ಕನ್ನಡದ ಟಾಪ್ ನಟಿ ರಚಿತಾ ರಾಮ್ ರವರ ದುಡಿದು ಕಟ್ಟಿಸಿರುವ ಸ್ವಂತ ಹೊಸ ಮನೆ ಹೇಗಿದೆ ಗೊತ್ತಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಈಗ ಅದೆಷ್ಟೋ ಯುವ ನಟಿಯರು ಎಂಟ್ರಿ ನೀಡಿರಬಹುದು ಆದರೆ ಸ್ಟಾರ್ ನಟರೊಂದಿಗೆ ಇಂದು ನಟಿಸುತ್ತಿರುವ ಟಾಪ್ ನಟಿಯರು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲಿ ನಾವು ಇಂದು ಹೇಳು ಹೊರಟಿರುವ ನಟಿ ಕೂಡ ಒಬ್ಬರು. ಹೌದು ನಾವು ಮಾತನಾಡುತ್ತಿರುವುದು ಡಿಂಪಲ್ ಕ್ವೀನ್ ರಚಿತರಾಮ್ ರವರ ಬಗ್ಗೆ. ಕನ್ನಡ ಕಿರುತೆರೆಯ ಅರಸಿ ಎಂಬ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಗುಳಿಕೆನ್ನೆಯ ಚೆಲುವೆ ರಚಿತಾ ರಾಮ್ ಈಗ ಕನ್ನಡ ಚಿತ್ರರಂಗದಲ್ಲಿ ರಾಣಿಯಂತೆ ಮೆರೆಯುತ್ತಿದ್ದಾರೆ.

ಇದಕ್ಕೆ ಕಾರಣ ಕೇವಲ ಅವರ ಪರಿಶ್ರಮ ಹಾಗೂ ನಟನ ಶೈಲಿ. 200 ಹುಡುಗಿಯರ ಆಡಿಷನ್ ನಲ್ಲಿ ಆಯ್ಕೆಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿ ನಟಿಯಾಗಿ ಕಾಲಿಡುತ್ತಾರೆ. ನಟಿಸಿದ್ದ ಮೊದಲ ಚಿತ್ರವೇ ಬಾಕ್ಸಾಫೀಸ್ ನಲ್ಲಿ ಸೂಪರ್ ಹಿಟ್ ಎಂಬ ಪಟ್ಟವನ್ನು ಕಟ್ಟಿಕೊಂಡಿತ್ತು. ನಂತರ ಕಿಚ್ಚ ಸುದೀಪ್ ಅವರ ರನ್ನ ಚಿತ್ರದಲ್ಲಿ ನಟಿಸಿದರು. ರನ್ನ ಕೂಡ ಬಾಕ್ಸಾಫೀಸ್ ನಲ್ಲಿ ವರ್ಷದ ಹೈಯೆಸ್ಟ್ ಗ್ರೋಸ್ಸರ್ ಚಿತ್ರವೆಂಬ ಪಟ್ಟವನ್ನು ಪಡೆಯಿತು. ಕನ್ನಡ ಚಿತ್ರರಂಗದ ಸ್ಟಾರ್ ನಟರಿಗೆ ಲಕ್ಕಿ ಹೀರೋಯಿನ್ ಆಗಿ ರಚಿತರಾಮ್ ರವರು ಮಿಂಚಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೋಲ್ಡನ್ ಸ್ಟಾರ್ ಗಣೇಶ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹ್ಯಾಟ್ರಿಕ್ ಹೀರೋ ಶಿವಣ್ಣ ರಿಯಲ್ ಸ್ಟಾರ್ ಉಪೇಂದ್ರ ಹೀಗೆ ಕನ್ನಡ ಚಿತ್ರರಂಗದ ನಟರ ಚಿತ್ರದಲ್ಲಿ ಬಹುಬೇಡಿಕೆಯ ನಾಯಕಿಯಾಗಿ ನಟಿಸಿ ಸೂಪರ್ಸ್ಟಾರ್ ನಟಿಯಾಗಿ ಮಿಂಚಿದರು ರಚಿತರಾಮ್. ತಮ್ಮ ನಟನೆ ಹಾಗೂ ಗುಳಿಕೆನ್ನೆಯ ನಗುವಿನಿಂದ ಆಗಿ ಅಭಿಮಾನಿಗಳಲ್ಲಿ ತುಂಬಾ ಫೇಮಸ್ ಆದರು. ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೆ ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಕೂಡ ಪ್ರಸಿದ್ಧಿಯನ್ನು ಪಡೆದರು.

