ತನ್ನ ಧ್ವನಿ ಬದಲಾಗಲು ಕಾರಣವೇನು ಎಂದು ತಿಳಿಸಿದ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ ಮಮತಾ. ಹೇಗಿತ್ತು ಗೊತ್ತಾ ಇವರ ಜೀವನ??

ನಮಸ್ಕಾರ ಸ್ನೇಹಿತರೇ ದೇಹದಾರ್ಢ್ಯ ಅಥವಾ ಬಾಡಿ ಬಿಲ್ಡಿಂಗ್ ಕೇವಲ ಪುರುಷರಿಗೆ ಮಾತ್ರ ಎಂಬ ಕಾಲವೊಂದಿತ್ತು. ಆದರೇ ಈಗ ಆ ಕ್ಷೇತ್ರಕ್ಕೂ ಸಹ ಮಹಿಳೆಯರು ಕಾಲಿಡಲಾರಂಭಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೇ ಬೆಂಗಳೂರಿನಲ್ಲಿಯೂ ಸಹ ಮಹಿಳೆಯರ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳು ನಡೆಯುತ್ತಿರುತ್ತವೆ. ಈಗ ನಾವು ಹೇಳುತ್ತಿರುವುದು ಆ ಕಥೆಯ ಬಗ್ಗೆ. ಬೆಂಗಳೂರಿನ ಮಮತಾ ಮದುವೆಯಾಗಿ ಮೂರು ನಾಲ್ಕು ವರ್ಷಗಳ ನಂತರ ಅವರ ದೇಹದಲ್ಲಿ ವೀಪರೀತ ತೂಕ ಏರಿಕೆಯಾಗಿತ್ತಂತೆ.

ತೂಕ ಇಳಿಸುವ ಸಲುವಾಗಿ ಅವರು ಜಿಮ್ ಸೇರಿಕೊಂಡರಂತೆ. ಆದರೇ ಜಿಮ್ ಮಾಡುತ್ತಾ, ತಾನೇಕೆ ಪುರುಷರಂತೆ ಬಾಡಿ ಬಿಲ್ಡಿಂಗ್ ಮಾಡಬಾರದೆಂದು ನಿರ್ಧರಿಸಿ, ತಮ್ಮ ಪತಿಯ ಮುಂದೆ ಈ ಆಸೆ ಹೇಳಿಕೊಂಡರಂತೆ. ಪತಿ ಒಪ್ಪಿದ ನಂತರ ಜಿಮ್ ಸೇರಿ ದಿನದಲ್ಲಿ ಗಂಟೆಗಟ್ಟಲೇ ವರ್ಕೌಟ್ ಶುರು ಮಾಡಿಕೊಂಡರಂತೆ. ಮಮತಾ ಬಾಡಿ ಬಿಲ್ಡ್ ಮಾಡುವ ಮುಂಚೆ 98 ಕೆಜಿ ತೂಕ ಇದ್ದರಂತೆ. ವರ್ಕೌಟ್ ಮಾಡುತ್ತಾ 75 ಕೆಜಿಗೆ ತಮ್ಮ ತೂಕವನ್ನ ಇಳಿಸಿಕೊಂಡರಂತೆ.

mamatha 1 | ತನ್ನ ಧ್ವನಿ ಬದಲಾಗಲು ಕಾರಣವೇನು ಎಂದು ತಿಳಿಸಿದ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ ಮಮತಾ. ಹೇಗಿತ್ತು ಗೊತ್ತಾ ಇವರ ಜೀವನ??
ತನ್ನ ಧ್ವನಿ ಬದಲಾಗಲು ಕಾರಣವೇನು ಎಂದು ತಿಳಿಸಿದ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ ಮಮತಾ. ಹೇಗಿತ್ತು ಗೊತ್ತಾ ಇವರ ಜೀವನ?? 2

ಆ ವೇಳೆಯಲ್ಲಿ ಮೃದುವಾಗಿದ್ದ ಮಮತಾ ಸನತ್ ರ ಧ್ವನಿ ಸಂಪೂರ್ಣ ಗಡುಸಾಗಿ ಬದಲಾಯಿತಂತೆ. ಇದು ಒಂದು ರೀತಿಯ ಅಡ್ವಾಂಟೇಜ್ ನನಗೆ, ನನ್ನ ಗಡುಸು ಧ್ವನಿಗೆ ಹೆದರಿ, ಯಾವ ಹುಡುಗರು ನನಗೆ ಹೆದರಿಸುವುದಿಲ್ಲ ಎಂದು ಮಮತಾ ಹೆಮ್ಮೆಯಿಂದ ಹೇಳಿಕೊಂಡರು. ಸದ್ಯ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದ ಸ್ಪರ್ಧಿಯಾಗಿರುವ ಮಮತಾ, ಮೊದಲ ಏಪಿಸೋಡ್ ನಲ್ಲಿ ಬರೋಬ್ಬರಿ 140 ಕೆಜಿ ವೇಟ್ ಲಿಫ್ಟಿಂಗ್ ಮಾಡುವ ಮೂಲಕ ಎಲ್ಲರ ಗಮಧ ಸೆಳೆದರು. ಹಲವಾರು ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ನಲ್ಲಿ ಮಮತಾ ಭಾರತವನ್ನು ಪ್ರತಿನಿಧಿಸಿ, ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.