ಶಿವನನ್ನು ಮೆಚ್ಚಿಸಲು ಯಾವ ಮಂತ್ರಗಳನ್ನು ಪಠಿಸಬೇಕು ಗೊತ್ತೇ?? ಈ ಮಂತ್ರಗಳಿಂದಾಗುವ ಪ್ರಯೋಜನಗಳು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೋಮವಾರ ಎಂದರೇ ಅದು ಶಿವನ ವಾರ. ಈ ವಾರವನ್ನ ಸಂಪೂರ್ಣವಾಗಿ ಶಿವನಿಗೆ ಅರ್ಪಿಸಲಾಗಿದೆ. ಸೋಮವಾರದಂದು ಶ್ರದ್ಧಾ ಭಕ್ತಿಯಿಂದ ಶಿವನನ್ನು ಪೂಜಿಸಿದರೇ, ಶಿವ ಆದಷ್ಟು ಬೇಗ ನಿಮ್ಮ ಭಕ್ತಿಗೆ ಒಲಿದು, ನಿಮ್ಮ ಇಷ್ಟಾರ್ಥಗಳನ್ನು ಸಿದ್ದಿಸುತ್ತಾನೆ ಎಂಬ ನಂಬಿಕೆ ಬಹುತೇಖ ಭಕ್ತರಲ್ಲಿ ಇದೆ. ಸದಾ ಕಾಲ ಶಿವನಾಮ ಸ್ಮರಣೆಯಿಂದ , ಮನುಷ್ಯನ ಜೀವನದಲ್ಲಿ ಎದುರಾಗುವ ಕೆಟ್ಟ ಸಮಯ ಹಾಗೂ ದೋಷ ಇವೆಲ್ಲವೂ ಮುಂದಕ್ಕೆ ಹೋಗುತ್ತವೆ, ಅದಲ್ಲದೇ ಮಹಾಮೃತ್ಯುಂಜಯ ನಮ್ಮ ಮೇಲೆ ಕರುಣಿಸುತ್ತಾನೆ ಎಂಬ ನಂಬಿಕೆ ಇದೆ. ಇದಲ್ಲದೇ ಪುರಾಣದಲ್ಲಿ ಭಗವಂತ ಶಿವನನ್ನು ಮೆಚ್ಚಿಸಲು ಹಲವಾರು ಮಂತ್ರಗಳನ್ನು ಸಹ ನೀಡಿದ್ದಾರೆ. ಬನ್ನಿ ಆ ಮಂತ್ರಗಳನ್ನು ಪಠಿಸುತ್ತಾ, ನಿಮ್ಮ ಜೀವನದಲ್ಲಿ ಉತ್ತಮ ಫಲಿತಾಂಶ ಕೊಡುವ ಆ ಮಂತ್ರಗಳು ಯಾವುವು ಎಂಬುದನ್ನ ತಿಳಿಯೋಣ ಬನ್ನಿ.

1.ಮಹಾ ಮೃತ್ಯುಂಜಯ ಮಂತ್ರ : ಈ ಮಂತ್ರವನ್ನು ಜಪಿಸುತ್ತಿದ್ದರೇ ಮನುಷ್ಯ ತನ್ನ ಮೃತ್ಯುವನ್ನ ದೂರವಿಡಬಹುದಂತೆ. ಹೆಚ್ಚು ಆಯಸ್ಸು ಸಿದ್ದಿಸಲು ಈ ಮಂತ್ರ ಸೂಚಿಸಲಾಗುತ್ತದೆ. ” ಓಂ ಹೌಂ ಜೂಂ ಸಃ ಓಂ ಭೂರ್ಭವ ಸ್ವಃ, ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ, ಉರ್ವಾರುಕವಿನ ಬಂಧನಾವ್ ಮೃತ್ಯೋಮುಕ್ಷಿಯ ಮಾಮೃತಾತ್, ಓಂ ಭುವಃ ಭೂಃ ಸಃ ಜೂಂ ಹೌಂ ಓಂ “.

2.ಶಿವ ಮೂಲ ಮಂತ್ರ : ” ಓಂ ನಮಃ ಶಿವಾಯ” ಎಂಬ ಈ ಮಂತ್ರವನ್ನು ಸದಾ ಪಠಿಸುತ್ದಿದ್ದರೇ ನಿಮ್ಮ ಎಲ್ಲಾ ಕಷ್ಟ ಕಾರ್ಪಣ್ಯಗಳು ದೂರವಾಗುವವು.

3.ಪ್ರಭಾವ ಶಾಲಿ ಶಿವ ಮಂತ್ರ : ಈ ಮಂತ್ರವನ್ನು ಸದಾ ಪಠಿಸುತ್ತಿದ್ದರೇ, ಜೀವನದಲ್ಲಿ ನೀವು ಪ್ರಭಾವಿಗಳಾಗಬಹುದು. – “ಓಂ ಸಾಧೋ ಜಾತಯೇ ನಮಃ, ಓಂ ವಾಮ ದೇವಾತ ನಮಃ, ಓಂ ತತ್ಪುರಷಾಯ ನಮಃ, ಓಂ ಈಶಾನಯ ನಮಃ, ಓಂ ಹ್ರೀಂ ಹ್ರೌಂ ನಮಃ ಶಿವಾಯ.

4.ರುದ್ರ ಗಾಯತ್ರಿ ಮಂತ್ರ : ಓಂ ತತ್ಪುರಷಾಯ ವಿದ್ಯಹೇ ಮಹಿದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್

5.ಶಿವನಿಗೆ ಪ್ರಿಯವಾದ ಮಂತ್ರ : ಈ ಮಂತ್ರ ಶಿವನಿಗೆ ಅತ್ಯಂತ ಪ್ರಿಯವಾಗಿದೆ. ಈ ಮಂತ್ರ ಏನೆಂದರೇ, ಓಂ ನಮಃ ಶಿವಾಯ, ನಮೋ ನೀಲಕಂಠಾಯ. ಈ ಮಂತ್ರ ಪಠಿಸಿ, ಶಿವನ ಅನುಗ್ರಹಕ್ಕೆ ಪಾತ್ರರಾಗಿರಿ.

Comments are closed.