ಕೇವಲ ಐದು ಸಾವಿರಕ್ಕೆ ಪೋಸ್ಟ್ ಆಫೀಸ್ ತೆರೆದು ಪ್ರತಿ ತಿಂಗಳು ಲಾಭ ಗಳಿಸಿ, ಫ್ರಾಂಚೈಸ್ ತೆಗೆಯುದುವು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ದೇಶದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಎನಿಸಿರುವ ಅಂಚೆ ಕಚೇರಿಯಲ್ಲಿ ಸಾಕಷ್ಟು ಉಳಿತಾಯ ಯೋಜನೆಗಳು, ಜನರಿಗೆ ಉಪಯೋಗವಾಗುವಂಥ ಇನ್ನೂ ಹಲವಾರು ಪ್ರಯೋಜನಗಳನ್ನು ಒದಗಿಸುತ್ತಿದೆ. ಇದರ ಜೊತೆಗೆ ಸ್ವಯಂ ಉದ್ಯೋಗ ಶುರುಮಾಡುವ ಆಸಕ್ತಿ ಇರುವರಿಗೆ ಕೂಡ ಭಾರತೀಯ ಅಂಚೆ ಅತ್ಯುತ್ತಮ ಅವಕಾಶವೊಂದನ್ನು ಒದಗಿಸುತ್ತದೆ. ಅದುವೇ ಅಂಚೆ ಫ್ರಾಂಚೈಸಿ. ಬನ್ನಿ ಈ ಫಾಂಚೈಸಿ ಹೇಗೆ ತೆರೆಯಬಹುದು? ಏನೇಲ್ಲಾ ದಾಖಲೆಗಳು ಬೇಕು ನೋಡೋಣ.

ಭಾರತೀಯ ಪೋಸ್ಟ್ ಆಫೀಸ್ ನ ಫ್ರಾಂಚೈಸಿಯನ್ನು ನೀವಿರುವ ಜಾಗದಲ್ಲಿಯೇ ಕಡಿಮೆ ಹಣದಲ್ಲಿ ಶುರು ಮಾಡಬಹುದು. ಇದಕ್ಕೆ ಮುಖ್ಯವಾಗಿ ಹೊಂದಿರಬೇಕಾದ ಅರ್ಹತೆಗಳೆಂದರೆ, ನೀವು ಭಾರತೀಯ ಪ್ರಜೆಯಾಗಿರಬೇಕು. ನಿಮಗೆ ಕನಿಷ್ಟ 18 ವರ್ಷ ವಯಸ್ಸಿನವರಾಗಿರಬೇಕು. ನೀವು ಯಾವುದೇ ಕ್ರಿಮಿನಲ್ ಅಪರಾಧವೆಸಗಿ ಶಿಕ್ಷ್ ಅನುಭವಿಸಿದವರಾಗಿರಬಾರದು. ಅಧಿಕೃತವಾದ- ಮಾನ್ಯವಾದ ವ್ಯಾಪಾರ ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ಒದಗಿಸಬೇಕು.

ಪೋಸ್ಟ್ ಆಫೀಸ್ ಫ್ರ್ಯಾಂಚೈಸಿ ಸ್ಕೀಮ್ಗೆ ಅರ್ಜಿಸಲ್ಲಿಸಲು ಅಭ್ಯರ್ಥಿಯು ಭಾರತದ ನಾಗರಿಕ ಅಥವಾ ಖಾಯಂ ನಿವಾಸಿಯಾಗಿರಬೇಕು. ಪೋಸ್ಟ್ ಆಫೀಸ್ ಫ್ರ್ಯಾಂಚೈಸಿಗೆ ಅರ್ಜಿ ಸಲ್ಲಿಸುವಿಗೆ 30 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 30 ವರ್ಷಕ್ಕಿಂತ ಮೇಲ್ಪಟ್ಟವರಾದರೂ ಫ್ರಾಂಚೈಸಿ ತೆರೆಯಲು ಅವಕಾಶ ದೊರೆಯುತ್ತದೆ. ಫ್ರಾಂಚೈಸಿಕೊಳ್ಳುವವರು ಕನಿಷ್ಠ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಇನ್ನು ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ಪೋಸ್ಟ್ ಆಫೀಸ್‌ ಫ್ರಾಂಚೈಸಿಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿಗಳಿಗಾಗಿ, ಅರ್ಜಿದಾರರು ಅಂಚೆ ಇಲಾಖೆಯ indiapost.gov.in ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯ ನಂತರ ಅರ್ಜಿದಾರರಿಗೆ ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಒದಗಿಸಲಾಗುತ್ತದೆ. ಇದನ್ನು ಬಳಸಿಕೊಂಡು, ಅರ್ಜಿದಾರರು ಆನ್‌ಲೈನ್ ಅಪ್ಲಿಕೇಶನ್ ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು. ಇಲ್ಲಿ ನಿಮಗೆ ಎಲ್ಲಾ ಮಾಹಿತಿಗಳೂ ಲಭ್ಯವಿರುತ್ತವೆ.

