ಮಹಾಭಾರತದ ಯುದ್ಧದ ಬಗ್ಗೆ ಮೊದಲೇ ತಿಳಿದಿದ್ದ 7 ಮಹಾಪುರುಷರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಹಾಭಾರತ ಯುದ್ಧ ಐದು ಸಾವಿರ ವರ್ಷಗಳ ಹಿಂದೆಯೇ ನಡೆದಿದ್ದರೂ, ಇಂದಿಗೂ ದಿನನಿತ್ಯ ಜೀವನದಲ್ಲಿ ಒಮ್ಮೆಯಾದರೂ ನಾವುಗಳು ಮಹಾಭಾರತದ ಕತೆ ಹಾಗೂ ಆ ಯುದ್ಧವನ್ನು ನೆನಪಿಸಿಕೊಳ್ಳುತ್ತಿರುತ್ತೇವೆ. 18 ದಿನ ನಡೆದ ಈ ಯುದ್ಧದಲ್ಲಿ ಅಸಂಖ್ಯಾತ ಜನರು ಸಾವನ್ನಪ್ಪಿದ್ದರು. ಯುದ್ಧದಲ್ಲಿ ಭಾಗವಹಿ ಕೊನೆಗೆ ಉಳಿದವರೆಂದರೇ ಕೇವಲ 18 ಜನ ಮಾತ್ರ. ನ ಭೂತೋ, ನ ಭವಿಷ್ಯತಿ ಎಂಬಂತೆ ನಡೆದ ಈ ಯುದ್ಧ, ಆಗುವ ಮುನ್ನವೇ ಮಹಾಭಾರತದ ಕೆಲವು ಮಹಾಪುರುಷರಿಗೆ ಈ ಯುದ್ಧದ ಬಗ್ಗೆ ತಿಳಿದಿತ್ತಂತೆ. ಬನ್ನಿ ಆ ಏಳು ಮಹಾಪುರುಷರು ಯಾರು ಎಂದು ತಿಳಿಯೋಣ.

1.ಶ್ರೀ ಕೃಷ್ಣ ; ಮಹಾಭಾರತದಲ್ಲಿ ಸಾರಥಿ ಪಾತ್ರ ನಿರ್ವಹಿಸಿದ ಶ್ರೀ ಕೃಷ್ಣನಿಗೆ ಮಹಾಭಾರತದ ಯುದ್ಧ ಹಾಗೂ ಅದರ ಫಲಿತಾಂಶ ಮೊದಲೇ ತಿಳಿದಿತ್ತಂತೆ. ದ್ರೌಪದಿಗೂ ಸಹ ಇದರ ಬಗ್ಗೆ ಸೂಚ್ಯವಾಗಿ ತಿಳಿಸಿದ್ದನಂತೆ.

2.ಭೀಷ್ಮ ಪಿತಾಮಹ : ಕಾಲಜ್ಞಾನಿ ಹಾಗೂ ದೈವಿಕ ಪುರುಷನಾಗಿದ್ದ ಭೀಷ್ಮನಿಗೂ ಸಹ ಈ ಯುದ್ಧದ ಬಗ್ಗೆ ಅರಿವಿತ್ತು. ಅವನು ಈ ಯುದ್ಧವನ್ನು ಬಯಸಿರಲಿಲ್ಲ. ಆದರೇ ಅನಿವಾರ್ಯ ಕಾರಣಗಳಿಂದ ಯುದ್ಧದಲ್ಲಿ ಭಾಗವಹಿಸಿದ.

3.ಮಹರ್ಷಿ ವೇದವ್ಯಾಸ : ದಿವ್ಯಜ್ಞಾನ ಹೊಂದಿದ್ದ ವೇದವ್ಯಾಸರಿಗೂ ಸಹ ಯುದ್ದ ಹಾಗೂ ಅದರ ಫಲಿತಾಂಶ ನಿಖರವಾಗಿ ತಿಳಿದಿತ್ತು. ಅವರು ಅದೆಷ್ಟೋ ಭಾರಿ ಧೃತರಾಷ್ಟ್ರನಿಗೆ ಸನ್ನೆಗಳ ಮೂಲಕ ಯುದ್ಧ ಮಾಡಬೇಡಿ ಎಂದು ಸಹ ಹೇಳಿದ್ದರಂತೆ.

4.ಸಹದೇವ : ಪಾಂಡವರಲ್ಲಿ ಸಹದೇವ ಒಬ್ಬನೇ ತ್ರಿಕಾಲಜ್ಞಾನಿಯಾಗಿದ್ದವನಂತೆ. ಅವನಿಗೆ ಯುದ್ಧ ಅದರ ಫಲಿತಾಂಶ ಎಲ್ಲವೂ ತಿಳಿದಿತ್ತಂತೆ. ಆದರೇ ಇದನ್ನು ಯಾರ ಬಳಿ ಹೇಳಿದರೂ, ನೀನು ಸಾಯುತ್ತಿಯಾ ಎಂದು ಶ್ರೀ ಕೃಷ್ಣ ಎಚ್ಚರಿಸಿದ್ದನಂತೆ.

5.ಸಂಜಯ : ಧೃತರಾಷ್ಟ್ರನ ಸಾರಥಿಯಾದ ಸಂಜಯ ಸಹ ತ್ರಿಕಾಲಜ್ಞಾನಿಯಾಗಿದ್ದವನು. ಆದರೇ ಅವನು ಶ್ರೀಕೃಷ್ಣನ ಪರಮಭಕ್ತನಾಗಿದ್ದ. ಹಾಗಾಗಿ ಅವನಿಗೆ ಯುದ್ಧದ ಎಲ್ಲಾ ಸೂಚನೆಗಳು ತಿಳಿದಿದ್ದವು.

6.ದ್ರೋಣಾಚಾರ್ಯ : ಗುರು ದ್ರೋಣಾಚಾರ್ಯರಿಗೂ ಸಹ ಮಹಾಭಾರತ ಯುದ್ಧದ ಎಲ್ಲಾ ಕುರುಹುಗಳು ತಿಳಿದಿತ್ತು. ಶ್ರೀ ಕೃಷ್ಣ ಯಾರ ಪರ ಇರುತ್ತಾನೋ ಅವರು ಜಯಿಸುತ್ತಾರೆ ಎಂಬ ಸತ್ಯವೂ ಅವರಿಗೆ ತಿಳಿದಿತ್ತು.

7.ಕೃಪಾಚಾರ್ಯ : ಶ್ರೀಕೃಷ್ಣನಂತೆ ಕೃಪಾಚಾರ್ಯರು ಸಹ ದೈವಿಕ ದರ್ಶನ ಹೊಂದಿದ ತ್ರಿಕಾಲ ಜ್ಞಾನಿಗಳು. ಅವರು ಸಹ ಯುದ್ಧದ ಫಲಿತಾಂಶವನ್ನು ನಿಖರವಾಗಿ ಹೇಳಿದ್ದರಂತೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.