News from ಕನ್ನಡಿಗರು

ನನ್ನರಸಿ ರಾಧೆಯ ಇಂಚರಗೆ ಕುಲಾಯಿಸಿದ ಅದೃಷ್ಟ, ಇದೇ ಮೊದಲ ಬಾರಿ ಸಿಕ್ತು ಬಿಗ್ ಆಫರ್. ನಟ ಯಾರು ಗೊತ್ತೇ??

255

ನಮಸ್ಕಾರ ಸ್ನೇಹಿತರೇ ಕಿರುತೆರೆಯಲ್ಲಿ ತಮ್ಮ ಕರಿಯರ್ ಆರಂಭಿಸಿದವರು ಹಲವಾರು ಜನ ಬೆಳ್ಳಿತೆರೆಯಲ್ಲಿಯೂ ಸಹ ಯಶಸ್ಸನ್ನ ಪಡೆದುಕೊಂಡಿದ್ದಾರೆ. ಕನ್ನಡದ ನಟಿಯರಾದ ರಚಿತಾ ರಾಮ್, ರಾಧಿಕಾ ಪಂಡಿತ್, ಕಾವ್ಯಾ ಗೌಡ ..ಹೀಗೆ ಎಲ್ಲರೂ ಸಹ ಕಿರುತೆರೆ ಕಲಾವಿದರಾಗಿದ್ದವರು. ಈಗ ಮತ್ತೊಬ್ಬ ಮುದ್ದು ಮುಖದ ನಟಿಯ ಸರದಿ ಇದಾಗಿದೆ. ನೀವು ಧಾರವಾಹಿಯ ಪ್ರಿಯರಾಗಿದ್ದರೇ, ಈ ಧಾರವಾಹಿಯನ್ನ ನೋಡಿಯೇ ಇರುತ್ತಿರಿ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಬೇರೂರಿದೆ. ಇನ್ನು ಈ ಧಾರಾವಾಹಿಯ ನಟಿ ಇಂಚರಾ ಪಾತ್ರಧಾರಿಯ ನಿಜವಾದ ಹೆಸರು ಕೌಸ್ತುಭ ಮಣಿ. ಇವರು ಮೂಲತಃ ಟೆಕ್ಕಿಯಾಗಿದ್ದವರು. ಫ್ಯಾಷನ್ ಜಗತ್ತಿನ ನಂಟು ಸಹ ಹೊಂದಿದ್ದರು. ಹೀಗೆ ಒಂದು ದಿನ ಆಡಿಷನ್ ನಲ್ಲಿ ಭಾಗವಹಿಸಿ , ನನ್ನರಸಿ ರಾಧೆ ಧಾರವಾಹಿಯ ಮುಖ್ಯ ಪಾತ್ರಕ್ಕೆ ಆಯ್ಕೆಯಾದರು. ತಮ್ಮ ಮುದ್ದು ಮುಖ, ನಗು, ಧ್ವನಿ ಹಾಗೂ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿಯೂ ಸಹ ಹಲವಾರು ಜನ ಫಾಲೋವರ್ಸ್ ಗಳನ್ನ ಹೊಂದಿದ್ದಾರೆ. ಈಗ ಕೌಸ್ತುಭ ಮಣಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ಹಿರಿತೆರೆಗೆ ಕಾಲಿಟ್ಟಿದ್ದಾರೆ.

ಹೌದು ಈ ವಿಷಯವನ್ನ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಹಂಚಿಕೊಂಡಿರುವ ಕೌಸ್ತುಭ, ತಾವು ರಾಮಾಚಾರಿ 2.0 ಚಿತ್ರಕ್ಕೆ ನಾಯಕಿಯಾಗಿ ಬಣ್ಣ ಹಚ್ಚುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಯುವ ಪ್ರತಿಭೆ ತೇಜ್ ನಾಯಕರಾಗಿದ್ದು, ಅವರೇ ಈ ಚಿತ್ರದ ನಿರ್ದೇಶನ ಸಹ ಮಾಡಲಿದ್ದಾರೆ. ಇನ್ನು ಸಿನಿಮಾಗಾಗಿ ತಯಾರಿಯಲ್ಲಿರುವ ಕೌಸ್ತುಭ ಮಣಿ, ಜಿಮ್ ಹಾಗೂ ಡಯಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯಲ್ಲಿ ತನ್ನ ಮುದ್ದು ಮುಖದಿಂದ ಗಮನ ಸೆಳೆದಿದ್ದ ಕೌಸ್ತುಭ ಹಿರಿತೆರೆಯಲ್ಲಿಯೂ ಸಹ ಮಿಂಚಲಿ ಎಂದು ಹಾರೈಸೋಣ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.