ರಚಿತರಾಮ್ ರವರು ಇತ್ತೀಚೆಗೆ ತೆಲುಗು ಚಿತ್ರರಂಗಕ್ಕೂ ಕೂಡ ಪಾದಾರ್ಪಣೆ ಮಾಡಿದ್ದಾರೆ. ಈಗಾಗಲೇ ಒಂದು ತೆಲುಗು ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಗೆ ರೆಡಿಯಾಗಿದೆ. ರಚಿತರಾಮ್ ರವರ ಕೈಯಲ್ಲಿ ಈಗಾಗಲೇ 7 ರಿಂದ 8 ಚಿತ್ರಗಳು ಇದು ಅದರಲ್ಲಿ ಒಂದು ಚಿತ್ರ ಮಹಿಳಾ ಪ್ರಧಾನ ಚಿತ್ರವೂ ಕೂಡ ಆಗಿದೆ. ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ರಚಿತರಾಮ್ ರವರೇ. ಹೀಗಾಗಿ ಕನ್ನಡ ಚಿತ್ರರಂಗದ ಈಗಿನ ಕಾಲದ ಬಹುಬೇಡಿಕೆಯ ನಟಿ ಎಂದರೆ ಅದು ರಚಿತಾರಾಮ್ ರವರು ಮಾತ್ರ.

ರಚಿತರಾಮ್ ರವರು ಈಗಾಗಲೇ ತಾವು ಸಂಪಾದನೆ ಮಾಡಿದ ಹಣದಲ್ಲಿ ಒಂದೊಳ್ಳೆ ಮನೆಯನ್ನು ಬೆಂಗಳೂರಿನಲ್ಲಿ ಕಟ್ಟಿಸಿದ್ದಾರೆ. ಮನೆ ನೋಡುವುದಕ್ಕೆ ತುಂಬಾ ಸುಂದರವಾಗಿದ್ದು ಇಂಟೀರಿಯರ್ ಡಿಸೈನ್ ರಚಿತಾ ರಾಮ್ ರವರ ರುಚಿ ಯಂತೆ ನಡೆದಿದೆ. ತಮ್ಮ ಡ್ರೀಮ್ ಮನೆ ಹೇಗಿರಬೇಕು ಎಂಬ ಪರಿಕಲ್ಪನೆಯನ್ನು ರಚಿತರಾಮ್ ರಚಿಸಿಕೊಂಡಿದ್ದು ಈ ಮನೆ ಸಂಪೂರ್ಣವಾಗಿ ಅದೇ ಡ್ರೀಮ್ ಮನೆ ಎಂಬ ಪರಿಕಲ್ಪನೆಯಲ್ಲಿ ಮೂಡಿಬಂದಿದೆ.

ಒಬ್ಬ ಹೆಣ್ಣುಮಗಳು ಸ್ವಾವಲಂಬಿಯಾಗಿ ದುಡಿದು ತನ್ನ ದುಡಿದ ಹಣದಲ್ಲಿ ತನ್ನ ನೆಚ್ಚಿನ ಮನೆ ಕಟ್ಟುವುದು ಇದಕ್ಕಿಂತ ಸ್ಪೂರ್ತಿ ಇನ್ನೇನು ಬೇಕು ರಚಿತರಾಮ್ ಅವರು ಇಂದಿನ ಯುವ ನಟ-ನಟಿಯರಿಗೆ ಅಥವಾ ಇವ ಹೆಣ್ಣುಮಕ್ಕಳಿಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು. ರಚಿತಾ ರಾಮ್ ರವರ ಮನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ಅಲ್ಲಿ ನಮಗೆ ಕಾಮೆಂಟ್ ಮಾಡೋ ಮೂಲಕ ತಿಳಿಸಿ. ಹಾಗೆ ನೀವು ಇಲ್ಲಿಯ ಒಳಗೆ ರಚಿತರಾಮ್ ರವರ ಮನೆ ನೋಡಿದ್ದೀರಾ ಅಥವಾ ಇಲ್ಲ ಅದನ್ನು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ತಿಳಿಸಿ.

Comments are closed.