ಪ್ರೇಕ್ಷಕರ ಮನಗೆದ್ದಿದ್ದ ಪ್ರಶಾಂತ್ ಸಂಭರ್ಗಿ ರವರ ವಿರುದ್ಧ ಅಸಮಾಧಾನಗೊಂಡ ಪ್ರೇಕ್ಷಕರು ಯಾಕೆ ಗೊತ್ತೇ?? ಕೊನೆ ಕ್ಷಣದಲ್ಲಿ ಇವೆಲ್ಲ ಬೇಕಿತ್ತಾ??

Entertainment

ನಮಸ್ಕಾರ ಸ್ನೇಹಿತರೇ ಬಿಗಬಾಸ್ ಸೀಸನ್ 8 ರ ಗ್ರಾಂಡ್ ಫಿನಾಲೆ ಹತ್ತಿರ ಬರುತ್ತಿದ್ದಂತೆ ಮನೆಯಲ್ಲಿ ಜಗಳಗಳು ಜೋರಾಗಿವೆ. ಮೊದಲು ಪ್ರಶಾಂತವಾಗಿದ್ದ ಮನೆ ಈಗ ಸಣ್ಣ ಸಣ್ಣ ವಿಷಯಕ್ಕೂ ಕಲಹಗಳಲ್ಲೇ ಮುಳುಗಿರುತ್ತದೆ. ಈ ಮಧ್ಯೆ ಸ್ಪರ್ಧಿಗಳ ನಾಲಿಗೆ ಸಹ ಬೇಕಾದ ರೀತಿಯಲ್ಲಿ ಹೊರಳುತ್ತಿದ್ದು, ಯಾವ ಮಾತುಗಳಿಗೂ ಸ್ಪಷ್ಟತೆ ಸಿಗುತ್ತಿಲ್ಲ. ಒಳಗೊಂದು ಹೊರಗೊಂದು ಎಂಬ ಮಾತುಗಳೇ ಬಹಳಷ್ಟು ಕೇಳಬರುತ್ತಿವೆ.

ಪ್ರಶಾಂತ್ ಸಂಬರ್ಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಬಿಗ್ ಬಾಸ್ ಸೀಸನ್ – 8 ರ ಅತ್ಯಂತ ವಿವಾದಾತ್ಮಕ ಸ್ಪರ್ಧಿಗಳು. ಮೊದಲು ಇಬ್ಬರು ಸೇರಿ ಬೇರೆ ಸ್ಪರ್ಧಿಗಳನ್ನ ಕಿಚಾಯಿಸುತ್ತಿದ್ದರು. ಆದರೇ ಎರಡನೇ ಇನ್ನಿಂಗ್ಸ್ ಶುರುವಾದ ನಂತರ ಇಬ್ಬರ ಮಧ್ಯೆ ಮೊದಲಿನ ಬಾಂದವ್ಯ ಉಳಿದಿಲ್ಲ. ಕಳೆದ ವಾರ ಇತರ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದಕ್ಕೆ, ಹಾಗೂ ಚಕ್ರವರ್ತಿ ಚಂದ್ರಚೂಡ್ ಸುಳ್ಳು ಹೇಳಿದ್ದಕ್ಕೆ ಪ್ರಶಾಂತ್ ಮತ್ತು ಚಕ್ರವರ್ತಿ ನಡುವೆ ದೊಡ್ಡ ಜಗಳ ನಡೆದಿತ್ತು. ನಂತರ ಚಕ್ರವರ್ತಿ ಚಂದ್ರಚೂಡ್ ಸುಳ್ಳು ಹೇಳಿದ್ದು ಸಾಬೀತಾಗಿತ್ತು. ಆ ಘಟನೆಯ ನಂತರ ಪ್ರಶಾಂತ್ – ಚಕ್ರವರ್ತಿ ಪರಸ್ಪರ ಅಷ್ಟು ಮಾತನಾಡಿರಲಿಲ್ಲ. ಈ ಮಧ್ಯೆ ಬೇರೆ ಸ್ಪರ್ಧಿಗಳ ಜೊತೆ ಸಹ ಪ್ರಶಾಂತ್ ಸಂಬರ್ಗಿ ಈ ವಿಷಯ ಪ್ರಸ್ತಾಪಿಸಿದ್ದರು. ನಾನು ಚಕ್ರವರ್ತಿ ಜೊತೆ ಹೆಚ್ಚು ಮಾತನಾಡುವುದಿಲ್ಲ ಎಂದು.

ಆದರೇ ನಿನ್ನೆಯ ಏಪಿಸೋಡ್ ನಲ್ಲಿ ದಿವ್ಯಾ ಉರುಡುಗ ರವರಿಗೆ ಕಿಚ್ಚನ ಚಪ್ಪಾಳೆ ದೊರೆತ ಕಾರಣ ಪ್ರಶಾಂತ್ ಮತ್ತು ಚಕ್ರವರ್ತಿ ಹೊಟ್ಟೆಕಿಚ್ಚಿನಿಂದ ಮಾತನಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎಂಬುದನ್ನ ಸಾಬೀತು ಪಡಿಸಿದ್ದಾರೆ. ಈ ನಡುವೆ ಮನೆಯ ಇತರ ಸ್ಪರ್ಧಿಗಳ ಹತ್ತಿರ ಒಳ್ಳೆಯವವರು ಎನಿಸಿಕೊಳ್ಳಲು , ಪ್ರಶಾಂತ್ ಸಂಬರ್ಗಿ, ಚಕ್ರವರ್ತಿಯವರ ಬಳಿ ಡಬಲ್ ಗೇಮ್ ಆಡುತ್ತಿದ್ದಾರಾ ಎಂಬ ಚರ್ಚೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿಬರುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *