ಇದಪ್ಪ ಕನ್ನಡತಿಯ ಹವಾ ಅಂದ್ರೆ, ದಕ್ಷಿಣದ ಟಾಪ್ ನಟಿ ನಯನತಾರಾಗೆ ಬಿಗ್ ಶಾಕ್ ನೀಡಿದ ಶ್ರದ್ಧಾ ಶ್ರೀನಾಥ್, ವಿಷಯ ಏನ್ ಗೊತ್ತೇ??

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತ ಚಿತ್ರರಂಗ ಎನ್ನುವುದು ಈಗಾಗಲೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ಹೆಸರನ್ನು ಮಾಡುತ್ತಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಬಾಲಿವುಡ್ ಚಿತ್ರರಂಗದವರು ಕೂಡ ದಕ್ಷಿಣ ಭಾರತ ಚಿತ್ರರಂಗದ ನಟ ಹಾಗೂ ನಿರ್ದೇಶಕರು ಬೇಕು ಎಂದು ಹೇಳುತ್ತಿದ್ದಾರೆ. ಹಿಂದಿ ಪ್ರೇಕ್ಷಕರಿಗೂ ಕೂಡ ದಕ್ಷಿಣ ಭಾರತ ಚಿತ್ರರಂಗದ ಮಾದರಿಯ ಚಿತ್ರಗಳು ಬಾಲಿವುಡ್ನಲ್ಲಿ ಬಿಡುಗಡೆಯಾಗಬೇಕು ಎಂಬ ಆಸೆಗಳು ಕೂಡ ಇವೆ.

ಇನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಯುಟರ್ನ್ ಚಿತ್ರದ ಮೂಲಕ ಶ್ರದ್ಧಾ ಶ್ರೀನಾಥ್ ರವರು ಪರಿಚಿತರಾಗಿದ್ದರು. ಇದಾದ ನಂತರ ಹಲವಾರು ಚಿತ್ರಗಳಲ್ಲಿ ಕೂಡ ಶ್ರದ್ಧಾ ಶ್ರೀನಾಥ್ ರವರು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗಗಳಲ್ಲಿ ನಟಿ ಶ್ರೀನಾಥ್ ರವರು ಕಾಣಿಸಿಕೊಳ್ಳುತ್ತಿಲ್ಲ. ಹಾಗಿದ್ದರೆ ಈಗ ಶ್ರದ್ಧಾ ಶ್ರೀನಾಥ್ ರವರು ಎಲ್ಲಿದ್ದಾರೆ ಎಂದು ಕೇಳಿದರೆ ಖಂಡಿತವಾಗಿ ಅದಕ್ಕೂ ಕೂಡ ಉತ್ತರವಿದೆ. ಹೌದು ಗೆಳೆಯರೇ ಶ್ರದ್ಧಾ ಶ್ರೀನಾಥ್ ರವರು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ನಟಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ತಮಿಳು ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಸಿನಿಮಾದಲ್ಲಿ ನಡೆಸಿರುವ ಶ್ರದ್ಧಾ ಶ್ರೀನಾಥ್ ರವರು ದೊಡ್ಡಮಟ್ಟದ ಬೇಡಿಕೆಯನ್ನು ತಮಿಳು ಚಿತ್ರರಂಗದಲ್ಲಿ ಪಡೆದುಕೊಂಡಿದ್ದಾರೆ.

nayana shradda | ಇದಪ್ಪ ಕನ್ನಡತಿಯ ಹವಾ ಅಂದ್ರೆ, ದಕ್ಷಿಣದ ಟಾಪ್ ನಟಿ ನಯನತಾರಾಗೆ ಬಿಗ್ ಶಾಕ್ ನೀಡಿದ ಶ್ರದ್ಧಾ ಶ್ರೀನಾಥ್, ವಿಷಯ ಏನ್ ಗೊತ್ತೇ??
ಇದಪ್ಪ ಕನ್ನಡತಿಯ ಹವಾ ಅಂದ್ರೆ, ದಕ್ಷಿಣದ ಟಾಪ್ ನಟಿ ನಯನತಾರಾಗೆ ಬಿಗ್ ಶಾಕ್ ನೀಡಿದ ಶ್ರದ್ಧಾ ಶ್ರೀನಾಥ್, ವಿಷಯ ಏನ್ ಗೊತ್ತೇ?? 2

ಇನ್ನು ಈಗ ನಯನತಾರಾ ರವರ ಸ್ಥಾನವನ್ನು ಕೂಡ ಶ್ರದ್ಧಾ ಶ್ರೀನಾಥ್ ರವರು ಆಕ್ರಮಿಸಿಕೊಂಡಿದ್ದಾರೆ ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ನಟಿ ನಯನತಾರಾ ರವರು ಯುವರಾಜ್ ದಯಾಳನ್ ಅವರ ಇನ್ನೂ ಹೆಸರಿಡದ ಚಿತ್ರಕ್ಕೆ ನಾಯಕ ನಟಿಯಾಗಿ ನಟಿಸಬೇಕಾಗಿತ್ತು. ಆದರೆ ನಯನತಾರಾ ಅವರು ಬಾಲಿವುಡ್ ನಲ್ಲಿ ಶಾರುಖ್ ಖಾನ್ ರವರ ಸಿನಿಮಾಗಾಗಿ ನಟಿಸ ಬೇಕಾಗಿದ್ದರಿಂದ ಡೇಟ್ಸ್ ಹೊಂದಾಣಿಕೆಯಾಗದೇ ಚಿತ್ರದಿಂದ ಹೊರ ಬಂದಿದ್ದಾರೆ. ಹೀಗಾಗಿ ನಟಿ ಶ್ರದ್ಧಾ ಶ್ರೀನಾಥ್ ರವರು ನಯನತಾರ ರವರ ಬದಲಿಗೆ ಅವರ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕೂಡ ಹೆಚ್ಚಿನ ಚಿತ್ರಗಳಲ್ಲಿ ನಟಿಸುವ ಅವಕಾಶ ಶ್ರದ್ಧಾ ಶ್ರೀನಾಥ್ ಅವರಿಗೆ ಸಿಗಲಿ ಎಂಬುದಾಗಿ ಹಾರೈಸೋಣ.

Comments are closed.