ಮುದ್ದುಮೊಗದ ಚೆಲುವೆ ಮೀರಾ ಜಾಸ್ಮಿನ್ ರವರು ಕೇವಲ ದುಡ್ಡಿಗಾಗಿ ತನ್ನ ಜೀವನವನ್ನೇ ಹಾಳು ಮಾಡಿಕೊಂಡದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಿನಿಮಾ ರಂಗದಲ್ಲಿ, ತಮ್ಮ ನಟನಾ ವೃತ್ತಿ ಬದುಕಿನಲ್ಲಿ ಸಾಕಷ್ಟು ಏಳ್ಗೆಯನ್ನ ಕಂಡವರು, ಇಲ್ಲಿಯೇ ಬೆಳೆದವರು, ಹೆಸರು ಮಾಡಿದವರು ಹಲವಾರು ನಟ ನಟಿಯರು. ಇವರೆಲ್ಲರೂ ವೃತ್ತಿ ಬದುಕಿನಲ್ಲಿ ಸಕ್ಸೆಸ್ ಕಂಡಿದ್ದರೂ ಕೂಡ ವಯಕ್ತಿಕ ಬದುಕಿನಲ್ಲಿ ಸಾಕಷ್ಟು ಎಡವಟ್ಟುಗಳನ್ನ ಮಾಡಿಕೊಂಡಿರುತ್ತಾರೆ. ಅದರಲ್ಲೂ ಮದುವೆ ಪ್ರೀತಿ ಅನ್ನುವಂಥ ವಿಷಯಕ್ಕೆ ಬಂದರೆ ಹಲವಾರು ನಟ ನಟಿಯರು ತಮ್ಮ ಭವಿಷ್ಯವನ್ನೇ ಹಾಳುಮಾಡಿಕೊಂಡು ಬಿಟ್ಟಿದ್ದಾರೆ. ಇಂಥ ತಪ್ಪು ಹೆಜ್ಜೆಯಿಟ್ಟು ಸಂಸಾರವನ್ನೇ ನರಕಮಾಡಿಕೊಂಡವರಲ್ಲಿ ದಕ್ಷಿಣಾ ಭಾರತದ ಮುದ್ದು ಮೊಗದ ಚೆಲುವೆ ಮೀರಾ ಜಾಸ್ಮಿನ್ ಕೂಡಾ ಒಬ್ಬರು.

ಮೀರಾ ಜಾಸ್ಮಿನ್ ಅವರನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳೆ? ಮೂಲತ ಕೇರಳದವರಾದ ಮೀರಾ ಕನ್ನಡವೂ ಸೇರಿದಂತೆ ಮಲಯಾಳಂ, ತಮಿಳು ತೆಲುಗು ಭಾಷೆಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಅವರ ಮುಖದಲ್ಲಿನ ಮುಗ್ಧತೆ, ಹಾಗೂ ನೈಜ ಸೌಂದರ್ಯ ಜನರ ಮನಸ್ಸನ್ನು ಎಷ್ತು ಸೆಳೆದಿತ್ತೆಂದರೆ ಒಂದು ಕಾಲದಲ್ಲಿ ಒಂದು ದಿನವೂ ಫ್ರೀಯಾಗಿರದ ಟಾಪ್ ನಟಿ ಇವರಾಗಿದ್ದರು. ಇನ್ನು ಇವರು ನಟನೆಗೆ ಬರುವ ಹೊತ್ತಿಗೆ ಗ್ಲಾಮರ್ ಎನ್ನುವುದು ಸಿನಿಮಾ ರಂಗದಲ್ಲಿ ಹೆಚ್ಚಾಗಿದ್ದರೂ ಕೂಡ ಯಾವುದೇ ಗ್ಲಾಮರಸ್ ನಟನೆ ಇಲ್ಲದೇ ಸಹಜ ನಟನೆಯಿಂದ ಮಿಂಚಿದ್ದವರು ಮೀರಾ. ಇನ್ನು ನ್ಯಾಶನಲ್ ಅವಾರ್ಡ್ ಗಳನ್ನೂ ಮುಡಿಗೇರಿಸಿಕೊಂಡಿದ್ದ ಮೀರಾ ಜಾಸ್ಮಿನ್ ಅವರ ವಯಕ್ತಿಯ ಬದುಕು ಮಾತ್ರ ಮೂರಾಬಟ್ಟೆಯಾಗಿದ್ದು ಹೇಗೆ ಗೊತ್ತೆ?

