ಪ್ರಣೀತಾ ಸುಭಾಷ್ ಪತಿ ನಿತಿನ್ ರಾಜ್ ನಿಜಕ್ಕೂ ಯಾರು ಗೊತ್ತೇ? ಮದುವೆಯಾದ ಒಂದೇ ದಿನಕ್ಕೆ ಏನಾಗಿದೆ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟಿಯರು ಬರ್ತಾರೆ ಆದರೆ ಕನ್ನಡದ ಪ್ರೇಕ್ಷಕರು ಅವರನ್ನು ನೆನಪಿಟ್ಟುಕೊಳ್ಳುವಂತಹ ನಟನೆ ಮಾಡುವವರು ಸಿಗೋದು ಅಪರೂಪ. ಕೆಲವರು ತಮ್ಮ ನಟನೆ ಹಾಗೂ ಮುಖಭಾವದಿಂದ ಪ್ರೇಕ್ಷಕರ ಮನ ಗೆದ್ದು ಇಂದಿಗೂ ಕೂಡ ಕನ್ನಡಿಗರ ಮರ ಮನೆಯಲ್ಲಿ ಕೂಡ ನೆಲೆಸಿದ್ದಾರೆ. ಅಂತಹವರಲ್ಲಿ ಒಬ್ಬರು ಈ ನಟಿ ಕೂಡ ಹೌದು ನಾವು ಮಾತನಾಡುತ್ತಿರುವುದು ನಟಿ ಪ್ರಣೀತಾ ಸುಭಾಷ್ ಅವರ ಬಗ್ಗೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ನಟನೆಯ ಚಿತ್ರದಲ್ಲಿ ನಾಯಕನಟಿ ಆಗುವುದರ ಮೂಲಕ ಪ್ರಣಿತ ಸುಭಾಷ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುತ್ತಾರೆ. ಮೊದಲ ಚಿತ್ರದಲ್ಲೇ ಸ್ಟಾರ್ ನಟನ ಜೊತೆಗೆ ಅವಕಾಶ ಸಿಕ್ಕಿದ್ದು ಪ್ರಣಿತಾ ಸುಭಾಷ್ ಸಿನಿ ಜೀವನಕ್ಕೆ ಒಂದೊಳ್ಳೆ ಆರಂಭ ಎಂದು ಹೇಳಬಹುದು. ಅದಾದ ನಂತರ ಪ್ರಣಿತಾ ಸುಭಾಷ್ ಅವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷಾ ಚಿತ್ರರಂಗದಲ್ಲಿ ಕೂಡ ಸರಿಯಾಗಿ ಬೇಡಿಕೆಯ ನಟಿಯಾಗಿ ಮಿಂಚಿದವರು.

