ಶಾಲಾ ಬಾಲಕಿ ಹಣ್ಣು ಮಾರುತ್ತಿದ್ದನ್ನು ನೋಡಿದ ಉದ್ಯಮಿ, ಕೇವಲ 12 ಹಣ್ಣಿಗೆ ನೀಡಿದ ಹಣ ಎಷ್ಟು ಲಕ್ಷ ಗೊತ್ತಾ ಹಾಗೂ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಜಗತ್ತಿನಲ್ಲಿ ತಾವಾಯಿತು ತಮ್ಮ ಕೆಲಸವಾಯಿತು ಎಂದು ಸ್ವಾರ್ಥಕ್ಕಾಗಿ ಜೀವಿಸುವವರು ಸಂಖ್ಯೆ ಜಾಸ್ತಿ ಎಂಬುದು ನಿಮಗೆ ಗೊತ್ತಿರುತ್ತದೆ ಸ್ನೇಹಿತರು ಯಾಕೆಂದರೆ ಇದು ಕಲಿಯುಗ. ಇಲ್ಲಿ ಪಾಪ-ಪುಣ್ಯ ಕಿಂತ ಹೆಚ್ಚಾಗಿ ತಮ್ಮ ಜೀವನವನ್ನು ತಾವು ನೋಡಿಕೊಳ್ಳುವ ನಿಟ್ಟಿನಲ್ಲಿ ಏನು ಪ್ರಯತ್ನ ಮಾಡುತ್ತೇವೆ ಅದು ಲೆಕ್ಕಕ್ಕೆ ಬರುತ್ತದೆ. ಬನ್ನಿ ಸ್ನೇಹಿತರೆ ಈ ಕಾಲದಲ್ಲಿ ಕೂಡ ಬಡವರ ಕಷ್ಟಕ್ಕೆ ಸ್ಪಂದಿಸುವ ಕರುಣಾಜನಕ ಕಥೆಯೊಂದು ನಿಮಗೆ ಹೇಳುತ್ತೇವೆ.

ಜಾರ್ಖಂಡ್ ನ ಜಮ್ಶೆಡ್ಪುರ ದಲ್ಲಿ ಒಬ್ಬ ಬಡ ಹುಡುಗಿ ಇದ್ದಾಳೆ. ಬಡಕುಟುಂಬದಲ್ಲಿ ಹುಟ್ಟಿದ ಮೇಲೆ ಆಸೆಗಳು ಕೂಡ ಗಗನದೆತ್ತರಕ್ಕೆ ಇರುತ್ತದೆ. ಹುಡುಗರು ಕೂಡ ಸಾಕಷ್ಟು ಒಳ್ಳೆಯ ಶಿಕ್ಷಣವನ್ನು ಪಡೆಯಬೇಕು ನಾನು ಉತ್ತಮ ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಕನಸಿರುತ್ತದೆ. ಆದರೆ ಈ ಆಕಾಶವನ್ನು ಹತ್ತುವ ಕೆಲಸಕ್ಕೆ ಬಡತನ ಕೊಕ್ಕೆ ಆಗಿ ಹಿಂದೆಳೆಯುತ್ತದೆ. ಇದೇ ರೀತಿ ಈ ಹುಡುಗಿಯ ಜೀವನದಲ್ಲೂ ಆಯಿತು. ಬಡ ಹುಡುಗಿ ಕುಟುಂಬ ಹೇಗಿತ್ತೆಂದರೆ ಮೂರು ಹೊತ್ತಿನ ಊಟಕ್ಕೂ ಕೂಡ ಕಷ್ಟಪಟ್ಟು ದುಡಿದರೆ ಮಾತ್ರ ಸಿಗುವಂತಿದ್ದು ಇಲ್ಲವಾದರೆ ಉಪವಾಸವೇ ಗತಿ ಎಂಬಂತಿತ್ತು.

ಇನ್ನು ಲಾಕ್ಡೌನ್ ನಿಂದಾಗಿ ಶಾಲೆಗಳು ಮುಚ್ಚಿದ್ದರಿಂದ ಆನ್ಲೈನ್ ತರಗತಿಗೆ ಹಾಜರಾಗಲು ಆಕೆ ಬಳಿ ಮೊಬೈಲ್ ಅಥವಾ ಇಂಟರ್ನೆಟ್ ಸೌಲಭ್ಯವಿರಲಿಲ್ಲ. ಇದಕ್ಕಾಗಿ ದಿನಾಲು ಬುಟ್ಟಿಗಳಲ್ಲಿ ಮಾವಿನಹಣ್ಣನ್ನು ತಲೆಯ ಮೇಲೆ ಹೊತ್ತುಕೊಂಡು ರಸ್ತೆಯ ಬಳಿ ವ್ಯಾಪಾರವನ್ನು ಮಾಡುತ್ತಿತ್ತು ಹೆಣ್ಣುಮಗು. ಇಷ್ಟು ಮಾತ್ರವಲ್ಲದೆ ಈಕೆ ಊರಿನ ಗಣ್ಯರು ಬಳಿ ತನಗೆ ಆನ್ಲೈನ್ ಕ್ಲಾಸ್ ಗಳಿಗೆ ಹಾಜರಾಗಲು ಮೊಬೈಲ್ ಕೊಡಿಸುವಂತೆ ಕೋರಿಕೆ ಮಾಡಿಕೊಂಡಿದ್ದರು ಕೂಡ ಯಾರು ಈಕೆಯ ಸಹಾಯಕ್ಕೆ ಬಂದಿರಲಿಲ್ಲ.