ಮೀರಾ ಜಾಸ್ಮಿನ್ ಬಹು ಬೇಡಿಕೆಯ ನಟಿ ಎನಿಸಿಕೊಂಡಿರುವಾಗಲೇ ರಾಜೇಶ್ ಎನ್ನುವವರನ್ನು ಪ್ರೀತಿಸಿ ಅವರನ್ನೇ ಮದುವೆಯಾಗುವುದಾಗಿ 2008ರಲ್ಲಿ ತಿಳಿಸುತ್ತಾರೆ. ಆದರೆ ಅದೇನಾಯ್ತೋ ಗೊತ್ತಿಲ್ಲ, 2014ರ ಹೊತ್ತಿಗೆ ತಾವು ಶ್ರೀಮಂತರಾಗಿದ್ದ ಅನೀಲ್ ಜಾನ್ ಎನ್ನುವವರನ್ನು ಮದುವೆಯಾಗುತ್ತಿದ್ದೇನೆ ಎಂದು ತಿಳಿಸುತ್ತಾರೆ. ಇದಕ್ಕೆ ಮನೆಯವರ ವಿರೋಧವನ್ನು ಕಟ್ಟಿಕೊಳ್ಳುತ್ತಾರೆ. ಅನೀಲ್ ಅವರಿಗೆ ಈಗಾಗಲೇ ಮದುವೆಯಾಗಿದ್ದು ಮೊದಲ ಹೆಂಡತಿಗೆ ವಿಚ್ಛೇಧನ ಕೊಡುವುದರಲ್ಲಿರುತ್ತಾರೆ. ಇನ್ನು ಅನೀಲ್ ಅವರನ್ನು ಎಲ್ಲರ ವಿರೋಧದ ನಡುವೆಯೂ ಅನೀಲ್ ಅವರನ್ನು ಮದುವೆಯಾಗಿ ಭಾರತ ತೊರೆಯುತ್ತಾರೆ. ಆದರೆ ಸ್ವಲ್ಪ ಸಮಯದ ನಂತರ ನಟನೆಯನ್ನು ಮುಂದುವ್ರೆಸುವುದಾಗಿ ಹೇಳಿದಾಗ ಅನೀಲ್ ಒಪ್ಪುವುದಿಲ್ಲ ಈ ಕಾರಣಕ್ಕೆ ಜಗಳವಾಗತ್ತೆ. ಅನೀಲ್ ತನ್ನ ಮೊದಲನೇಯ ಪತ್ನಿಯ ಜೊತೆ ಮತ್ತೆ ರಿಲೇಶನ್ ಶಿಪ್ ಇಟ್ಟುಕೊಳ್ಳುತ್ತಾನೆ. ಇತ್ತ ಗಂಡನೊಂದಿಗೆ ಜಗಳವಾಡಿ ಮೀರಾ ಜಾಸ್ಮಿನ್ ಭಾರತಕ್ಕೆ ಮರಳುತ್ತಾರೆ.

ಭಾರತಕ್ಕೆ ಗಂಡನನ್ನು ಬಿಟ್ಟು ಮರಳಿ ಬಂದ ಜಾಸ್ಮಿನ್ ಮೊದಮೊದಲು ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದು ಅವರ ಸಂಬಂಧದ ಬಗ್ಗೆ ಹೇಳಿದ್ದರೂ ಅವರು ವಿಚ್ಛೇಧನ ಪಡೆಯುತ್ತಿರುವ ವಿಷಯ ಜಗಜ್ಜಾಹೀರಾತಾಗಿರುತ್ತೆ. ಇನ್ನು ಮೀರಾ ಜಾಸ್ಮಿನ್ ಗೆ ಅಷ್ಟು ಹೆಚ್ಚಾಗಿ ಸಿನಿಮಾ ಅವಕಾಶಗಳೂ ಸಿಗುವುದಿಲ್ಲ. ಇತ್ತೀಚಿಗೆ ಮೀರಾ ಒಂದು ಚಿತ್ರಕ್ಕೆ ಸಹಿ ಮಾಡಿದ್ದಿ ಚಿತ್ರೀಕರಣ ಇನ್ನು ಶುರುವಾಗಬೇಕಷ್ಟೇ. ನೋಡಿ ಸ್ನೇಹಿತರೆ, ಒಂದೊಮ್ಮೆ ತೆಗೆದುಕೊಂಡ ತಪ್ಪು ನಿರ್ಧಾರಗಳು ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿಬಿಡುತ್ತೆ ಎನ್ನುವುದಕ್ಕೆ ಮೀರಾ ಜಾಸ್ಮಿನ್ ಒಂದು ಜ್ವಲಂತ ಉದಾಹರಣೆ.

Comments are closed.