ಒಂದು ಲೋಟ ಮೆಂತ್ಯ ನೀರಿನಿಂದ ದಿನವನ್ನು ಪ್ರಾರಂಭಿಸಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಾವೆಲ್ಲರೂ ಬೇಡಿಕೊಳ್ಳುವುದು ಪ್ರತಿದಿನ ಒಂದೇ. ನಮ್ಮ ದಿನ ಉತ್ತಮವಾದ ಆರಂಭವನ್ನು ಪಡೆದುಕೊಳ್ಳಲಿ ಎಂದು. ಆರಂಭ ಉತ್ತಮವಾಗಿದ್ದರೆ ದಿನವೆಲ್ಲಾ ಒಳ್ಳೆಯ ಅಟ್ಮಾಸ್ಫಿಯರ್ ನಮ್ಮ ಸುತ್ತ ಇರುತ್ತದೆ ಎಂಬುದು ನಮ್ಮೆಲ್ಲರ ನಂಬಿಕೆ. ಹಾಗೆ ಇದು ಬಾಹ್ಯ ಪ್ರಪಂಚದಲ್ಲಿ ಮಾತ್ರವಲ್ಲದೆ ನಮ್ಮ ದೇಹದಲ್ಲಿ ಕೂಡ ಶುಭಾರಂಭ ನಡೆದರೆ ಅದು ದಿನವೆಲ್ಲ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎಂಬುದು ನೆನಪಿರಲಿ ಸ್ನೇಹಿತರೆ.

ಹೌದು ಬ್ಯುಸಿ ದುನಿಯಾದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ದೊಡ್ಡ ಕೆಲಸವಾಗಿ ಹೋಗಿದೆ. ಕೆಲವರಿಗೆ ಹಣದ ಅಭಾವವಾದರೆ ಇನ್ನು ಕೆಲವರಿಗೆ ಸಮಯದ ಅಭಾವ. ಇದನ್ನು ಸರಿದೂಗಿಸಿದ ರಒಳಗೆ ಅದಾಗಲೇ ನಮ್ಮ ಆರೋಗ್ಯ ಹದಗೆಟ್ಟಿರುತ್ತದೆ. ಆದರೆ ಇಂದು ನಾವು ನಿಮಗೆ ಉತ್ತಮ ಆರೋಗ್ಯ ಶೈಲಿಯನ್ನು ಕಾಪಾಡಿಕೊಳ್ಳುವ ವಿಧವೊಂದನ್ನು ಹೇಳಿಕೊಡುತ್ತಿದ್ದೇವೆ ಬನ್ನಿ.

ಹೌದು ನಾವಿಂದು ಮಾತನಾಡುತ್ತಿರುವುದು ಮೆಂತೆ ಬೀಜ ಹಾಗುವ ಮೆಂತೆ ಪುಡಿ ಬಗ್ಗೆ. ಇದು ಅಡುಗೆಯಲ್ಲಿ ರುಚಿ ಹೆಚ್ಚಿಸಲು ಎಷ್ಟು ಮುಖ್ಯವೋ ಹಾಗೆ ದೇಹದಲ್ಲಿ ಆರೋಗ್ಯದ ಉತ್ತಮ ಹಂತ ತಲುಪುವಲ್ಲಿ ತುಂಬಾ ಹಾಗು ತುಂಬಾ ಪ್ರಯೋಜನಕಾರಿಯಾಗಿದೆ. ಅಡುಗೆ ಪದಾರ್ಥಗಳನ್ನು ಮೆಂತೆಯನ್ನು ಉಪಯೋಗಿಸುವುದರಿಂದ ಚರ್ಮ ಹಾಗೂ ಕೂದಲಿನ ರೋಗಕ್ಕೆ ಸಂಬಂಧಿಸಿದಂತೆ ಹಲವಾರು ಪರಿಹಾರಗಳನ್ನು ನಾವು ನಮಗೆ ತಿಳಿಯದಂತೆ ನಾವು ಪಡೆಯುತ್ತೇವೆ. ಆದರೆ ಮೆಂತ್ಯ ನೀರಿನಿಂದ ನಾವು ಪಡೆಯುವ ಉಪಯೋಗಗಳು ಇನ್ನು ಸುಮಾರು ಇವೆ. ಮೆಂತೆ ನೀರನ್ನು ಮಾಡುವುದು ಹೇಗೆ ಅದರಿಂದ ಆಗುವ ಉಪಯೋಗಗಳು ಏನು ಎಂಬುದನ್ನು ನಿಮಗೆ ಒಂದೊಂದಾಗಿ ಹೇಳುತ್ತೇವೆ ಬನ್ನಿ.

