ಆರ್ಸಿಬಿ ಕ್ಯಾಂಪ್ ನಲ್ಲಿ ಕೈಲ್ ಜೇಮಿಸನ್ ಮನ ಗೆದ್ದ ಹುಡುಗಿಯ ಹಿನ್ನಲೆ ಏನು ಗೊತ್ತೇ?? ಅಸಲಿಗೆ ಈಕೆ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ನ ಮುಂದುವರಿದ ಚರಣದಲ್ಲಿ ಆರ್ಸಿಬಿ ತಂಡ ಮೊದಲ ಪಂದ್ಯದಲ್ಲೇ ಹೀನಾಯವಾಗಿ ಕೆಕೆಆರ್ ಎದುರು ಸೋತಿತು.ಆದರೇ ಆ ಮ್ಯಾಚ್ ನ ಒಂದು ಫೋಟೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಹೌದು ಆರ್ಸಿಬಿ ತಂಡದ ವೇಗದ ಬೌಲರ್ ಕೈಲ್ ಜೇಮಿಸನ್, ಆರ್ಸಿಬಿ ಕ್ಯಾಂಪ್ ನ ಸಹಾಯಕ ಸಿಬ್ಬಂದಿ ಯುವತಿಯೊಬ್ಬಳನ್ನ ನೋಡಿ ನಗುತ್ತಿರುವ ಚಿತ್ರ. ಎಲ್ಲರೂ ಆ ಫೋಟೋ ಶೇರ್ ಮಾಡಿದರೂ, ಆ ಹುಡುಗಿ ಯಾರು ಎಂಬ ಪ್ರಶ್ನೆ ಕೇಳುತ್ತಿದ್ದರು. ಈಗ ಆ ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿದೆ. ಬನ್ನಿ ತಿಳಿಯೋಣ.

ಆ ಯುವತಿಯ ಹೆಸರು ನವನೀತಾ ಗೌತಮ್ ಎಂದು. ಕೆನಡಾ ಮೂಲದ ನವನೀತಾ ಆರ್ಸಿಬಿ ತಂಡದ ಸಹಾಯಕ ಫಿಸಿಯೋ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಮಸಾಜ್ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. 2019 ರಲ್ಲಿ ಆರ್ಸಿಬಿ ತಂಡ ಸೇರುವ ಮುನ್ನ, ನವನೀತಾ ಗೌತಮ್ ಕೆನಡಾದಲ್ಲಿ ಟೋರಾಂಟೋ ನ್ಯಾಷನಲ್ಸ್ ತಂಡದ ಪರವಾಗಿ, ಭಾರತದ ಮಹಿಳಾ ಬಾಸ್ಕೇಟ್ ಬಾಲ್ ತಂಡದ ಪರವಾಗಿ ಮಸಾಜ್ ಥೆರಪಿಸ್ಟ್ ಆಗಿ ಕೆಲಸ ಮಾಡಿದ್ದರು.

ಆಟಗಾರರು ಅತಿಯಾಗಿ ದಣಿವಾದಾಗ, ವಿಶೇಷವಾಗಿ ವೇಗದ ಬೌಲರ್ ಗಳ ಕಾಲುಗಳು ಸಹಜವಾಗಿ ನೋವಿನಿಂದ ಕೂಡಿರುತ್ತವೆ. ಆಗ ಉತ್ತಮ ಮಸಾಜ್ ಅಗತ್ಯವಾಗಿರುತ್ತದೆ. ಹಾಗಾಗಿ ಕ್ರೀಡಾ ವಲಯದಲ್ಲಿ ಮಸಾಜ್ ಥೆರಪಿಸ್ಟ್ ಗೆ ಬಹಳ ಬೇಡಿಕೆ ಇರುತ್ತದೆ. ಸದ್ಯ 29ರ ಹರೆಯದ ನವನೀತಾ ಗೌತಮ್ ಮತ್ತು 25ರ ಹರೆಯದ ನ್ಯೂಜಿಲೆಂಡ್ ನ ವೇಗದ ಬೌಲರ್ ಕೈಲ್ ಜೇಮಿಸನ್ ನಡುವೆ ಪ್ರೇಮಾಂಕುರವಾಗಿದೆ ಎಂಬ ಗುಸುಗುಸು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಇವರು ಐಪಿಎಲ್ ನಲ್ಲಿ ಕೆಲಸ ಮಾಡುವ ಏಕೈಕ ಮಹಿಳಾ ಸದಸ್ಯೆಯಾಗಿರುವುದು ಸಹ ವಿಶೇಷ. ಈ ಹಿಂದೆ ಪತ್ರಕರ್ತರೊಬ್ಬರು, ನಿವೋಬ್ಬರೇ ಮಹಿಳಾ ಸದಸ್ಯರಾಗಿರುವುದು ನಿಮಗೆ ಹೇಗೆ ಅನಿಸುತ್ತದೆ ಎಂದು ಪ್ರಶ್ನಿಸಿದಾಗ, ಎಲ್ಲಾ ಸದಸ್ಯರು ನನ್ನ ಸಹೋದರರು ಎಂಬ ಬೋಲ್ಡ್ ಉತ್ತರ ನೀಡಿದ್ದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.