ರಾಜ್ ಮೊಮ್ಮಗಳ ಮೊದಲ ಚಿತ್ರದ ಬಿಡುಗಡೆಯ ಸಮಯದಲ್ಲಿ ಸಂಕಷ್ಟ, ನಿನ್ನ ಸನಿಹಕೆ ಚಿತ್ರ ತಂಡಕ್ಕೆ ನಿರಾಸೆ.

ನಮಸ್ಕಾರ ಸ್ನೇಹಿತರೇ ಇನ್ನು ಚಿತ್ರಮಂದಿರಗಳು ಶೇಕಡಾ ನೂರರಷ್ಟು ಸೀಟಿಗೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಬಹು ನಿರೀಕ್ಷೆಯ ಎಲ್ಲಾ ಸಿನಿಮಾಗಳೂ ಒಂದೊಂದೆ ತೆರೆಕಾಣುತ್ತಿವೆ. ಇದು ಸಿನಿ ಪ್ರ್ಯರಿಗೆ ಅತ್ಯಂತ ಸಂತೋಷಕರ ಸುದ್ದಿಯಾಗಿದ್ದು, ವಾರಾತ್ಯಂದಲ್ಲಿ ಚಿತ್ರವಂದಿರಗಳು ನಿರೀಕ್ಷೆಗೂ ಮೀರಿ ಫುಲ್ ಆಗುತ್ತಿವೆ. ಇನ್ನು ನಟ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಹಾಗೂ ದುನಿಯಾ ವಿಜಯ್ ನಟನೆಯ ಚಿತ್ರಗಳು ಬಿಡುಗಡೆಯಾಗುವುದನ್ನೇ ಕಾಯ್ತಾ ಇದ್ದಾರೆ ಅಭಿಮಾನಿಗಳು.

ಇನ್ನು ರಾಜ್ ಕುಟುಂಬದ ಮೊಮ್ಮಗಳ ಚೊಚ್ಚಲ ಚಿತ್ರವೂ ಕೂಡ ಬಿಡುಗಡೆಯ ಸುದ್ದಿಯನ್ನು ಜೋರಾಗಿಯೇ ಮಾಡಿತ್ತು. ಇದೇ ಶುಕ್ರವಾರ (ಅಕ್ಟೋಬರ್ ೮)ರಂದು ’ನಿನ್ನ ಸನಿಹಕೆ ಚಿತ್ರ ಕೂಡ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಆರಂಭ ವಿಘ್ನ ಎನ್ನುವುವಂದೆ ಫಸ್ಟ್ ಡೇ ಫಸ್ಟ್ ಶೋಗೆ ಸಮಸ್ಯೆ ಉಂಟಾಗಿದ್ದು ಚಿತ್ರತಂಡಕ್ಕೆ ತುಂಬಾನೇ ನಿರಾಸೆಯಾಗಿದೆ. ಯಾವುದೇ ಸಿನಿಮಾ ನಟರಿಗಾಗಲಿ, ನಿರ್ದೇಶಕರಿಗಾಗಲಿ ಅಥವಾ ಇಡೀ ಚಿತ್ರತಂಡಕ್ಕೆ ತಮ್ಮ ಚಿತ್ರ ಮೊದಲ ದಿನ ಉತ್ತಮ ಪ್ರದರ್ಶನ ಕಂಡರೆ ಅದೇ ಶುಭ ಎಂಬ ನಂಬಿಕೆಯಿದೆ. ಆದರೆ ಹಾಗಾಗದಿದ್ದ ಪಕ್ಷದಲ್ಲಿ ನೋವಾಗುವುದು ಸಹಜ.

ಬೆಂಗಳೂರುನ ಕೆಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರ ನಿನ್ನ ಸನಿಹಕೆ ಚಿತ್ರ ಪ್ರದರ್ಶನದ ಮುಖ್ಯ ಚಿತ್ರಮಂದಿರವಾಗಿತ್ತು. ಆದರೆ ಇಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಬೆಳಗಿನ ಆಟವನ್ನು ರದ್ದು ಮಾಡಲಾಗಿದೆ. ಈ ಸಮಸ್ಯೆ ಉಂಟಾಗಿ ಮೂರು ದಿನವಾಗಿದ್ದರೂ ಕೂಡ ಚಿತ್ರತಂಡಕ್ಕೆ ಮುಂಚಿತವಾಗಿಯೇ ಥಿಯೇಟರ್ ಓನರ್ ತಿಳಿಸದೇ ಇದ್ದದ್ದು ಚಿತ್ರತಂಡದ ಬೇಸರಕ್ಕೆ ಕಾರಣವಾಗಿದೆ. ಜೊತೆಗೆ ಸಂತೋಷ್ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರು ಬೇರೆ ಚಿತ್ರಮಂದಿರ ಹುಡುಕಿ ಹೋಗುವಂತಾಗಿದೆ.

ಆದರೆ ಮಲ್ಟಿಪ್ಲೆಕ್ಸ್ ನಲ್ಲಿ ಉತ್ತಮ ಪ್ರದರ್ಶನ ಕಂಡಿದೆ ಎಂದು ಚಿತ್ರತಂಡ ಸಮಾಧಾನಗೊಂಡಿದೆ. ಇನ್ನು ರಾಜ್ಯಾದ್ಯಂದ ಇತರ ಸ್ಥಳಗಳಲ್ಲಿ ಉತ್ತಮ ಪ್ರದರ್ಶನವಾಗುತ್ತಿದೆ. ಓರಿಯಾನ್ ಮಾಲ್ ನಲ್ಲಿ ಪ್ರೀಮಿಯರ್ ಶೋ ನಲ್ಲಿ ರಾಜ್ ಕುಟುಂಬದ ಎಲ್ಲಾ ಸದಸ್ಯರೂ ಉಪಸ್ಥಿತರಿದ್ದು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಧನ್ಯಾ ರಾಮ್ ಕುಮಾರ್ ಅವರ ಪ್ರಥಮ ಚಿತ್ರ ‘ನಿನ್ನ ಸನಿಹಕೆ’ ಗೆ ಸೂರಜ್ ಗೌಡ ನಾಯಕನಾಗಿ ಹಾಗೂ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

Comments are closed.