ಫ್ಲೈಯಿಂಗ್ ಸಿಖ್ ಮಿಲ್ಕಾ ಸಿಂಗ್ ರನ್ನೇ ಓಟದಲ್ಲಿ ಸೋಲಿಸಿದ್ದ ಕನ್ನಡಿಗ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಕಂಡ ಹೆಮ್ಮೆಯ ಅಥ್ಲಿಟ್ ಮಿಲ್ಕಾ ಸಿಂಗ್ ಇತ್ತಿಚೆಗಷ್ಟೇ ನಮ್ಮನ್ನ ಅಗಲಿದ ಸುದ್ದಿ ಓದಿರುತ್ತಿರಿ. ಅವರು ಒಲಂಪಿಕ್ಸ್ ನಲ್ಲಿ ಕೆಲವೇ ಕೆಲವು ಸೆಕೆಂಡುಗಳ ಅಂತರದಲ್ಲಿ ಕಂಚಿನ ಪದಕವನ್ನ ಮಿಸ್ ಮಾಡಿಕೊಂಡಿದ್ದೇ, ಇವತ್ತಿನವರೆಗೂ ಭಾರತ ಒಲಂಪಿಕ್ಸ್ ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಮಾಡಿದ ಶ್ರೇಷ್ಠ ಸಾಧನೆಯಾಗಿದೆ. ಮಿಲ್ಕಾ ಸಿಂಗ್ ಸಹ ತಮ್ಮ ಜೀವಿತಾವಧಿಯಲ್ಲಿ ಭಾರತೀಯರು ಒಲಂಪಿಕ್ಸ್ ವಿಭಾಗದಲ್ಲಿ ಚಿನ್ನ ಗೆಲ್ಲಬೇಕು ಎಂದು ತಮ್ಮ ಹೆಬ್ಬಯಕೆ ತೋಡಿಕೊಂಡಿದ್ದರು. ಈಗ ಅಂತಹ ಶ್ರೇಷ್ಠ ಮಿಲ್ಕಾ ಸಿಂಗ್ ರನ್ನ ರನ್ನಿಂಗ್ ರೇಸ್ ನಲ್ಲಿ ಒಬ್ಬ ಕನ್ನಡಿಗ ಸೋಲಿಸಿದ್ದರು ಎಂಬ ಮಾಹಿತಿ ಹೊರಗೆ ಬಂದಿದೆ.

ಅದು 1951 ರಲ್ಲಿ ನಡೆದ 100 ಮೀಟರ್ ರನ್ನಿಂಗ್ ರೇಸ್ ನಲ್ಲಿ ಈ ಕನ್ನಡಿಗ 10.69 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರೇ, ಅದೇ ಮಿಲ್ಕಾ ಸಿಂಗ್ 10.75 ಸೆಕೆಂಡುಗಳಲ್ಲಿ ತಲುಪಿದ್ದರು. ಅಷ್ಟಕ್ಕೂ ಆ ಕನ್ನಡಿಗ ಯಾರು ಎಂಬ ಪ್ರಶ್ನೆಗೆ ಉತ್ತರವನ್ನ ತಿಳಿಯೋಣ ಬನ್ನಿ.

ಅವರು ಬೇರೆ ಯಾರೂ ಅಲ್ಲ ಕೊಡಗಿನ ವೀರ ಯೋಧ ಅಯ್ಯಣ್ಣ. ಕೊಡಗು ಜಿಲ್ಲೆ ಅಮ್ಮತಿಯಲ್ಲಿರುವ ಕವಾಡಿ ಗ್ರಾಮದಿಂದ ಬಂದ ಅಯ್ಯಣ್ಣ ಆಗಸ್ಟ್ 2, 1929 ರಲ್ಲಿ ಜನಿಸಿದರು. ಬಾಲ್ಯದಿಂದಲೇ ಕ್ರೀಡಾಪಟುವಾಗಿದ್ದ ಅಯ್ಯಣ್ಣ ಮುಂದೆ ಸೇನೆಯಲ್ಲಿ ಫಿರಂಗಿ ವಿಭಾಗದಲ್ಲಿ ಕೆಲಸಕ್ಕೆ ಸೇರಿದರು. ನಂತರ ಇವರ ಕ್ರೀಡಾ ಕ್ಷಮತೆಯನ್ನು ಗಮನಿಸಿದ ಹಿರಿಯ ಅಧಿಕಾರಿಗಳು , ಸೇನೆಯ ಕರ್ತವ್ಯದ ನಡುವೆಯೂ ಅವರಿಗೆ ಓಟದ ತರಬೇತಿ ನೀಡಿದರು. ನಂತರ ಅಯ್ಯಣ್ಣ ಒರ್ವ ಕ್ರೀಡಾಪಟುವಾಗಿ ಸಾಬೀತು ಪಡಿಸಿದರು. ಹಾರುವ ತಟ್ಟೆ ಎಂದು ಹೆಸರು ಪಡೆದಿದ್ದ ಮಿಲ್ಕಾ ಸಿಂಗ್ ರನ್ನೇ ರನ್ನಿಂಗ್ ರೇಸ್ ನಲ್ಲಿ ಸೋಲಿಸಿ ಎಲ್ಲರಿಂದಲೂ ಪ್ರಶಂಸೆಗಳಿಸಿದರು. ಅದಲ್ಲದೇ ನಿವೃತ್ತಿಯ ನಂತರ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು 100 ಮೀಟರ್ ಓಟದಲ್ಲಿ ಪ್ರತಿನಿಧಿಸಿದ್ದರು.

ಆದರೇ ಮಿಲ್ಕಾ ಸಿಂಗ್ ರವರಿಗೆ ಸಿಕ್ಕಷ್ಟು ಅಭಿನಂದನೆ, ಪ್ರಶಂಸೆ ಗಳು ಕನ್ನಡಿಗ ಅಯ್ಯಣ್ಣರವರಿಗೆ ದೊರೆಯಲಿಲ್ಲ ಎಂದು ಅವರ ಕುಟುಂಬಸ್ಥರು ಬೇಸರ ವ್ಯಕ್ತಪಡಿಸುತ್ತಾರೆ. ಅವರ ಹೆಸರಿಗೆ ಮನ್ನಣೆ ದೊರೆಯದೇ, ಇತಿಹಾಸದ ಪುಟಗಳಲ್ಲೂ ಉಳಿಯಲಿಲ್ಲ. ಆದರೇ ಮಿಲ್ಕಾ ಸಿಂಗ್ ಅಗಲಿದ ನಂತರ, ಇವರ ಹೆಸರು ಈಗ ಚಲಾವಣೆಗೆ ಬಂದಿದೆ. ನಿಧಾನವಾದರೂ ಕನ್ನಡಿಗನ ಹೆಸರು ಪ್ರಪಂಚಕ್ಕೆ ತಿಳಿದಿದ್ದು ಮಾತ್ರ ನಿಜಕ್ಕೂ ಶ್ಲಾಘನೀಯ. ಮಿಲ್ಕಾ ಸಿಂಗ್ ರನ್ನೇ ಸೋಲಿಸಿದ್ದ, ಕನ್ನಡಿಗ, ಕೊಡಗಿನ ವೀರ ಅಯ್ಯಣ್ಣರವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Comments are closed.