ಪ್ರಿಯಾ ಮಲೀಕ್ ವಿಷಯದಲ್ಲಿ ಎಡವಟ್ಟು ಮಾಡಿಕೊಂಡ ಇಬ್ಬರು ಭಾರತೀಯ ಕ್ರಿಕೇಟ್ ಆಟಗಾರರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯ ಸಂಪೂರ್ಣ ವಿಶ್ವದ ಕಣ್ಣು ಜಪಾನ್ ನಲ್ಲಿ ನಡೆಯುತ್ತಿರುವ ಟೋಕಿಯೋ ಒಲಂಪಿಕ್ಸ್ ಮೇಲೆ ನೆಟ್ಟಿದೆ. ಯಾರು ಯಾವ ಸ್ಪರ್ಧೆಗಳಲ್ಲಿ ಯಾವ ಪದಕ ಗೆದ್ದರು, ಅಂಕಪಟ್ಟಿಯಲ್ಲಿ ಯಾವ ದೇಶ ಮೇಲಿದೆ, ಯಾವ ದೇಶ ಕೆಳಗಿದೆ, ನಾಳಿನ ಸ್ಪರ್ಧೆಗಳಲ್ಲಿ ಯಾರು ಭಾಗವಹಿಸುತ್ತಾರೆ ಹೀಗೆ ಸಾಲು ಸಾಲು ಕುತೂಹಲಗಳು ಒಲಂಪಿಕ್ಸ್ ಮೇಲೆ ನೆಟ್ಟಿವೆ. ಈ ನಡುವೆ ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಮೊದಲ ದಿನವೇ ಬೆಳ್ಳಿ ಪದಕ ಗೆದ್ದಿದ್ದಂತು ಭಾರತೀಯ ಒಲಂಪಿಕ್ಸ್ ಇತಿಹಾಸಕ್ಕೆ ನಿಜಕ್ಕೂ ದಾಖಲೆಯೇ ಸರಿ. 49 ಕೆಜಿವರೆಗಿನ ಸ್ಪರ್ಧೆಯಲ್ಲಿ ಒಟ್ಟು 215 ಕೆಜಿ ಭಾರ ಎತ್ತಿ ಬೆಳ್ಳಿ ಪದಕವನ್ನು ಮೀರಾಬಾಯಿ ಚಾನು ಪಡೆದುಕೊಂಡರು. ಮೀರಾಬಾಯಿ ಚಾನುರವರ ಈ ಪ್ರದರ್ಶನಕ್ಕೆ ಭರಫೂರ ಶುಭಾಶಯಗಳು ದೇಶಾದ್ಯಂತ ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಗಣ್ಯಾತಿಗಣ್ಯರೆಲ್ಲಾ ಮೀರಾಬಾಯಿಯವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಈ ಮಧ್ಯೆ ಇಂದು ಹಂಗರಿಯಲ್ಲಿ ನಡೆಯುತ್ತಿದ್ದ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನ ಮಹಿಳಾ ವಿಭಾಗದಲ್ಲಿ ಇಂದು ಭಾರತೀಯ ಮಹಿಳಾ ಕುಸ್ತಿಪಟು ಪ್ರಿಯಾ ಮಲಿಕ್ ಭಾರತದ ಪರ ಸ್ಪರ್ಧಿಸಿ ಚಿನ್ನದ ಪದಕ ಗೆದ್ದರು. ಆ ಫೋಟೋಗಳು ಸಹ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದವವು. ಈ ಮಧ್ಯೆ ಪ್ರಿಯಾ ಮಲಿಕ್ ಸಹ ಟೋಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ ಎಂಬ ಗುಲ್ಲು ಸಹ ಬಹುಬೇಗ ಹರಡಿತು. ಸೋಶಿಯಲ್ ಮೀಡಿಯಾಗಳಲ್ಲಿ ಹಲವಾರು ಜನ ಭಾರತಕ್ಕೆ ಟೋಕಿಯೋ ಒಲಂಪಿಕ್ಸ್ ನಲ್ಲಿ ಏರಡನೇ ಪದಕ ಎಂದು ಹಾಕಿದ್ದ ಸ್ಟೇಟಸ್ ಗಳು ವೈರಲ್ ಸಹ ಆದವು. ಅದನ್ನ ನಂಬಿ ಹಲವಾರು ಜನ ಸಹ ಅದನ್ನೇ ಕಾಪಿ & ಪೇಸ್ಟ್ ಮಾಡಿದರು.

ಇನ್ನು ಇಂಗ್ಲೆಂಡ್ ನಲ್ಲಿರುವ ಭಾರತೀಯ ಕ್ರಿಕೇಟರ್ ಗಳಾದ ಹನುಮ ವಿಹಾರಿ ಮತ್ತು ಇಶಾಂತ್ ಶರ್ಮಾ ಇದನ್ನೇ ನಂಬಿ ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನ ಗೆದ್ದು ತಂದುಕೊಟ್ಟ ಪ್ರಿಯಾ ಮಲೀಕ್ ಗೆ ಹಾರ್ದಿಕ ಅಭಿನಂದನೆಗಳು ಎಂಬ ಸ್ಟೇಟಸ್ ಹಾಕಿದರು. ಕೊನೆಗೆ ಪ್ರಿಯಾ ಮಲಿಕ್ ಚಿನ್ನ ಗೆದ್ದಿದ್ದು ಹಂಗೇರಿಯಲ್ಲಿ ಎಂಬ ವಿಷಯವನ್ನ ಅಭಿಮಾನಿಗಳು ಕಮೆಂಟ್ ಸೆಕ್ಷನ್ ನಲ್ಲಿ ಒಂದೇ ಸಮನೆ ಹಾಕತೊಡಗಿದ ನಂತರ ಸತ್ಯ ತಿಳಿದ ಹನುಮ ವಿಹಾರಿ ಮತ್ತು ಇಶಾಂತ್ ಶರ್ಮಾ ಆ ಸ್ಟೇಟಸ್ ನ್ನ ಡಿಲೀಟ್ ಮಾಡಿದ್ದಾರೆ.

ಇನ್ನು ಸದ್ಯ ಲಂಡನ್ ನಲ್ಲಿರುವ ಹನುಮ ವಿಹಾರಿ ಮತ್ತು ಇಶಾಂತ್ ಶರ್ಮಾ ಇಂಗ್ಲೇಂಡ್ ವಿರುದ್ದ ಆಗಸ್ಟ್ 4 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶಕ್ಕಾಗಿ ಕಾದು ನೋಡುತ್ತಿದ್ದಾರೆ. ಇಶಾಂತ್ ಶರ್ಮಾ ಆಡುವ ಹನ್ನೊಂದರ ಬಳಗದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರೇ, ಇನ್ನು ಹನುಮ ವಿಹಾರಿ ಸ್ಥಾನ ತಂಡದ ಸಂಯೋಜನೆ ಮೇಲೆ ನಿಂತಿದೆ. ಏಳು ತಜ್ಞ ಬ್ಯಾಟ್ಸಮನ್ ಮತ್ತು ನಾಲ್ವರು ವೇಗದ ಬೌಲರ್ ಜೊತೆ ತಂಡ ಆಡುತ್ತದೆ ಎಂದರೇ ಮಾತ್ರ ಹನುಮ ವಿಹಾರಿ ಆಡುವ ಹನ್ನೊಂದರ ಬಳಗದೊಳಗೆ ಸ್ಥಾನ ಪಡೆಯಲಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.