ಧರ್ಮ ಬೆಂಬಲಿಸಿದ ಹಲವಾರು ಮಹನೀಯರು ಕುರುಕ್ಷೇತ್ರ ಯುದ್ಧದಲ್ಲಿ ಕೊನೆಯುಸಿರೆಳೆದಿದ್ದೇಕೆ?? ಅದಕ್ಕೆಲ್ಲ ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಹಾಭಾರತದ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ, ಕುರುಕ್ಷೇತ್ರ ಯುದ್ಧ ನೆನಪಿಸಿಕೊಂಡರೆ ಮಹಾಭಾರತದ ಎಲ್ಲಾ ಘಟನೆಗಳೂ ಕಣ್ಣೆದುರು ಬರುತ್ತವೆ. 18 ದಿನಗಳ ಕಾಲ ನಡೆದ ಯುದ್ಧವೇ ಮಹಾಭಾರತದ ಕುರುಕ್ಷೇತ್ರ. ಕೌರವರು ಹಾಗೂ ಪಾಂಡವರ ನಡುವೆ ನಡೆದ ಯುದ್ದವಿದು.

ಮಹಾಭಾರತ ಕೇವಲ ಕಥೆಯಲ್ಲ, ಅದರಲ್ಲಿ ತಿಳಿದುಕೊಳ್ಳುವುದಕ್ಕೆ ಸಾವಿರಾರು ವಿಷಯಗಳಿವೆ. ವಿಜ್ಞಾನ, ತಂತ್ರಜ್ಞಾನ ಎಲ್ಲಾ ಕ್ಷೇತ್ರದ ಬಗೆಗೂ ಇಲ್ಲಿ ತಿಳಿದುಕೊಳ್ಳುವುದಕ್ಕೆ ಸಾಕಷ್ಟು ಅಂಶಗಳಿವೆ. ಮಹಾಭಾರತವನ್ನು ಸರಿಯಾಗಿ ಅರ್ಥ ಮಾಡಿಕೊಂಡಲ್ಲಿ ಜೀವನಕ್ಕೊಂದು ಅರ್ಥ ಸಿಗುತ್ತದೆ. ಬದುಕುವ ರೀತಿ ಅರ್ಥವಾಗುತ್ತದೆ. ತಪ್ಪು ಸರಿ ಗಳ ಬಗ್ಗೆ ಜ್ಞಾನ, ಧರ್ಮ ಅಧರ್ಮಗಳ ಬಗ್ಗೆ ಅರಿವು ಮೂಡುತ್ತದೆ.

ಮಹಾ ಭಾರತದುದ್ದಕ್ಕೂ ಕೃಷ್ಣ ಧರ್ಮವನ್ನು ಸಾರುತ್ತಾನೆ. ಅಧರ್ಮವನ್ನು ನಿರ್ಮೂಲನ ಮಾಡುವುದಕ್ಕಾಗಿಯೇ ಕುರುಕ್ಷೇತ್ರ ಯುದ್ಧಕ್ಕೂ ಕಾರಣನಾಗುತ್ತಾನೆ. ಆದರೆ ಯುದ್ಧದಲ್ಲಿ ಜೀವನಪರ್ಯಂತ ಧರ್ಮವನ್ನೇ ಕಾಯ್ದುಕೊಂಡು ಬಂದ ಮಹಾತ್ಮರೂ ಕೂಡ ಸೋತಿದ್ದೇಕೆ? ಕೊನೆಯುಸಿರು ಎಳಿದಿದ್ದೇಕೆ?

ಭೀಷ್ಮ ಪಿತಾಮಹ, ದ್ರೋಣಾಚಾರ್ಯ ಎಲ್ಲರೂ ಕೂಡ್ ಅಜೀವನ ಪರ್ಯಂತ ಧರ್ಮದ ಹಾದಿಯಲ್ಲಿ ನಡೆದು ಕೊನೆಗೆ ಕುರುಕ್ಷೇತ್ರದ ಯುದ್ದದಲ್ಲಿ ಅಸುನೀಗುತ್ತಾರೆ. ಈ ಬಗ್ಗೆ ರುಕ್ಮಿಣಿಗೂ ಏನೋ ಸಂಶಯ. ಹಾಗಾಗಿ ಯುದ್ಧ ಮುಗಿಸಿ ಬಂದ ಕೃಷ್ಣನ ಬಳಿ ಇದೇ ಗೊಂದಲದ ಬಗ್ಗೆ ಪ್ರಶ್ನೆ ಕೇಳುತ್ತಾಳೆ. ಇಂಥ ಮಹನೀಯರು ಧರ್ಮ- ಅಧರ್ಮದ ಈ ಯುದ್ಧದಲ್ಲಿ ಸೋತಿದ್ದೇಕೆ ಎಂಬುದು.

