ಪಂಚ ಮುಖದ ಶಿವನ ಬಗ್ಗೆ ನೀವು ತಿಳಿಯದ ಮಾಹಿತಿ. ಯಾರಿಗೂ ತಿಳಿಯದ ಮಾಹಿತಿ.

ನಮಸ್ಕಾರ ಸ್ನೇಹಿತರೇ, ತತ್ಪುರುಷ, ಅಘೋರ, ಸದ್ಯೋಜಾತ, ವಾಮದೇವ, ಈಶಾನ ಎಂದು ಐದು ಮುಖಗಳು.

ರುದ್ರದೇವರಿಗೆ: ಹಳದಿ, ಬಿಳಿ, ನಸುಗೆಂಪು, ಹಸಿರು, ಕಪ್ಪು – ಹೀಗೆ ಪಂಚರೂಪಗಳ ಐದು ವರ್ಣಗಳು ರುದ್ರದೇವರದ್ದು. ರುದ್ರದೇವರ ಮೈ ಬಣ್ಣವೆಲ್ಲಾ ಬಿಳಿಯದು. ಮೂರು ಕಣ್ಣಿನ ಮುಕ್ಕಣ್ಣನೆನಿಸಿಹ ರುದ್ರ ದೇವರು ಸಜ್ಜನರಿಗೆ ಜ್ನಾನ ಚಕ್ಷುವನ್ನೇ ನೀಡುತ್ತಾರೆ, ಕೆಟ್ಟವರ ಪಾಲಿಗೆ ಕೆಂಗಣ್ಣನಾಗಿ ಬದುಕನ್ನೇ ಬೂದಿಮಾಡುತ್ತಾರೆ.

ಅಮೃತ ಮಥನ ಮಾಡುವಾಗ ಮೊದಲು ಬಂದ ಹಾಲಾಹಲವೆಂಬ ಭಯಂಕರ ವಿ’ಷವನ್ನು ಕುಡಿದಾಗ ಅದು ಕುತ್ತಿಗೆಗೆ ಬರುವಷ್ಟರಲ್ಲಿಯೇ ವಿಷವು ಅಲ್ಲೇ ನಿಂತು ಬಿಟ್ಟದ್ದರಿಂದ ರುದ್ರದೇವರಿಗೆ ವಿಷಕಂಠನೆಂದೂ, ನೀಲಗ್ರೀವನೆಂದೂ ಹೆಸರು ಉಂಟಾಯಿತು. ವಿಷ ಪ್ರಾಶನ ಮಾಡಿದಾಗ ಅದರ ಭಾದೆಯನ್ನು ತಡೆಯಲಾರದೆ ಅತ್ತು ಬಿಟ್ಟರು.

ಈ ರೋ’ಧನದ ಕಾರಣ ರುದ್ರರೆಂದೂ ಹೆಸರು ಉಂಟಾಯಿತು. ರುದ್ರದೇವರು ಅಚ್ಚುತ, ಅನಂತ, ಗೋವಿಂದ ಎಂಬ ನಾಮತ್ರಯ ಪ್ರಭಾವದಿಂದಲೇ ವಿಷಪ್ರಾಶನ ಮಾಡಿದರೆಂದು ಪುರಾಣಗಳಲ್ಲಿ ಉಕ್ತವಾಗಿದೆ.

ಭೃಗುಋಷಿಗಳ ಶಾಪದ ಪ್ರಯುಕ್ತ ಶಿವನಿಗೆ ನಿಜವಾದ ಆಕಾರಕ್ಕೆ ಪೂಜೆಯಿಲ್ಲ. “ ಯೋನಿಲಿಂಗರೂಪವಾಗಿಯೇ ಲೋಕದಲ್ಲಿ ಪೂಜೆ ದೊರಕಲಿ “ ಎಂದು ಶಾಪವಿತ್ತಿದ್ದರು.

ಭೃಗುವಿನಿಂದ ತ್ರಿಮೂರ್ತಿಗಳ ಪರೀಕ್ಷೆಯು ಶ್ರೀ ಮದ್ಭಾಗವತದ ದಶಮ ಸ್ಕಂದದಲ್ಲಿ ಉಕ್ತವಾಗಿದೆ.
ಅಜ್ನಾನವನ್ನು ಪರಿಹರಿಸಿ ಜ್ನಾನವನ್ನು ಕೊಡತಕ್ಕವನು ಗುರುವಾದುದರಿಂದ ಅಂತಹ ಗುರುವಿನ ಲಕ್ಷಣವು ಮಹಾದೇವನಿಗೆ ಇರುವ ಪ್ರಯುಕ್ತ ರುದ್ರನನ್ನು ಗುರುವೆಂದು ಹೇಳುವುದರಲ್ಲಿ ಯಾವ ಸಂಕೋಚಕ್ಕೂ ಅವಕಾಶವಿಲ್ಲ.

ಆರೋಗ್ಯ ಭಾಗ್ಯವನ್ನು ನೀಡುವವನು ಮಂಗಳರೂಪಿಯಾದ ಶಿವನು. ಧ್ಯಾನ ಮಾಡಬೇಕಾದರೆ ಏಕಾಗ್ರತೆಯನ್ನು ನೀಡುವವನು ಮನೋನಿಯಾಮಕ ಶಿವನು. ಮಹಾ ವಿಷ್ಣು ಭಕ್ತನೆಂಬುವುದನ್ನು ಶ್ರೀ ವಾದಿರಾಜರು ತಾವು ರಚಿಸಿದ “ ಹರಿಭಕ್ತಿ ಲತಾ “ ಗ್ರಂಥದಲ್ಲಿ ಸಮರ್ಥಿಸಿದ್ದಾರೆ

Comments are closed.