ಪುನೀತ್ ರಾಜಕುಮಾರ್ ರವರಿಗೆ ಆಯಸ್ಸು ಕಡಿಮೆ ಎನ್ನುವ ವಿಚಾರ ಅಣ್ಣಾವರಿಗೆ ಮೊದಲೇ ತಿಳಿದಿತ್ತಾ?? ಅಣ್ಣಾವ್ರು ಅಂದು ಮಾಡಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಕಳೆದ 11 ದಿನಗಳಿಂದ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತ ದೇಶದಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಆಗಲಿರುವ ದುಃಖವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಸ್ಟಾರ್ ಸೆಲೆಬ್ರಿಟಿಗಳು ಹಂಚಿಕೊಂಡು ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದಾರೆ. ಇಂದಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂಬ ಸತ್ಯವನ್ನು ಕಲ್ಪನೆ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಣ್ಣಾವ್ರ ಕಿರಿಯಮಗ. ಅಣ್ಣಾವ್ರಿಗೆ ಒಟ್ಟು ಐದು ಜನ ಮಕ್ಕಳು. ಅದರಲ್ಲಿ ಮೂರು ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳು. ಇನ್ನು ಮೊದಲು ಅಣ್ಣಾವ್ರು ಬೇಡರ ಕಣ್ಣಪ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಪಾದಾರ್ಪಣೆ ಮಾಡಿದ್ದರಿಂದಾಗಿ ಮೊದಲ ಮಗನಿಗೆ ಶಿವರಾಜಕುಮಾರ್ ಎಂಬುದಾಗಿ ಹೆಸರನ್ನು ಇಡುತ್ತಾರೆ. ಇನ್ನು ಅಣ್ಣಾವ್ರು ರಾಘವೇಂದ್ರರಾಯರ ಪರಮಭಕ್ತರು.

ಹೀಗಾಗಿ ತಮ್ಮ ಎರಡನೇ ಮಗನಾದ ರಾಘವೇಂದ್ರ ರಾಜಕುಮಾರ್ ಅವರಿಗೆ ರಾಯರ ಹೆಸರನ್ನು ಇಡುತ್ತಾರೆ. ಇನ್ನು ಮೂರನೇ ಗಂಡುಮಗ ಅಪ್ಪು ಅವರಿಗೆ ಅಣ್ಣಾವ್ರು ತಾವು ಇಷ್ಟಪಟ್ಟಿರುವ ಹರಿಶ್ಚಂದ್ರ ಚಿತ್ರದ ಹರಿಶ್ಚಂದ್ರನ ಮಗ ಲೋಹಿತಾಶ್ವನ ಹೆಸರನ್ನು ಲೋಹಿತ್ ಎನ್ನುವುದಾಗಿ ಇಡುತ್ತಾರೆ. ಶಿವಣ್ಣ ನಿಗಿಂತ ಪುನೀತ್ ರಾಜಕುಮಾರ್ ಅವರು ವಯಸ್ಸಿನಲ್ಲಿ 13 ವರ್ಷ ಚಿಕ್ಕವರು. ಮನೆಯಲ್ಲಿ ಎಲ್ಲರಿಗಿಂತ ಕಿರಿಯ ನವರಾಗಿದ್ದರಿಂದ ಮಾಸ್ಟರ್ ಲೋಹಿತ್ ರವರನ್ನು ಎಲ್ಲರೂ ಕೂಡ ಇಷ್ಟಪಡುತ್ತಿದ್ದರು. ಇನ್ನು ಹಿರಿಯರೊಬ್ಬರು ಹೇಳಿದ ಮಾತಿನಿಂದಾಗಿ ರಾಜಕುಮಾರ್ ಅವರು ತಮ್ಮ ಕಿರಿಯ ಮಗ ಲೋಹಿತ್ ಅವರ ಹೆಸರನ್ನು ಬದಲಾಯಿಸುತ್ತಾರೆ.

ಹೌದು ರಾಜಕುಮಾರ್ ರವರು ಕುಟುಂಬದ ಹಿರಿಯರೊಬ್ಬರು ಹರಿಶ್ಚಂದ್ರ ಕಥೆಯಲ್ಲಿ ಲೋಹಿತಾಶ್ವ ಅಲ್ಪಾಯುಷಿ ಹೀಗಾಗಿ ಲೋಹಿತ್ ಹೆಸರನ್ನು ಬದಲಾಯಿಸಿ ಎಂಬುದಾಗಿ ಎಚ್ಚರಿಕೆ ನೀಡುತ್ತಾರೆ. ಇದಕ್ಕಾಗಿಯೇ ರಾಜಕುಮಾರ್ ರವರ ತಮ್ಮ ಮಗನ ಹೆಸರು ಲೋಹಿತ್ ನಿಂದ ಪುನೀತ್ ಎಂಬುದಾಗಿ ಬದಲಾಯಿಸುತ್ತಾರೆ. ಹೆಸರನ್ನು ಬದಲಾಯಿಸಿದರು ಕೂಡ ಪುನೀತ್ ರಾಜಕುಮಾರ್ ರವರು ಅಲ್ಪಾಯುಷಿಯಾಗಿ ನಿಧನರಾಗುವುದನ್ನು ಅಣ್ಣಾವ್ರು ಕೂಡ ತಪ್ಪಿಸಲಾಗಲಿಲ್ಲ.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲುವಾಗ ಕೇವಲ 46 ವರ್ಷ ಮಾತ್ರವಾಗಿತ್ತು. ಹೆಸರನ್ನು ಬದಲಾಯಿಸಿದರು ಕೂಡ ಪುನೀತ್ ರಾಜಕುಮಾರ್ ರವರು ಈ ಲೋಕವನ್ನು ಬಿಟ್ಟು ಹೋಗುವುದನ್ನು ತಡೆಯಲು ಯಾರಿಂದಲೂ ಕೂಡ ಸಾಧ್ಯವಾಗಲಿಲ್ಲ. ವಿಧಿ ಕರೆದಾಗ ಯಾರಾದರೂ ಕೂಡ ಅದರ ಮಾತಿಗೆ ತಲೆತಗ್ಗಿಸಿ ನಡೆಯಲೇಬೇಕು ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.

ಅದೇನೇ ಇರಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಲ್ಪಾಯುಷಿಗಳು ಆಗಿರಬಹುದು ಆದರೆ ಅವರು ಇದ್ದಷ್ಟು ದಿನ ಬಡಜನರಿಗೆ ಸಹಾಯ ಮಾಡಿಕೊಂಡು ಸಾರ್ಥಕ ಜೀವನವನ್ನು ಸಾಗಿಸಿದ್ದಾರೆ. ಬದುಕಿದ್ದು ಕಡಿಮೆ ವರ್ಷವಾದರೂ ಕೂಡ ಬದುಕಿದ್ದಷ್ಟು ದಿನ ಸಂತೋಷ ಹಾಗೂ ನಗುವನ್ನು ಎಲ್ಲರಿಗೆ ಸಾರಿದ್ದರು ನಮ್ಮ ಅಪ್ಪು. ಇನ್ನು ಪುನೀತ್ ರಾಜಕುಮಾರ್ ರವರಿಗೆ ಅಪ್ಪು ಎನ್ನುವ ಹೆಸರನ್ನು ಇಟ್ಟಿದ್ದು ಅವರ ಅಜ್ಜಿ ಲಕ್ಷ್ಮಮ್ಮ ಅಂದರೆ ರಾಜಕುಮಾರ್ ರವರ ತಾಯಿ.

Comments are closed.