ಇಂದಿಗೂ ಕೂಡ ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಗೆ ಕೂಡ ಕಾಲಿಟ್ಟು ಮಿಂಚಿದವರು ನಟಿ ಪ್ರಣೀತಾ ಸುಭಾಷ್. ಪ್ರಣಿತ ಸುಭಾಷ್ ಕನ್ನಡಚಿತ್ರರಂಗದಲ್ಲಿ ನಟಿಸಿದ್ದು ಬೆರಳೆಣಿಕೆ ಚಿತ್ರಗಳಾದರೂ ಕನ್ನಡ ಹಾಗು ಕನ್ನಡ ಸಂಸ್ಕೃತಿಯ ಬಗ್ಗೆ ಅವರಿಗಿದ್ದ ಅಭಿಮಾನ ಅಪಾರ. ಅದಕ್ಕೆ ಒಂದು ಒಳ್ಳೆಯ ಉದಾಹರಣೆಯೆಂದರೆ ಲಾಕ್ಡೌನ್ ಸಮಯದಲ್ಲಿ ನಟಿ ಪ್ರಣೀತಾ ಸುಭಾಷ್ ಅವರು ತಮ್ಮ ಟ್ರಸ್ಟ್ ನ ಮೂಲಕ ಬಡ ಜನರ ಹಸಿವನ್ನು ನೀಗಿಸುವ ಪ್ರಶಂಸಾರ್ಹ. ಕೆಲವು ನಟಿಯರು ಪರದೆ ಮೇಲೆ ನಾಯಕಿಯರಾದರೆ ನಟಿ ಪ್ರಣೀತಾ ಸುಭಾಷ್ಪರದೆಗೂದ ಮೀರಿ ನಿಜಜೀವನದಲ್ಲೂ ಬಡಜನರ ಬಾಳಿಗೆ ಬೆಳಗಾಗುವುದರ ಮೂಲಕ ನಿಜವಾದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಹಲವಾರು ಸಂಸ್ಥೆಗಳ ಜೊತೆಗೂಡಿ ಈ ಕಠಿಣ ಸಮಯದಲ್ಲಿ ಬಡಜನರ ಪಾಲಿಗೆ ಅವರ ಅಸಹಾಯಕತೆಗೆ ನೆರವಾಗಿದ್ದಾರೆ. ಆದರೆ ಇಷ್ಟೆಲ್ಲ ಮಾಡಿರುವ ನಟಿ ಪ್ರಣಿತ ಸುಭಾಷ್ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಕ್ಷಮೆ ಕೋರಿದ್ದಾರೆ. ಕ್ಷಮೆ ಕೋರಿದ್ದಾರೆ ಎಂದ ಮಾತ್ರಕ್ಕೆ ಅವರು ತಪ್ಪು ಮಾಡಿದ್ದಾರೆ ಎಂದಲ್ಲ ಅದಕ್ಕೆ ನಿಜವಾದ ಕಾರಣವನ್ನು ನಾವು ಹೇಳುತ್ತೇವೆ ಬನ್ನಿ. ಹೌದು ಮೇ 30ರಂದು ನಟಿ ಪ್ರಣೀತಾ ಸುಭಾಷ್ ತಮ್ಮ ಬಹುಕಾಲದ ಗೆಳೆಯ ಹಾಗೂ ಖ್ಯಾತ ಉದ್ಯಮಿ ನಿತಿನ್ ರಾಜು ರವರೊಂದಿಗೆ ಬೆಂಗಳೂರಿನಲ್ಲಿ ಸರಳವಾಗಿ ವಿವಾಹವಾದರು.

ಇನ್ನೂ ನಟಿ ಪ್ರಣಿತ ಸುಭಾಷ್ ಅವರ ಪತಿ ಇತಿನ ರಾಜು ಕೂಡ ಹಲವಾರು ಕಂಪನಿಗಳ ನಿರ್ದೇಶಕರಾಗಿ ಕೆಲಸ ಮಾಡಿದ ಮೇಧಾವಿ ಈಗ ತಮ್ಮದೇ ಸಂಸ್ಥೆಯ ಮೂಲಕ ನೂರಾರು ಜನಗಳಿಗೆ ಕೆಲಸ ನೀಡಿದ ಬಿಸಿನೆಸ್ ಮ್ಯಾನ್. ಇನ್ನು ಪ್ರಣಿತ ಸುಭಾಷ್ ಅವರು ಕ್ಷಮೆಕೋರಿದ ಕಾರಣವೇನೆಂದರೆ ಇವರ ಮದುವೆಯ ವಿಚಾರವನ್ನು ಯಾರಿಗೂ ಹೊರಗಡೆ ತಿಳಿಸಲಾಗಿ ರಲಿಲ್ಲ ಯಾರಿಗೂ ಆಹ್ವಾನ ನೀಡಿಲ್ಲ. ಈಗಿರುವ ಪರಿಸ್ಥಿತಿ ಕಾರಣದಿಂದಾಗಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಇದರಿಂದಾಗಿ ಯಾರಿಗಾದರೂ ನೋವಾಗಿದ್ದರೆ ನನ್ನನ್ನು ಕ್ಷಮಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ನಟಿ ಪ್ರಣೀತಾ ಸುಭಾಷ್. ಪ್ರಣಿತ ಸುಭಾಷ್ ಅವರ ನವಜೀವನಕ್ಕೆ ಶುಭಾಶಯಗಳನ್ನು ಕೋರುತ್ತಾ ಅವರ ಬಗ್ಗೆ ಹಾಗೂ ಅವರ ಮದುವೆ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ತಿಳಿಸಿ.

Comments are closed.