ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ನೀರಜ್ ಚೋಪ್ರಾ ಗೆದ್ದದ್ದು ಎಷ್ಟು ಲಕ್ಷ ಗೊತ್ತಾ? ಈ ಹಣ ಏನು ಮಾಡುತ್ತಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಹಿಂದಿಯಲ್ಲಿ ಸಾಕಷ್ಟು ರಿಯಾಲಿಯಿ ಶೋಗಳು ಬಂದು ಹೋದರು ಕೌನ್ ಬನೆಗಾ ಕರೋಡ್ ಪತಿ ಶೋ ಮಾತ್ರ ಅತಿ ಹೆಚ್ಚಿನ ಜನಪ್ರಿಯತೆಯನು ಗಳಿಸಿದೆ. ಇದಕ್ಕೆ ಈ ಶೋ ವನ್ನು ನಡೆಸಿಕೊಡುವ ಬಿಗ್ ಬಿ ಕೂಡ ಪ್ರಮುಖ ಕಾರಣವಾಗಿರಬಹುದು. ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡ ಅತ್ಯುತ್ತಮ ಕ್ವಿಜ್ ಶೋ ಇದಾಗಿದ್ದು, ಇದರಲ್ಲಿ ಭಾಗವಹಿಸಲು ಜನ ಎದುರು ನೋಡುತ್ತಿರುತ್ತಾರೆ.

ಅತ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿಕೊಂಡಿರುವ ಕೆಬಿಸಿ ೧೩ ಆವೃತ್ತಿಯನ್ನು ಪ್ರಸಾರ ಮಾಡುತ್ತಿದೆ. ಈ ಬಾರಿಯೂ ಕೂಡ ಕೋಟಿ ಹಣದ ಪ್ರಶ್ನೆಯನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದು ಮಹಿಳೆಯರೆ ಎನ್ನುವುದು ಹೆಮ್ಮೆಯ ವಿಚಾರ! ಇನ್ನು ಕೆಬಿಸಿ ೧೩ ನಲ್ಲಿ ಪ್ರತಿ ಶುಕ್ರವಾರ ಸೆಲಿಬ್ರೆಟಿ ದಿನವನ್ನಾಗಿಸಿದ್ದು ಇನ್ನಷ್ಟು ಮನೋರಂಜನೆಯನ್ನು ನೀಡುತ್ತಿದೆ. ಶುಕ್ರವಾರ ಬರುವ ಸೆಲಿಬ್ರೆಟಿಗಳು ಕ್ವಿಜ್ ಪ್ರಶ್ನೆಗಳಿಗೆ ಉತ್ತರಿಸುತ್ತ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ನೃತ್ಯ, ಹಾಸ್ಯ ಮೊದಲಾದವುಗಳನ್ನು ವೀಕ್ಷಕರಿಗೆ ಉಣಬಡಿಸುತ್ತಾರೆ. ಇನ್ನು ಅಮಿತಾಬ್ ಅವರ ಹೋಸ್ಟಿಂಗ್ ನೋಡಲೆಂದೇ ಟಿವಿ ಎದುರು ಕುಳಿತುಕೊಳ್ಳುವವರು ಅದೆಷ್ಟೊ!

ಈ ವಾರ ಸೆಲಿಬ್ರೆಟಿ ಗೆಸ್ಟ್ ಆಗಿ ಬಂದಿದ್ದವರು ಓಲಂಪಿಕ್ಸ್ ನಲ್ಲಿ ಸ್ವರ್ಣಗೆದ್ದ ನೀರಜ್ ಚೋಪ್ರಾ ಹಾಗೂ ಕಂಚು ಗೆದ್ದ ಪಿ. ಶ್ರೀಜೇಶ್. ಅಮಿತಾಬ್ ಬಚ್ಚನ್ ಈ ಆಟಗಾರರ ಅಭಿಮಾನಿಯೂ ಹೌದು, ಹಾಗಾಗಿ ಅವರು ಶೋಗೆ ಬರುತ್ತಿದ್ದಂತೆ ಆಟೋಗ್ರಾಫ್ ಕೂಡ ಪಡೆದುಕೊಂಡರು. ಇನ್ನು ಕಿಬಿಸಿ ಪ್ರಶ್ನೆಗಳಿಗೆ ಉತ್ತರಿಸಿದ ನೀರಜ್ ಹಾಗೂ ಶ್ರೀಜೇಶ್ 25 ಲಕ್ಷ ಹಣವನ್ನು ಗೆದ್ದಿದ್ದಾರೆ. ಇನ್ನು ಸಾಮಾನ್ಯವಾಗಿ ಇಲ್ಲಿ ಬರುವ ಸೆಲಿಬ್ರೆಟಿಗಳು ಗೆದ್ದ ಹಣವನ್ನು ಚಾರಿಟಿಗಾಗಿಯೇ ಬಳಸುತ್ತಾರೆ. ಹಾಗೆಯೇ ನೀರಜ್ ಹಾಗೂ ಶ್ರಿಜೇಶ್ ಕೂಡ ಗೆದ್ದ ೨೫ ಲಕ್ಷ ರೂಪಾಯಿಗಳನ್ನು ಚಾರಿಟಿಗೆ ಕೊಡಲಿದ್ದಾರೆ.

Comments are closed.