ಆದರೆ ಈ ಕುರಿತಂತೆ ಯಾರೋ ಒಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಸಹಾಯಮಾಡುವಂತೆ ಪೋಸ್ಟ್ ಮಾಡಿದ್ದರು ಕೂಡ ಯಾರು ಅದಕ್ಕೆ ಸಮಂಜಸವಾಗಿ ಪ್ರತಿ ಸ್ಪಂದಿಸಲಿಲ್ಲ. ಈ ಹುಡುಗಿಯ ಪ್ರತಿದಿನದ ಮಾವಿನಹಣ್ಣಿನ ಮಾರಾಟ ನಡೆದಿತ್ತು. ಆದರೆ ಈ ಮಾವಿನಹಣ್ಣಿನ ಮಾರಾಟದಿಂದಾಗಿ ಆಕೆಯ ಸಾವಿರಾರು ರೂಪಾಯಿಯ ಮೊಬೈಲ್ ತೆಗೆದುಕೊಳ್ಳುವ ಕನಸು ಕನಸಾಗೇ ಉಳಿದಿತ್ತು. ಆದರೆ ಒಂದು ದಿನ ಏನಾಯಿತು ಗೊತ್ತಾ ಸ್ನೇಹಿತರೆ ಹೇಳುತ್ತೇವೆ ಬನ್ನಿ.

ಹೌದು ಸ್ನೇಹಿತರೆ ಮುಂಬೈನ ದೊಡ್ಡ ಸಂಸ್ಥೆಯ ನಿರ್ದೇಶಕರಾದ ಅಮಯ ಹೇಟೆ ರವರು ಈ ದಾರಿಯಾಗಿ ಬಂದಾಗ ಆ ಹುಡುಗಿ ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದನ್ನು ಕಂಡರು. ಮೊದಲೇ ತಿಳಿದಂತೆ ಯವರು ಅಶಕ್ತ ಜನರಿಗೆ ದಾನ ಮಾಡುವುದರಲ್ಲಿ ಎತ್ತಿದ ಕೈ. ಈ ಹುಡುಗಿಯ ಕಷ್ಟವನ್ನು ಅರಿತು ಆಕೆ ಬಳಿ ಇದ್ದ 12 ಮಾವಿನ ಹಣ್ಣುಗಳಿಗೆ 1. 20 ಲಕ್ಷ ರೂಪಾಯಿ ನೀಡಿ ಆ ಹಣವನ್ನು ಆಕೆಯ ತಂದೆಯ ಖಾತೆಗೆ ವರ್ಗಾಯಿಸಿ ಅದರಿಂದ ಮೊಬೈಲ್ ಹಾಗೂ ಇಂಟರ್ನೆಟ್ ಸೌಲಭ್ಯವನ್ನು ಹಾಕಿಸಿಕೊಂಡು ಆನ್ಲೈನ್ ತರಗತಿಗೆ ಹಾಜರಾಗಿ ಎಂಬುದಾಗಿ ಹೇಳಿದರು.

ಮಾತ್ರವಲ್ಲದೆ ವಿದ್ಯಾಭ್ಯಾಸಕ್ಕಾಗಿ ಇನ್ನು ಏನಾದರೂ ಸಹಾಯ ಬೇಕಾಗಿದ್ದಲ್ಲಿ ತಪ್ಪದೆ ನನ್ನನ್ನು ಸಂಪರ್ಕಿಸಿ ಎಂಬ ಭರವಸೆಯನ್ನು ಕೂಡ ನೀಡಿದರು. ಶಿಕ್ಷಣ ಕುರಿತಾಗಿ ಇಷ್ಟೊಂದು ಸಹಾಯವನ್ನು ನಿಸ್ವಾರ್ಥವಾಗಿ ಮಾಡುವವರು ನಮ್ಮ ಈ ಕಾಲದಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಅಂಥವರಲ್ಲಿ ಇವರು ಕೂಡ. ಇಂಥವರು ನಮ್ಮ ಸಮಾಜದ ಜಾಸ್ತಿ ಇದ್ದಷ್ಟು ನಮ್ಮ ಸಮಾಜ ರಾಮರಾಜ್ಯದ ಪರಿಕಲ್ಪನೆಯಲ್ಲಿ ಮುಂದುವರಿಯುವುದು ಖಂಡಿತ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡದೆ ಹಂಚಿಕೊಳ್ಳಿ.

Comments are closed.