ಅಪ್ರತಿಮ ಸುಂದರಿ, ದಕ್ಷಿಣ ಭಾರತ ಟಾಪ್ ನಟಿ ನಯನತಾರ ರವರ ಒಟ್ಟು ಆಸ್ತಿಯ ಮೊಲ್ಯವೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಯನತಾರಾ ಸೌತ್ ಇಂಡಿಯನ್ ಸ್ಟಾರ್ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಕನ್ನಡ-ತೆಲುಗು-ತಮಿಳು-ಮಲಯಾಳಂ ಹೀಗೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ನಯನತಾರಾ ಇಂದಿಗೂ ಸಹ ಟಾಪ್ ಹಿರೋಯಿನ್. ನಯನತಾರಾ ಜನಿಸಿದ್ದು ಕೇರಳದ ತಿರುವಾಳ್ಳಿನಲ್ಲಿ . ಇವರ ಹುಟ್ಟು ಹೆಸರು ಡಯಾನಾ ಮೇರಿಯಂ ಕುರಿಯನ್ ಎಂದು. ಚಿತ್ರರಂಗಕ್ಕೆ ಬಂದ ನಂತರ ನಯನತಾರಾ ಎಂದು ಹೆಸರು ಬದಲಾಯಿಸಿಕೊಂಡರು.

2003ರಲ್ಲಿ ಮಲಯಾಳಂ ಸಿನಿಮಾದ ಮೂಲಕ ಪರಿಚಿತರಾದ ನಂತರ ನಯನತಾರಾ ತಮಿಳು,ತೆಲುಗಿನಲ್ಲಿ ನಟಿಸಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆದವು. ಅದಕ್ಕಿಂತ ನಯನತಾರಾ ಹೆಚ್ಚು ಸುದ್ದಿಯಾಗಿದ್ದು ಅವರ ಪರ್ಸನಲ್ ಲೈಫಿನಿಂದ. ಮೊದಲು ನಟ ಸಿಂಬು ಅವರನ್ನು ಪ್ರೀತಿಸುತ್ತಿದ್ದರು. ಇನ್ನೇನು ಮದುವೆಯಾಗಿಬಿಡುತ್ತಾರೆ ಎನ್ನುವಷ್ಟರಲ್ಲೇ ಅವರಿಬ್ಬರ ಮಧ್ಯೆ ಬ್ರೇಕ್ ಅಪ್ ಆಯಿತು. ನಂತರ ನಿರ್ದೇಶಕ ಪ್ರಭುದೇವ ಜೊತೆ ಲವ್ ಬೆಳೆಯಿತು.

ಪ್ರಭುದೇವ ನಯನತಾರಾವರನ್ನು ಮದುವೆಯಾಗಲು ತಮ್ಮ ಮೊದಲ ಪತ್ನಿ ಲತಾರವರಿಗೆ ವಿಚ್ಛೇದನ ಸಹ ನೀಡಿದರು. ಇದು ತಮಿಳುನಾಡಿನಲ್ಲಿ ದೊಡ್ಡ ವಿವಾವದವಾಗಿ ನಯನತಾರಾ ವಿರುದ್ದ ಹಲವು ಮಹಿಳಾ ಸಂಘಟನೆಗಳು ಪ್ರತಿಭಟನೆ ಸಹ ನಡೆಸಿದವು. ನಂತರ ಆ ಮದುವೆ ಸಹ ನಿಂತು ಹೋಯಿತು. ಹೀಗೆ ಜೀವನದಲ್ಲಿ ಒಂದರ ಮೇಲಂತೆ ಒಂದು ಸವಾಲನ್ನು ಎದುರಿಸಿದ ನಯನತಾರಾ ಕೊಂಚ ಬ್ರೇಕ್ ನಂತರ ಮತ್ತೆ ಸುದ್ದಿಯಾಗುತ್ತಿದ್ದಾರೆ.

ಹೌದು ಈಗ ನಯನತಾರಾ ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದು ಖ್ಯಾತರಾಗಿದ್ದಾರೆ. ಅಜಿತ್ ಜೊತೆ ವಿಶ್ವಾಸಂ, ವಿಜಯ್ ಜೊತೆ ನಟಿಸಿದ ಬಿಗಿಲ್ ಸಿನಿಮಾಗಳ ಯಶಸ್ಸಿನಿಂದ ಅದ್ಭುತವಾಗಿ ಕಮ್ ಬ್ಯಾಕ್ ಮಾಡಿರುವ ನಯನತಾರಾ ಒಂದು ಸಿನಿಮಾಕ್ಕೆ 3 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆಂಬ ಮಾಹಿತಿ ಲಭಿಸಿದೆ.

ಖಾಸಗಿ ಸಂಸ್ಥೆಯೊಂದು ನಡೆಸಿರುವ ಸರ್ವೆ ಪ್ರಕಾರ ನಯನತಾರಾ ಒಟ್ಟು ಆಸ್ತಿ 70 ಕೋಟಿಗಿಂತ ಮೇಲಿದೆಯಂತೆ. ಚೆನ್ನ್ಯೆ ಹಾಗೂ ಹೈದರಾಬಾದ್ ನಲ್ಲಿ ದುಬಾರಿ ಐಷರಾಮಿ ಫ್ಲಾಟ್ ಹಾಗೂ.ಮನೆಗಳನ್ನ ಹೊಂದಿದ್ದಾರೆ. ಅದಲ್ಲದೇ ಕೆಲವು ದಿನಗಳ ಹಿಂದೆ ನಯನತಾರಾ ತಮ್ಮ ಈಗಿನ ಸ್ನೇಹಿತ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಖಾಸಗಿ ವಿಮಾನದಲ್ಲಿ ಹೋಗುತ್ತಿದ್ದ ಫೋಟೋಗಳು ವೈರಲ್ ಆಗಿದ್ದವು. ನಯನತಾರಾ ತಾವು ಓಡಾಡಲು ಖಾಸಗಿ ವಿಮಾನ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಇದಲ್ಲದೇ ಹಲವಾರು ದುಬಾರಿ ಕಾರುಗಳ ಒಡತಿಯಾಗಿರುವ ನಯನತಾರಾ ಬಳಿ ಆಡಿ, ಬಿಎಂಡಬ್ಲು ನಂತಹ ಕಾರುಗಳು ಸಹ ಇವೆ. ಸದ್ಯ ವಿಘ್ನೇಶ್ ಶಿವನ್ ಜೊತೆ ಲೀವಿಂಗ್ ಟುಗೇದರ್ ರಿಲೆಷನ್ ಶಿಪ್ ನಲ್ಲಿರುವ ನಯನತಾರಾ ಸದ್ಯ ಸೌತ್ ಸಿನಿಮಾ ಇಂಡಸ್ಟ್ರಿಯ ದುಬಾರಿ ಹಾಗೂ ಶ್ರೀಮಂತ ನಟಿಯಾಗಿ ಹೊರ ಹೊಮ್ಮಿದ್ದಾರೆ. ಇನ್ನು ಇವರ ನಟನೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ

Comments are closed.