ರುಕ್ಮಿಣಿಗೆ ಕೃಷ್ಣನ ವಿವರಣೆ ಹೀಗಿದೆ: ಬೀಷ್ಮರು ಜೀವನದಲ್ಲಿ ಧರ್ಮವನ್ನೇ ಅಳವಡಿಸಿಕೊಂಡು ಬಂದು ಹಸ್ತಿನಾಪುರವನ್ನು ಉಳಿಸಿಕೊಂಡು ಬಂದಿರುವವರು. ಧರ್ಮ ಅವರ ರಕ್ತದಲ್ಲಿಯೆ ಅಡಗಿತ್ತು ಆದರೆ ಆ ಒಂದು ಸಂದರ್ಭದಲ್ಲಿ ಧರ್ಮದ ದಾರಿಯನ್ನು ಮರೆತರು ಭೀಷ್ಮರು. ಅದೇ ದ್ರೌಪದಿ ವಸ್ತ್ರಾಪಹರಣ. ಬೀಷ್ಮರಂತೆ ದ್ರೋಣಾಚಾರ್ಯರೂ ಕೂಡ ದುಶ್ಯಾಸನ ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಿರುವಾಗ ದುಶ್ಯಾಸನನನ್ನು ತಡೆಯಲು ಸಾಧ್ಯವಿದ್ದರೂ ತಪ್ಪಿಸಲಿಲ್ಲ. ಹಾಗಾಗಿ ಅವರ ಈ ಕಾರ್ಯದಿಂದ ಅವರು ಈ ವರೆಗೆ ಮಾಡಿದ ರ್ಧರ್ಮದ ಕಾರ್ಯಗಳೆಲ್ಲವೂ ಪಾಪವಾಗಿ ಮಾರ್ಪಟ್ಟಿತ್ತು ಎಂಡು ಕೃಷ್ಣ ರುಕ್ಮಿಣಿಯ ಸಂದೇಹವನ್ನು ನಿವಾರಿಸುತ್ತಾನೆ.

ಹೀಗೆ ಯುದ್ಧದಲ್ಲಿ ಕೊನೆಯುಸಿ’ರೆಳೆದ ಇನ್ನೊಂದು ಮಹಾನ್ ದಾನಿ ಕರ್ಣ. ಇವನ ಸಾವಿನ ಬಗ್ಗೆಯೂ ರುಕ್ಮಿಣಿ ಕೇಳುತ್ತಾಳೆ. ಕೃಷ್ಣನ ಬಳಿ ಇದಕ್ಕೂ ಉತ್ತರವಿದೆ. ಕರ್ಣ ಕೊಡುಗೈದಾನಿ ತನ್ನ ಜನ್ಮದಿಂದ ಜೊತೆಯಾಗಿದ್ದ ಕರ್ಣ ಕುಂಡಲಗಳನ್ನೇ ದಾನ ಮಾಡಿದವನು. ಆದರೆ ಈ ಪುಣ್ಯಗಳ್ಯಾವವೂ ಕೊನೆಗಾಲದಲ್ಲಿ ಕರ್ಣನ ಕೈ ಹಿಡಿಯಲಿಲ್ಲ. ಇದಕ್ಕೆ ಕಾರಣ ಆತ ಯುದ್ಧದ ಸಮಯದಲ್ಲಿ ಅಭಿಮನ್ಯುವಿಗೆ ಒಂದು ತೊಟ್ಟು ನೀರನ್ನು ಕುಡಿಯಲು ಕೊಡದೇ ಇದ್ದದ್ದು! ಯುದ್ಧ ಭೂಮಿಯಲ್ಲಿ ಅಭಿಮನ್ಯು ಹೊಡೆತತಿಂದು ಬಿದ್ದಿರುವಾಗ ಅಲ್ಲಿಯೇ ಇರುವ ಕರ್ಣನ ಬಳಿ ನೀರು ಕೇಳುತ್ತಾನೆ. ಆದರೆ ಕರ್ಣ ನೀರನ್ನು ಕೊಡದೇ ಇರುವುದು ಕರ್ಣನ ಪುಣ್ಯವನ್ನೇಲ್ಲವನ್ನೂ ತೊಳೆದುಕಾಕುತ್ತದೆ ಎಂದು ಸ್ಪಷ್ಟನೆ ಕೊಡುತ್ತಾನೆ ಕೃಷ್ಣ. ಹೀಗೆ ಮಹಾಭಾರತದಲ್ಲಿ ಮಹನೀಯರೂ ಕೂಡ ಸೋಲುವುದಕ್ಕೆ ಅವರದ್ದೇ ಆದ ಕಾರಣಗಳಿವೆ ಎಂದು ಕೃಷ್ಣ ವಿವರಿಸುತ್ತಾನೆ.

Comments are closed.