ಮಂಜು ಜೀವನದ ಬದಲಾಯಿಸಿದ ಬಿಗ್ ಬಾಸ್ ನಿಂದ 53 ಲಕ್ಷ ಅಲ್ಲ, ಮಂಜು ನಿಜವಾಗಲೂ ಗೆದ್ದಿದೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಗೆದ್ದವರಿಗೆ ಖಂಡಿತವಾಗಿಯೂ ಜೀವನದಲ್ಲಿ ಮುಂದೆ ಉತ್ತಮ ಸುವರ್ಣಾವಕಾಶ ಗಳು ಹುಡುಕಿಕೊಂಡು ಬರುತ್ತವೆ ಎಂಬುದು ಸುಳ್ಳಲ್ಲ. ಈಗಾಗಲೇ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಮುಗಿದಿದ್ದು ಇದರ ವಿನ್ನರ್ ಆಗಿ ಮಂಜು ಪಾವಗಡ ರವರು ಹೊರಹೊಮ್ಮಿದ್ದಾರೆ. ಹೌದು ಸ್ನೇಹಿತರೆ ತಮ್ಮ ಊರು ಪಾವಗಡದಿಂದ ಬೆಂಗಳೂರಿನ ಜೆಪಿ ನಗರಕ್ಕೆ ಬಂದು ಅಲ್ಲಿ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡಿಕೊಂಡು ತನ್ನ ಜೀವನವನ್ನು ನಡೆಸಿಕೊಳ್ಳುತ್ತಿದ್ದ ಬಡಪಾಯಿ ಮಂಜು ಪಾವಗಡ ರವರು ನಂತರ ತಮ್ಮ ಪ್ರತಿಭೆಯ ಮೂಲಕ ಮಜಾ ಭಾರತ ಕಾರ್ಯಕ್ರಮಕ್ಕೆ ಆಯ್ಕೆಯಾಗಿ ಅಲ್ಲಿ ತಮ್ಮ ಮನರಂಜನಾತ್ಮಕ ಪ್ರತಿಭೆಯ ಮೂಲಕ ಕರ್ನಾಟಕದ ಪ್ರೇಕ್ಷಕರನ್ನು ಗೆದ್ದರು.

ನಂತರ ಅಲ್ಲಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಬಿಗ್ ಬಾಸ್ ಗೆ ಆಯ್ಕೆಯಾದರು. ಮೊದಲಿಗೆ ದಿವ್ಯ ಸುರೇಶ್ ರವರೊಂದಿಗೆ ಕಾಣಿಸಿಕೊಂಡು ಪ್ರೇಕ್ಷಕರ ಸಿಟ್ಟಿಗೆ ಕಾರಣರಾಗಿದ್ದರು. ನಂತರ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನ ಮೂಲಕ ಎಲ್ಲರೊಂದಿಗೆ ಬೆರೆಯುವ ಮೂಲಕ ಪ್ರೇಕ್ಷಕರ ನೆಚ್ಚಿನ ಅಭ್ಯರ್ಥಿಯಾಗಿ ಕಾಣಿಸಿಕೊಂಡರು. ಇನ್ನು ಬಿಗ್ ಬಾಸ್ ವಿಜೇತರಾಗಿ ಹೊರಹೊಮ್ಮಿರುವ ಮಂಜು ಪಾವಗಡ ರವರಿಗೆ 53 ಲಕ್ಷ ಬಹುಮಾನವನ್ನು ವಾಹಿನಿ ನೀಡಿದ್ದು ಅದರಲ್ಲಿ ಅವರಿಗೆ ಪೂರ್ಣವಾಗಿ ಸಿಕ್ಕಿಲ್ಲ ಯಾಕೆ ಮತ್ತು ಎಷ್ಟು ಸಿಕ್ಕಿದೆ ಎಂದು ಕಾರಣವನ್ನು ತಿಳಿದುಕೊಳ್ಳಿ.

ಹೌದು ಸ್ನೇಹಿತರೆ 45 ಲಕ್ಷಗಳ ಭರ್ಜರಿ ಮತ ದಿಂದಾಗಿ ಗೆದ್ದಿರುವ ಮಂಜು ಪಾವಗಡ ರವರಿಗೆ ಕಲರ್ಸ್ ಕನ್ನಡ ವಾಹಿನಿಯ ಪರವಾಗಿ 53 ಲಕ್ಷ ರೂಪಾಯಿ ಮೊದಲನೆಯ ಬಹುಮಾನವಾಗಿ ದೊರೆತಿದೆ. ಇನ್ನು ಇದರಲ್ಲಿ 34% ಟ್ಯಾಕ್ಸ್ ಅಮೌಂಟ್ ಅನ್ನು ಹೊರತುಪಡಿಸಿ ಮಂಜು ಪಾವಗಡ ರವರಿಗೆ 34 ಲಕ್ಷದ 92 ಸಾವಿರ ರೂಪಾಯಿ ದೊರಕಿದೆ. ಮಾತ್ರವಲ್ಲದೆ 17 ವಾರದ ಸಂಭಾವನೆಯಾಗಿ 5ಲಕ್ಷದ 10ಸಾವಿರ ರೂಪಾಯಿ ದೊರಕಿದೆ. ಒಟ್ಟು ಸರಿಸುಮಾರು 40 ಲಕ್ಷ ರೂಪಾಯಿಯಷ್ಟು ಸಂಭಾವನೆಯನ್ನು ಮಂಜು ಪಾವಗಡ ರವರು ಬಿಗ್ ಬಾಸ್ ವಿಜೇತರಾಗಿದ್ದಕ್ಕಾಗಿ ಪಡೆದಿದ್ದಾರೆ ಎನ್ನಬಹುದಾಗಿದೆ.

Comments are closed.