ಸಂಜೆ ಚಳಿಗೆ ಬಿಸಿ ಬಿಸಿ ಹೆಸರುಬೇಳೆ ಪಕೋಡ ಮಾಡುವುದು ಹೇಗೆ ಗೊತ್ತೇ?? ಪಕ್ಕ ಕೇಳಿ ಕೇಳಿ ಮಾಡಿಸಿಕೊಳ್ತಾರೆ.

ನಮಸ್ಕಾರ ಸ್ನೇಹಿತರೇ, ಮಳೆಗಾಲ ಈಗಷ್ಟೇ ಶುರುವಾಗಿದೆ. ಇಡೀ ದಿನದ ವಾತಾವರಣ ಥಂಡಿಯಾಗಿರುತ್ತದೆ. ಸಂಜೆಯಾಗುತ್ತಿದ್ದಂತೆ, ಏನಾದರೂ ಬಿಸಿ ಬಿಸಿ ತಿನ್ನುವ ಬಯಕೆ ಉಂಟಾಗುತ್ತದೆ. ಅದಕ್ಕೆ ಮನೆಯಲ್ಲೇ ಮಾಡುವ ಹೊಸ ರುಚಿಯೊಂದನ್ನ ಹೇಳಿಕೊಡುತ್ತಿದ್ದೆವೆ ಬನ್ನಿ. ಪಕೋಡ ಅಂದರೇ ಈರುಳ್ಳಿ ಪಕೋಡ ಎಂದೇ ಹಲವಾರು ಜನ ಅಂದುಕೊಳ್ಳುತ್ತಾರೆ. ಆದರೇ ಹೊಸ ರೀತಿಯ ಪಕೋಡ ಹೇಳಿಕೊಡುತ್ತೆವೆ. ಹೆಸರು ಬೇಳೆ ಅಥವಾ ಮೂಂಗ್ ದಾಲ್ ನಿಂದ ಸಹ ಪಕೋಡ ಮಾಡಬಹುದು.

ಅದಕ್ಕೆ ಬೇಕಾಗುವ ಸಾಮಗ್ರಿಗಳು ಈ ಕೆಳಗಿನಂತಿವೆ. ಹೆಸರುಬೇಳೆ- 1ಕಪ್ ,ಹಸಿಮೆಣಸಿನಕಾಯಿ-೩, ಬೆಳ್ಳುಳ್ಳಿ-ಶುಂಠಿ ಪೇಸ್ಟ್- ಅರ್ಧ ಟೀ ಸ್ಪೂನ್ ,ಶುಂಠಿ- ಅರ್ಧ ಟೀ ಸ್ಪೂನ್,ಅಡುಗೆ ಎಣ್ಣೆ ಒಂದು ಕಪ್,ಕೊತ್ತಂಬರಿ ಸೊಪ್ಪು,ರುಚಿಗೆ ತಕ್ಕಷ್ಟು ಉಪ್ಪು,ಕೋತ್ತಂಬರಿ ಬೀಜ- 1 ಟೀ ಸ್ಪೂನ್, ಮೆಣಸಿನ ಪುಡಿ – ಅರ್ಧ ಟೀ ಸ್ಪೂನ್.

ಮಾಡುವ ವಿಧಾನ – ಮೊದಲು ಹೆಸರು ಬೇಳೆಯನ್ನು 3 ರಿಂದ ನಾಲ್ಕು ಗಂಟೆಗಳ ಕಾಲ ನೆನೆಸಿಟ್ಟಿರಬೇಕು. ನಂತರ ಮಿಕ್ಸಿ ಜಾರಿಗೆ ನೆನೆಸಿಟ್ಟ ಹೆಸರು ಬೇಳೆ, ಹಸಿಮೆಣಸಿನ ಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರುಬ್ಬಿಟ್ಟುಕೊಳ್ಳಬೇಕು. ಇದಕ್ಕೆ ಯಾವುದೇ ಕಾರಣಕ್ಕೂ ನೀರು ಸೇರಿಸಬಾರದು. ನಂತರ ರುಬ್ಬಿಕೊಂಡ ಮಿಶ್ರಣಕ್ಕೆ ಹಸಿ ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಅಡುಗೆ ಎಣ್ಣೆ ಹಾಕಿ ಆ ಮಿಶ್ರಣವನ್ನು ಚೆನ್ನಾಗಿ ಹದಗೊಳಿಸಿ ಇಟ್ಟುಕೊಂಡಿರಬೇಕು.

ನಂತರ ಬಾಣಲೆಯಲ್ಲಿ ಎಣ್ಣೆ ಕಾದ ನಂತರ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಬಾಣಲೆಗೆ ಬಿಡಬೇಕು. ಉಂಡೆಗಳು ಕಂದು ಬಣ್ಣ ಬರುವ ತನಕ ಕಾದು ಬಾಣಲೆಯಿಂದ ಹೊರಗೆ ತೆಗೆಯಬೇಕು. ನಂತರ ಈರುಳ್ಳಿ ಹಾಗೂ ಕ್ಯಾರೆಟ್ ತುರಿಯೊಂದಿಗೆ ಬಿಸಿ ಬಿಸಿ ಪಕೋಡವನ್ನು ಸವೆಯಬಹುದು. ನಿಮಗೆ ಹೆಚ್ಚು ಖಾರ ತಿನ್ನಲು ಇಷ್ಟಪಡುತ್ತಿರೆಂದರೇ, ಒಂದು ಪಾತ್ರೆಗೆ ಕರಿದ ಹೆಸರುಬೇಳೆ ಪಕೋಡವನ್ನು ಹಾಕಿ ಎರಡು ಚಮಚ ಮೆಣಸಿನ ಪುಡಿ ಹಾಗೂ ಅರ್ಧ ಚಮಚ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಬಿಸಿ ಬಿಸಿ ಪಕೋಡವನ್ನ ಬಾಯಲ್ಲಿಟ್ಟು ಚಪ್ಪರಿಸಿಕೊಂಡು ತಿಂದರೇ, ಸ್ವರ್ಗಕ್ಕೆ ಕಿಚ್ಚು ಹಚ್ಚುವುದಂತೂ ಗ್ಯಾರಂಟಿ. ಮತ್ತೇಕೆ ತಡ, ಬಿಸಿ ಬಿಸಿ ಹೆಸರುಬೇಳೆ ಪಕೋಡ ಮಾಡಿ, ಹೇಗಿತ್ತು ಅನ್ನುವುದನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Comments are closed.