ನಟನ ಜೊತೆ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ಖ್ಯಾತ ಗಾಯಕಿ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಹಾಗೂ ಹಿರಿತೆರೆಯ ಸಾಕಷ್ಟು ನಟ ನಟಿಯರು ಈ ಕರೊನಾ ಟೈಮ್ ನಲ್ಲಿ ಹೆಚ್ಚು ಜನರನ್ನು ಆಹ್ವಾನಿಸಲು ಸಾಧ್ಯವಿಲ್ಲದ ಕಾರಣ ಸದ್ದಿಲ್ಲದೇ ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆಯಾಗುತ್ತಿದ್ದಾರೆ. ಇದು ಕೇವಲ ಕನ್ನಡಕ್ಕೆ ಮಾತ್ರವಲ್ಲ ಇತರ ಭಾಷಾ ನಟ ನಟಿಯರು ಕೂಡ ಕರೋನ ರೂಲ್ಸ್ ಫಾಲೋ ಮಾಡುತ್ತಾ ಹೊಸ ಜೀವನ ಶುರು ಮಾಡುತ್ತಿರುವುದಂತೂ ಸುಳ್ಳಲ್ಲ.

ಇದೀಗ ಕನ್ನಡ ಕಿರಿತೆರೆಯ ನಂ1 ಶೋ ಸರಿಗಮಪ ಸ್ಪರ್ಧಿ ಕೂಡ ಮದುವೆಯ ಸಂಭ್ರಮದಲ್ಲಿದ್ದಾರೆ. ಹೌದು ಸ್ನೇಹಿತರೆ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಹಾಗೂ ಜನರ ಮೆಚ್ಚಿನ ಕಾರ್ಯಕ್ರಮ ಸರಿಗಮಪ ಸಂಗೀತ ಕಾರ್ಯಕ್ರಮ. ಸರಿಗಮಪ ಸೀಸನ್ 13 ರ ಸ್ಪರ್ಧಿಯಾಗಿದ್ದ ಇಂಪನಾ ಜಯರಾಜ್ ತಮ್ಮ ಕಂಠದಲ್ಲಿಯೇ ಇಂಪನ್ನು ಹೊಂದಿದ್ದಾರೆ. ವಿಭಿನ್ನ ಹಾಡುವ ಶೈಲಿಗೆ ಹೆಸರಾಗಿರುವ ಇಂಪನಾ ಜಯರಾಜ್ ಯಾವುದೇ ರೀತಿಯ ಹಾಡನ್ನು ಕೊಟ್ಟರೂ ಅಷ್ಟೇ ಸೊಗಸಾಗಿ ಹಾಡುತ್ತಾರೆ. ಇನ್ನು ಚಿತ್ರಗಳಲ್ಲಿಯೂ ಹಾಡಿರುವ ಇಂಪನಾ ನೆಚ್ಚಿನ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹೌದು ರೈಮ್ ಚಿತ್ರ ದ ನಟ ಅಜಿತ್ ಅವರೊಂದಿಗೆ ಗಾಯಕಿ ಇಂಪನಾ ಜಯರಾಜ್ ಅವರ ಮದುವೆ ಫಿಕ್ಸ್ ಆಗಿದೆ. ಹಿನ್ನೆಲೆ ಗಾಯಕಿ ಇಂಪನಾ ಜಯರಾಜ್ ಹಾಗೂ ನಟ ಅಜಿತ್ ಅವರ ಕುಟುಂಬದ ಸದಸ್ಯರು ಹಾಗೂ ಕೆಲವು ಹತ್ತಿರದ ಸ್ನೇಹಿತರು ಮಾತ್ರ ಸೇರಿ ನಿಶ್ಚಿತಾರ್ಥ ನೆರವೇರಿಸಿದ್ದಾರೆ. ಇನ್ನು ಗಾಯಕಿ ಇಂಪನಾ ಜಯರಾಜ್ ಹಾಗೂ ನಟ ಅಜಿತ್ ಅವರ ಮದುವೆಯ ದಿನಾಂಕವನ್ನು ಮಾತ್ರ ಇಂಪನಾ ಜಯರಾಜ್ ರಿವಿಲ್ ಮಾಡಿಲ್ಲ. ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ತಾವು ಹಾಗೂ ಭಾವಿ ಪತಿ ಜೊತೆಗಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ತಾವು ಎಂಗೇಜ್ಡ್ ಎಂಬ ಸುದ್ದಿಯನ್ನು ಸಂಗೀತ ಪ್ರಿಯರಿಗೆ ತಿಳಿಸಿದ್ದಾರೆ ಇಂಪನಾ ಜಯರಾಜ್. ಈ ಪೋಸ್ಟ್ ನೋಡಿ ಅಭಿಮಾನಿಗಳು ಹಾರೈಸಿದ್ದಾರೆ.

Comments are closed.