News from ಕನ್ನಡಿಗರು

ಕನ್ನಡ ಚಿತ್ರರಂಗದಲ್ಲಿ ಓವರ್ ರೇಟೆಡ್ ಕಲಾವಿದರು ಯಾರ್ಯಾರು ಗೊತ್ತೇ?? ಇವರನ್ನು ಬಿಟ್ಟು ಬೇರೆ ಸಾಕಷ್ಟು ಆಯ್ಕೆಗಳಿವೆ.

181

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಕೆಲವು ನಟರು ಹಾಗೂ ನಟನೆ ಹಾಗೂ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟವಾದರೆ ಇನ್ನು ಕೆಲವು ನಟರು ನಟನೆ ಹಾಗೂ ಚಿತ್ರಗಳು ಪದೇಪದೆ ನೋಡುವುದರಿಂದ ಅವರ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ ಹಾಗೂ ಅವರ ಕುರಿತಂತೆ ತಿರಸ್ಕಾರದ ಮನೋಭಾವಗಳು ಕೂಡ ಬರಲು ಪ್ರಾರಂಭವಾಗುತ್ತದೆ. ಇಂಥವರನ್ನು ಓವರ್ ರೇಟೆಡ್ ನಟರು ಎಂಬುದಾಗಿ ಕರೆಯುತ್ತಾರೆ. ಇನ್ನು ನಮ್ಮ ಚಿತ್ರರಂಗದಲ್ಲಿ ಕೂಡ ಅಂತಹ ಓವರ್ ರೇಟೆಡ್ ನಟರು ಕೂಡ ಇದ್ದಾರೆ ಅವರ ಕುರಿತಂತೆ ನಾವು ನಿಮಗೆ ಇಂದು ವಿವರವಾಗಿ ಹೇಳಲು ಹೊರಟಿದ್ದೇವೆ. ತಪ್ಪದೇ ಕೊನೆಯವರೆಗೂ ಓದಿ.

ಚಿಕ್ಕಣ್ಣ ರಾಕಿಂಗ್ ಸ್ಟಾರ್ ಯಶ್ ನಟನೆಯ ಕಿರಾತಕ ಚಿತ್ರದ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಂತಹ ಚಿಕ್ಕಣ್ಣ ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಈಗ ಬೇಡಿಕೆ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈಗ ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕ ನಟನಾಗಿ ಕೂಡ ಕಾಣಿಸಿಕೊಳ್ಳಲು ಹೋಗುತ್ತಿದ್ದಾರೆ. ಆದರೆ ಪ್ರೇಕ್ಷಕರ ಪ್ರಕಾರ ಬರಬರುತ್ತಾ ಚಿಕ್ಕಣ್ಣನವರು ಕಾಮಿಡಿ ಟಚ್ ಕಳೆದುಕೊಂಡಿದ್ದಾರೆ ಎಂಬುದು ಅವರ ಅಭಿಪ್ರಾಯವಾಗಿದೆ.

ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿರುವ ರಶ್ಮಿಕ ಮಂದಣ್ಣ ನವರು ಒಂದು ಕಾಲದಲ್ಲಿ ಕರ್ನಾಟಕ ಚಿತ್ರರಂಗದ ಕೃಷ್ ಎಂಬುದಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಇನ್ನು ಇದಾದ ನಂತರ ಪರಭಾಷೆಗಳಿಗೆ ಕಾಲಿಟ್ಟ ಮೇಲೆ ಕನ್ನಡ ಚಿತ್ರರಂಗದಲ್ಲಿ ನಟಿಸುವುದನ್ನು ರಶ್ಮಿಕ ಮಂದಣ್ಣ ಅವರು ಕಡಿಮೆ ಮಾಡಿದ್ದಾರೆ. ಹೀಗಾಗಿಯೇ ಕನ್ನಡದ ಚಿತ್ರ ವಿಮರ್ಶಕರು ರಶ್ಮಿಕಾ ಮಂದಣ್ಣ ನವರನ್ನು ಓವರ್ ರೇಟೆಡ್ ನಟಿ ಎಂಬುದಾಗಿ ಅಭಿಪ್ರಾಯಪಡುತ್ತಾರೆ.

ಅನುಶ್ರೀ ಇನ್ನು ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮ ರಿಯಾಲಿಟಿ ಶೋ ವಿಶೇಷ ಕಾರ್ಯಕ್ರಮ ಸಿನಿಮಾ ಸಂಬಂಧಿತ ಕಾರ್ಯಕ್ರಮ ಏನೇ ಇದ್ದರೂ ಕೂಡ ಅನುಶ್ರೀ ಅವರೇ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಪದೇಪದೇ ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರನ್ನು ನೋಡುವುದರಿಂದ ಆಗಿ ಕನ್ನಡ ಪ್ರೇಕ್ಷಕರಿಗೆ ಬೇರೆ ನಿರೂಪಕರು ಹಾಗೂ ನಿರೂಪಕರು ಇದ್ದಾರೆ ಎಂಬುದು ಮರೆತು ಹೋಗಿದೆ. ಹೀಗಾಗಿ ಪ್ರೇಕ್ಷಕರು ಬೇರೆ ನಿರೂಪಕರನ್ನು ಕೂಡ ಕಾಣಲು ಬಯಸುತ್ತಾರೆ. ಇದರಿಂದಾಗಿ ಅನುಶ್ರೀ ಅವರನ್ನು ಪ್ರೇಕ್ಷಕರು ಓವರ್ ರೇಟೆಡ್ ಎಂಬುದಾಗಿ ಕರೆಯುತ್ತಾರೆ.

ನಿಖಿಲ್ ಕುಮಾರ್ ಕನ್ನಡ ಚಿತ್ರರಂಗದ ಯುವರಾಜ ಎಂದೇ ಖ್ಯಾತರಾಗಿರುವ ನಟ ನಿಖಿಲ್ ಕುಮಾರ್ ಒಬ್ಬ ಮನುಷ್ಯನಾಗಿ ಹಾಗೂ ಜನನಾಯಕನಾಗಿ ಎಲ್ಲರಿಗೂ ಕೂಡ ತುಂಬಾನೇ ಇಷ್ಟವಾಗುತ್ತಾರೆ. ಆದರೆ ನಟನೆ ವಿಚಾರಕ್ಕೆ ಬಂದರೆ ಅವರ ನಟನೆ ಇನ್ನು ಕೂಡ ಪ್ರಬುದ್ಧವಾಗಿದೆ ಎಂಬುದು ಸಿನಿಮಾ ಪ್ರೇಕ್ಷಕರ ವಾದ. ಇನ್ನು ಇವರ ನಟನೆಯನ್ನು ನೋಡಲು ಕೂಡ ರಿಯಾಲಿಸ್ಟಿಕ್ ಅಂತ ಅನಿಸುವುದಿಲ್ಲ ಎಂಬುದು ಅವರ ಅನಿಸಿಕೆ. ಹೀಗಾಗಿ ಇವರು ಕೂಡ ಓವರ್ ರೇಟೆಡ್ ನಟರ ಪೈಕಿಯಲ್ಲಿ. ಸೇರುತ್ತಾರೆ.

Leave A Reply

Your email address will not be published.