ನಿಮ್ಮ ಅರ್ಜಿಯನ್ನು ಸ್ವೀಕರಿಸಿದ ನಂತರ, ನೀವು ಪೋಸ್ಟ್ ಆಫೀಸ್ ಫ್ರಾಂಚೈಸಿನೊಂದಿಗೆ ಒಪ್ಪಂದಕ್ಕೆ ಸಹಿ ಮಾಡಬೇಕಾಗುತ್ತದೆ. ಎಲ್ಲಾ ನಿಯಮಗಳನ್ನು ಒಪ್ಪಿಕೊಂಡು ಅದಕ್ಕೆ ಬದ್ಧರಾಗಿರಬೇಕಾಗುತ್ತದೆ. ಇನ್ನು ಪೋಸ್ಟ್ ಆಫೀಸ್ ವ್ಯವಹಾರವನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಸಾಮಗ್ರಿಗಳು ಮತ್ತು ಸಂಪನ್ಮೂಲಗಳನ್ನು ಒಳಗೊಂಡಿರುವ ಸ್ಟಾರ್ಟ್-ಅಪ್ ಕಿಟ್ ಅನ್ನು ನಿಮಗೆ ನೀಡಲಾಗುತ್ತದೆ. ಪೋಸ್ಟ್ ಆಫೀಸ್ ಫ್ರ್ಯಾಂಚೈಸಿ ಯೋಜನೆಗೆ ಅರ್ಜಿ ಶುಲ್ಕ ರೂ. 5000. ಇದನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಈ ವಿಳಾಸಕ್ಕೆ ಕಳುಹಿಸಬೇಕು. ಅಸಿಸ್ಟೆಂಟ್ ಡೈರೆಕ್ಟರ್ ಜನರಲ್, ಪೋಸ್ಟ್ ಡಿಪಾರ್ಟ್ಮೆಂಟ್, ನವದೆಹಲಿ. ಎಸ್ ಸಿ, ಎಸ್ ಟಿ ಮತ್ತು ಮಹಿಳಾ ಅರ್ಜಿದಾರರಿಗೆ ಯಾವುದೇ ಅರ್ಜಿ ಶುಲ್ಕವೂ ಇರುವುದಿಲ್ಲ.

ಪೋಸ್ಟ್ ಆಫೀಸ್ ಫ್ರ್ಯಾಂಚೈಸಿ ಯೋಜನೆಗಾಗಿ ಅರ್ಜಿ ಸಲ್ಲಿಸಲು ಬೇಕಾಗುರುವುದು ಇಷ್ಟೇ. ನಿಮ್ಮ ಗುರುತಿನ ಪುರಾವೆ, ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಮತ್ತು ವಯಸ್ಸಿನ ಪುರಾವೆ ಸಲ್ಲಿಸಬೇಕು. ಜಾತಿ ಪ್ರಮಾಣಪತ್ರಗಳ ಪ್ರತಿ ಒಂದು ಪೋಟೋಕಾಪಿಯನ್ನು ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ indiapost.gov.in ಭೇಟಿ ಕೊಡಿ.

Comments are closed.