವರೆಗೂ ಹಸ್ತಕ್ಷೇಪ ಮಾಡಿದ್ದಾರೆ, ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳು ಕೂಡ ಗೃಹ ಸಚಿವರು ಹೇಳಿದಂತೆ ನಿರ್ದಿಷ್ಟ ರೀತಿಯಲ್ಲಿ ತನಿಖೆಗಳನ್ನು ನಡೆಸಬೇಕಾಗಿತ್ತು.

ಇಲ್ಲಿಯವರೆಗೂ ಹಲವಾರು ಭ್ರಷ್ಟಾಚಾರಗಳಲ್ಲಿ ಹಾಗು ವಿವಿಧ ಪ್ರಕರಣಗಳಲ್ಲಿ ಗೃಹ ಸಚಿವ ಅನಿಲ್ ದೇಶಮುಖ ರವರು ಭಾಗಿಯಾಗಿದ್ದಾರೆ, ಈ ಕುರಿತು ನನ್ನ ಮಾತನ್ನು ನಂಬದೇ ಇದ್ದರೂ ಪರವಾಗಿಲ್ಲ ಈ ಕೂಡಲೇ ಸರ್ಕಾರ ನನ್ನ ಮನವಿಯನ್ನು ಸ್ವೀಕರಿಸಿ ನಾನು ನೀಡುತ್ತಿರುವ ಹೇಳಿಕೆಗಳ ಹಾಗೂ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಹೆಚ್ಚಿನ ತನಿಖೆ ನಡೆಸಲು ಸಿಬಿಐ ಸಂಸ್ಥೆಗೆ ಆದೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಒಂದು ವೇಳೆ ಅದೇ ನಡೆದಲ್ಲಿ ಗೃಹ ಸಚಿವರಾಗಿರುವ ಅನಿಲ್ ದೇಶಮುಖರ ಬರುವ ರಾಜೀನಾಮೆ ನೀಡುವ ಮೂಲಕ ಸರ್ಕಾರ ಉರುಳಿದರೂ ಅಚ್ಚರಿಪಡಬೇಕಾಗಿಲ್ಲ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ ಯಾಕೆಂದರೆ ನಿರ್ದೇಶಕರವರ ಸರಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ

Comments are closed.