ಪರ್ಫೆಕ್ಟ್ ಆಗಿ ಕೇವಲ ಎರಡು ನಿಮಿಷಗಳಲ್ಲಿ ಮೊಟ್ಟೆ ಬೇಯಿಸುವುದು ಹೇಗೆ ಗೊತ್ತೇ?? ಇಲ್ಲಿದೆ ಸರಳ ವಿಧಾನ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಕೇವಲ 2-3 ನಿಮಿಷಗಳಲ್ಲಿ ಪರ್ಫೆಕ್ಟ್ ಆಗಿ ಕುಕ್ಕರ್ ನಲ್ಲಿ ಮೊಟ್ಟೆ ಬೇಯಿಸುವ ಸುಲಭ ವಿಧಾನವನ್ನು ನಿಮಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ನಾವು ಹೇಳುವ ರೀತಿಯಲ್ಲಿ ಮೊಟ್ಟೆಯನ್ನು ಬೇಯಿಸಿದರೆ ಸಮಯದ ಜೊತೆ ಗ್ಯಾಸ್ ಕೂಡ ಕಡಿಮೆ ಖರ್ಚಾಗುತ್ತದೆ. ನೀವು ಪಾತ್ರೆಯಲ್ಲಿ ಮೊಟ್ಟೆಗಳನ್ನು ಬೇಯಿಸಬೇಕಾದರೆ 8 – 10 ನಿಮಿಷ ಸಮಯ ಬೇಕಾಗುತ್ತದೆ. ಅಲ್ಲದೇ ಹೆಚ್ಚು ಗ್ಯಾಸ್ ಕೂಡ ಖರ್ಚಾಗುತ್ತದೆ.

ಮೊಟ್ಟೆಗಳನ್ನು ಕುಕ್ಕರ್ ನಲ್ಲಿ ಬೇಯಿಸುವ ಪರ್ಫೆಕ್ಟ್ ವಿಧಾನ: ಮೊದಲಿಗೆ ಮೊಟ್ಟೆಗಳ ಮೇಲೆ ಯಾವುದೇ ರೀತಿಯ ಬಿರುಕುಗಳು ಎಲ್ಲದ ಹಾಗೆ ಒಂದು ಬಾರಿ ಚೆಕ್ ಮಾಡಿಕೊಳ್ಳಿ. ಒಂದು ವೇಳೆ ಬಿರುಕು ಇದ್ದರೆ ಅದನ್ನು ಕುಕ್ಕರ್ ನಲ್ಲಿ ಬೇಯಿಸಬೇಡಿ. ಬದಲಾಗಿ ಬೇರೆ ಅಡುಗೆಗೆ ಉಪಯೋಗಿಸಿ. ನಂತರ ಒಂದು ಬಟ್ಟಲಿಗೆ ಮೊಟ್ಟೆ, ನೀರು ಹಾಗೂ ಕಲ್ಲು ಉಪ್ಪನ್ನು ಹಾಕಿ ಮೊಟ್ಟೆಗಳನ್ನು ಚೆನ್ನಾಗಿ ಉಜ್ಜಿ ತೊಳೆದುಕೊಳ್ಳಿ.

ನಂತರ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನು ಇಟ್ಟುಕೊಂಡು ಅದಕ್ಕೆ ಮೊಟ್ಟೆ ಮುಳುಗುವಷ್ಟು ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ನಿಧಾನವಾಗಿ ಮೊಟ್ಟೆಗಳನ್ನು ಇಟ್ಟುಕೊಳ್ಳಿ. ನಂತರ ಕುಕ್ಕರ್ ಗೆ 2 – 3 ಹನಿ ನಿಂಬೆ ಹಣ್ಣಿನ ರಸ ಹಾಗೂ ಅಡುಗೆ ಎಣ್ಣೆಯನ್ನು ಹಾಕಿಕೊಳ್ಳಿ. ಎಣ್ಣೆ ಹಾಗೂ ನಿಂಬೆ ಹಣ್ಣಿನ ರಸವನ್ನು ಹಾಕುವುದರಿಂದ ಮೊಟ್ಟೆ ಬೇಗ ಬೇಯುವುದರ ಜೊತೆಗೆ ಮೊಟ್ಟೆಯ ಸಿಪ್ಪೆಯನ್ನು ಸುಲಭವಾಗಿ ಬಿಡಿಸಲು ಸಹಾಯವಾಗುತ್ತದೆ. ನಂತರ ಮುಚ್ಚಳವನ್ನು ಮುಚ್ಚಿ 2 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. ನಂತರ ಅಧಿಕ ಉರಿಯಲ್ಲಿ ಗ್ಯಾಸ್ ಅನ್ನು ಇಟ್ಟು 1 ವಿಷಲ್ ಕೂಗಿಸಿಕೊಂಡರೆ ಮೊಟ್ಟೆ ಪರ್ಫೆಕ್ಟ್ ಆಗಿ ಬೆಂದಿರುತ್ತದೆ. ನಂತರ ಕುಕ್ಕರ್ ತಣ್ಣಗಾಗಲು ಬಿಡಿ. ನಂತರ ಮೊಟ್ಟೆಗಳನ್ನು ತಣ್ಣಗಿನ ನೀರಿನಲ್ಲಿ ಹಾಕಿ 3 – 5 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮೊಟ್ಟೆಯ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು.

Comments are closed.