ಮೊದಲಿಗೆ ಮೆಂತ್ಯೆ ನೀರನ್ನು ತಯಾರಿಸುವ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ ಬನ್ನಿ. ಮೊದಲಿಗೆ ಮೆಂತೆ ಬೀಜವನ್ನು ಬಣ್ಣ ಬದಲಾಗುವವರೆಗೂ ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದನ್ನು ಕುಟ್ಟಿ ಚೆನ್ನಾಗಿ ಪುಡಿಮಾಡಿಕೊಳ್ಳಿ. ಮುಂಜಾನೆ ಮುಂಜಾನೆಯೇ ಅದನ್ನು ಬಿಸಿ ನೀರಿನೊಂದಿಗೆ ಒಂದು ಚಮಚದಷ್ಟು ಸೇರಿಸಿಕೊಂಡು ಸೇವಿಸಿ. ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳಿದರೆ ಇದರಿಂದಾಗಿ ನಿಮ್ಮ ಹೊಟ್ಟೆಯಲ್ಲಿ ಫೈಬರ್ ಅಂಶ ಜಾಸ್ತಿಯಾಗಿ ಹೊಟ್ಟೆ ಪೂರ್ಣವಾದಂತೆ ಭಾಸವಾಗುತ್ತದೆ.

ಇದರಿಂದಾಗಿ ನಿಮ್ಮ ತೂಕವು ಕಡಿಮೆಯಾಗುತ್ತದೆ ಹಾಗೂ ನಿಮ್ಮ ಜಂಕ್ ಫುಡ್ ತಿನ್ನುವ ಅಭ್ಯಾಸಗಳು ಕ್ರಮೇಣವಾಗಿ ದೂರವಾಗುತ್ತದೆ. ಇನ್ನು ನಿಮ್ಮ ಕೂದಲಿನ ಬೆಳವಣಿಗೆಗೆ ಇದು ಸಮಗ್ರ ಪೌಷ್ಟಿಕಾಂಶವನ್ನು ನೀಡುತ್ತದೆ. ಇದರಿಂದಾಗಿ ದೇಹದ ಜೀರ್ಣಕ್ರಿಯೆ ಕೂಡ ಸರಿಯಾಗಿ ನಡೆದು ಮಲಬದ್ಧತೆ ಹಾಗೂ ಅಜೀರ್ಣತೆ ಸಂಪೂರ್ಣವಾಗಿ ದೂರವಾಗುತ್ತದೆ. ಇನ್ನು ಮೆಂತ್ಯ ದಲ್ಲಿರುವ ಅಂಶಗಳು ನಿಮ್ಮ ದೇಹದಲ್ಲಿರುವ ಇನ್ಸುಲಿನ್ ಸೋರಿಕೆಯನ್ನು ಕ್ರಮೇಣವಾಗಿ ಕಡಿಮೆ ಮಾಡಿ ನಿಮ್ಮ ದೇಹದಲ್ಲಿ ಮಧುಮೇಹವನ್ನು ಬಹುತೇಕ ಅಂಶ ಕಡಿಮೆ ಮಾಡುತ್ತದೆ.

ಇನ್ನು ಮೆಂತೆ ನೀರನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿರುವ ಉಷ್ಣಾಂಶ ಕಡಿಮೆಯಾಗಿ ದೇಹ ಸಮತೋಲನ ಸ್ಥಿತಿಯಲ್ಲಿರುತ್ತದೆ. ಇಷ್ಟು ಮಾತ್ರವಲ್ಲದೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಪಾನೀಯ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ದುಡ್ಡು ಕೊಟ್ಟು ಬೇರೆಬೇರೆ ಅಂಗಡಿಯಲ್ಲಿ ಯಾವ್ಯಾವ ಪಾನೀಯಗಳನ್ನು ಸೇವಿಸುವ ಬದಲು ಮನೆಯಲ್ಲಿ ಮಾಡುವ ಈ ಪಾನೀಯವನ್ನು ಸೇವಿಸಿ ಆರೋಗ್ಯ ಕರ ಜೀವನವನ್ನು ಜೀವಿಸುವುದು ಒಳ್ಳೆಯದಲ್ಲವೇ.

ನೋಡಿದ್ರಲ್ಲ ಸ್ನೇಹಿತರೆ ಒಂದು ಮೆಂತೆಯ ಪಾನೀಯ ದಿಂದಾಗಿ ಎಷ್ಟೆಲ್ಲ ಉಪಯೋಗಗಳು ನಿಮ್ಮ ದೇಹಕ್ಕೆ ಸಿಗುತ್ತಿದೆ ಎಂದು. ಇಂತಹ ಹಲವಾರು ಮನೆಮದ್ದು ಹಾಗೂ ಆಯುರ್ವೇದಿಕ ಮೂಲದ ಔಷಧಗಳು ನಿಮ್ಮ ದಿನನಿತ್ಯದ ಆರೋಗ್ಯ ಕ್ರಮವನ್ನು ಸುಧಾರಿಸಿ ಉತ್ತಮ ಆರೋಗ್ಯ ಕ್ರಮವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯಮಾಡುತ್ತದೆ. ಖಂಡಿತವಾಗಿ ಇದನ್ನು ನೀವು ಉಪಯೋಗಿಸಿ ಹಾಗೂ ನಿಮ್ಮ ವರೆಗೂ ಉಪಯೋಗಿಸಲು ಹೇಳಿ. ಈ ಕುರಿತಂತೆ ಉಪಯೋಗಿಸಿದ ಮೇಲೆ ನಮ್ಮೊಂದಿಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೇ ಹಂಚಿಕೊಳ್ಳಿ

Comments are closed.