ಮೊರದ ಒಳಗಡೆ ನಾವು ಕಾಲನ್ನು ಇಡಬಾರದು ಯಾಕೆ ಎಂಬುದು ನಿಮಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಆಹಾರ ಧಾನ್ಯಗಳನ್ನು ಸ್ವಚ್ಛಗೊಳಿಸಲು ಬಳಸುವ ಒಂದು ಸಾಧನವಾದ ಮೊರದ ಒಳಗಡೆ ಕಾಲು ಇಡಬಾರದು ಎಂದು ಹಿರಿಯರು ಹಿಂದಿನ ಕಾಲದಿಂದಲೂ ಹೇಳಿಕೊಂಡು ಬಂದಿದ್ದಾರೆ. ಅದೇ ಆಚಾರ-ವಿಚಾರವನ್ನು ನಾವು ಇಂದಿಗೂ ಪಾಲಿಸುತ್ತಾ ಬಂದಿದ್ದೇವೆ. ಹೇಗಿದ್ದರೂ ನಾವು ಪಾಲಿಸುತ್ತಿದ್ದೇವೆ ಯಾಕೆ ಕಾರಣಗಳನ್ನು ತಿಳಿದುಕೊಳ್ಳಬೇಕು ಎಂದು ಆಲೋಚಿಸಬೇಡಿ, ಯಾಕೆಂದರೆ ಮೊದಲನೆಯದಾಗಿ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಪದ್ಧತಿಯನ್ನು ಈಗಾಗಲೇ ಯುವ ಪೀಳಿಗೆಯ ಸಾಕಷ್ಟು ಜನ ಅವೈಜ್ಞಾನಿಕ ಎಂದು ಕರೆಯುತ್ತಾರೆ. ಆದರೆ ಸ್ನೇಹಿತರೇ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಪ್ರತಿಯೊಂದು ಧಾರ್ಮಿಕ ಆಚರಣೆಗಳ ಹಿಂದೆಯೂ ವೈಜ್ಞಾನಿಕ ಕಾರಣಗಳು ಸಾಕಷ್ಟಿವೆ.

ಹೀಗಿರುವಾಗ ಪ್ರತಿಯೊಂದು ಆಚರಣೆಗಳ ಹಿಂದಿರುವ ವೈಜ್ಞಾನಿಕ ಕಾರಣವನ್ನು ನಾವು ಅರ್ಥಮಾಡಿಕೊಂಡು ನಾವು ತಿಳಿದುಕೊಂಡು ನಮ್ಮ ಮುಂದಿನ ಯುವ ಪೀಳಿಗೆಗೆ ತಿಳಿಸಬೇಕಾಗಿದೆ. ಹಿಂದೂ ನಾವು ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಸಾಧನವಾದ ಮೊರದ ಒಳಗಡೆ ನಾವು ಯಾಕೆ ಕಾಲನ್ನು ಇಡಬಾರದು ಎಂಬುದರ ಕುರಿತು ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಸ್ನೇಹಿತರೇ ಹಿಂದೂ ಸಂಪ್ರದಾಯದಂತೆ ಮೊರವನ್ನು ನಾವು ಲಕ್ಷ್ಮಿಗೆ ಸಮಾನ ಎಂದು ಕರೆಯುತ್ತೇವೆ, ಬಿದುರು ಎಂದರೆ ಶ್ರೀಕೃಷ್ಣನಿಗೂ ಬಹಳ ಇಷ್ಟವಾದ ವಸ್ತುಗಳಲ್ಲಿ ಒಂದಾಗಿರುವ ಕಾರಣ ಬಿದಿರಿನಿಂದ ಮಾಡಿರುವ ಮೊರವನ್ನು ನಾವು ಬಹಳ ಗೌರವದಿಂದ ಹಾಗೂ ಧಾರ್ಮಿಕ ಭಾವನೆಯಿಂದ ಕಾಣುತ್ತೇವೆ. ಮೊರವನ್ನು ನಾವು ಪೂಜಾ ಸಾಮಗ್ರಿ ಎಂದು ಪರಿಗಣಿಸುತ್ತೇವೆ, ಇನ್ನು ನೀವು ಯಾವುದೇ ಸಂದರ್ಭದಲ್ಲಿಯೂ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಸಾಮಾನ್ಯವಾಗಿ ಮೊರವನ್ನು ಬಳಸಿಕೊಂಡು ಬಾಗಿನ ಅರ್ಪಿಸುತ್ತೇವೆ. ಇಂದಿಗೂ ಕೂಡ ನದಿಗಳಿಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಮೊರವನ್ನು ಬಳಸಲಾಗುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಮೊರವನ್ನು ನಾವು ಧಾರ್ಮಿಕ ಭಾವನೆಯಿಂದ ಗೌರವಿಸುತ್ತೇವೆ.

