ಎಲ್ಲರೂ ಕೇಳಿ ಇಷ್ಟ ಪಟ್ಟು ಮಾಡಿಸಿಕೊಳ್ಳುವ ಮೆಂತ್ಯ ಸೊಪ್ಪಿನ ಬಿರಿಯಾನಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಮೆಂತ್ಯ ಸೊಪ್ಪಿನ ಬಿರಿಯಾನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಮೆಂತ್ಯ ಸೊಪ್ಪಿನ ಬಿರಿಯಾನಿ ಮಾಡಲು ಬೇಕಾಗುವ ಪದಾರ್ಥಗಳು: 1 ಕಟ್ಟು ಮೆಂತ್ಯ ಸೊಪ್ಪು, 2 ಬಟ್ಟಲು ಅಕ್ಕಿ, 2 ಈರುಳ್ಳಿ, 2 ಟಮೋಟೊ, 1 ಚಮಚ ಧನಿಯಾ ಪುಡಿ, 1 ಚಮಚ ಅಚ್ಚ ಕಾರದ ಪುಡಿ, 1 ಚಮಚ ಗರಂ ಮಸಾಲಾ, ಸ್ವಲ್ಪ ಅರಿಶಿನ ಪುಡಿ, 4 ಚಮಚ ಎಣ್ಣೆ, 2 ಚಮಚ ತುಪ್ಪ, 2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 10 – 15 ಗೋಡಂಬಿ, ಸ್ವಲ್ಪ ಸೋಂಪುಕಾಳು, 2 ಲವಂಗ,2 ಏಲಕ್ಕಿ, 1 ಚಕ್ಕೆ, 1 ಸ್ಟಾರ್ ಹೂವು, 2 ಅನಾನಸ್ ಮೊಗ್ಗು, ಸ್ವಲ್ಪ ಕಸುರಿ ಮೇತಿ, ರುಚಿಗೆ ತಕ್ಕಷ್ಟು ಉಪ್ಪು.

ಮೆಂತ್ಯ ಸೊಪ್ಪಿನ ಬಿರಿಯಾನಿ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲಿಗೆ ಅಕ್ಕಿ ಹಾಗೂ ನೀರನ್ನು ಹಾಕಿ 10 ನಿಮಿಷಗಳ ಕಾಲ ನೆನೆಯಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಕುಕ್ಕರನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಚಕ್ಕೆ, ಲವಂಗ, ಏಲಕ್ಕಿ, ಸ್ಟಾರ್ ಹೂವು, ಅನಾನಸ್ ಮೊಗ್ಗು, ಸೋಂಪುಕಾಳು, ಕಸೂರಿ ಮೇತಿ, ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ 30 ಸೆಕೆಂಡ್ ಗಳ ಕಾಲ ಫ್ರೈ ಮಾಡಿಕೊಳ್ಳಿ. ಇದಕ್ಕೆ ಸಣ್ಣಗೆ ಹಚ್ಚಿದ ಮೆಂತ್ಯ ಸೊಪ್ಪನ್ನು ಹಾಕಿ 4 – 5 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ ಟೊಮೆಟೊವನ್ನು ಹಾಕಿ ಸಾಫ್ಟ್ ಆಗುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆಅಚ್ಚಕಾರದಪುಡಿ, ದನಿಯಪುಡಿ, ಗರಂಮಸಾಲ, ಅರಿಶಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 30 ಸೆಕೆಂಡುಗಳ ಕಾಲ ಚೆನ್ನಾಗಿ ಮಾಡಿಕೊಳ್ಳಿ. ನಂತರ ಇದಕ್ಕೆ 3 ಬಟ್ಟಲು ನೀರು, ನೆನೆಸಿದ ಅಕ್ಕಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಸಣ್ಣ ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ ತುಪ್ಪವನ್ನು ಹಾಕಿ ಕಾಯಲು ಬಿಡಿ. ತುಪ್ಪ ಕಾದ ನಂತರ ಗೋಡಂಬಿಯನ್ನು ಹಾಕಿ ಫ್ರೈ ಮಾಡಿಕೊಂಡು ಕುಕ್ಕರ್ ಗೆ ಹಾಕಿಕೊಂಡು ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳವನ್ನು ಮುಚ್ಚಿ 2 ವಿಷಲ್ ಕೂಗಿಸಿಕೊಂಡರೆ ಮೆಂತ್ಯ ಸೊಪ್ಪಿನ ಬಿರಿಯಾನಿ ಸವಿಯಲು ಸಿದ್ದ.

Comments are closed.