ಆದರೆ ವೈಜ್ಞಾನಿಕ ಕಾರಣದ ಕುರಿತು ಗಮನಹರಿಸುವುದಾದರೆ ಸ್ನೇಹಿತರೆ ಮೊರವನ್ನು ಸಾಮಾನ್ಯವಾಗಿ ಮಾಡುವುದು ಯಾವುದೇ ಮಿಷನ್ ನಿಂದ ಅಲ್ಲ. ಬದಲಾಗಿ ಕೈಯಿಂದ ಮೊರವನ್ನು ಬಿದಿರಿನಿಂದ ಎಣೆಯಲಾಗುತ್ತದೆ, ಆದ ಕಾರಣದಿಂದ ಬಿದಿರಿನ ಲ್ಲಿರುವ ಚೂಪಾದ ಸಿಬಿರು ಗಳು ನಾವು ಕಾಲನ್ನು ಬಿಟ್ಟರೆ ಕಾಲಿಗೆ ಚುಚ್ಚಿ ಕೊಳ್ಳಬಹುದಾದ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ ನಾವು ಸಾಮಾನ್ಯವಾಗಿ ಆಹಾರ ಧಾನ್ಯಗಳನ್ನು ಸ್ವಚ್ಛಗೊಳಿಸಲು ಮೊರವನ್ನು ಬಳಸುತ್ತೇವೆ, ನಾವು ನಮ್ಮ ಕಾಲುಗಳನ್ನು ಮೊರದ ಒಳಗಡೆ ಇರುವುದರಿಂದ ನಮ್ಮ ಪಾದದಲ್ಲಿರುವ ದೂಳು ಮೊರಕ್ಕೆ ಅಂಟಿಕೊಳ್ಳುತ್ತದೆ. ಮೊರದಲ್ಲಿಯೇ ದೂಳು ಇರುವಾಗ ಇನ್ನು ನಾವು ಆಹಾರ ಪದಾರ್ಥಗಳನ್ನು ಸ್ವಚ್ಛ ಮಾಡುವುದಾದರೂ ಹೇಗೆ. ಈ ಎಲ್ಲಾ ಕಾರಣಗಳಿಂದ ನಮ್ಮ ಹಿರಿಯರು ಮೊರದ ಒಳಗಡೆ ಎಂದಿಗೂ ಕಾಲನ್ನು ಇಡಬಾರದು ಎಂದು ಹೇಳುತ್ತಾರೆ. ಇಷ್ಟೆಲ್ಲಾ ಆಲೋಚನೆಗಳನ್ನು ನಡೆಸಿ ವೈಜ್ಞಾನಿಕ ಕಾರಣಗಳಿಂದ ಹಲವಾರು ಆಚರಣೆ ಆರಂಭಿಸಿದ ನಮ್ಮ ಹಿರಿಯರು ಖಂಡಿತ ಆಧುನಿಕ ಜಗತ್ತು ಇಂದು ಕಂಡು ಹಿಡಿಯುತ್ತಿರುವ ವಿಷಯಗಳನ್ನು ಅಂದಿನ ಕಾಲದಲ್ಲಿಯೇ ಕಲಿತುಕೊಂಡಿದ್ದಾರೆ. ನಿಜಕ್ಕೂ ಗ್ರೇಟ್ ಅಲ್ಲವೇ??

Comments are closed.