ಮೊದಲ ಸ್ಪರ್ದಿ ಶನಿವಾರಕ್ಕೆ ಔಟ್, ಹೊಸ ಸ್ಪರ್ದಿ ಬಿಗ್ ಬಾಸ್ ಗೆ ಎಂಟ್ರಿ, ಕ್ವಾರಂಟೈನ್ ನಲ್ಲಿ ಟಾಪ್ ನಟಿ , ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕಾರ್ಯಕ್ರಮ ಮರು ಆರಂಭ ಪಡೆದುಕೊಂಡಿರುವುದು ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತೋಷ ನೀಡಿದೆ. ಇಷ್ಟು ದಿವಸ ಲಾಕ್ ಡೌನ್ ಸಮಯದಲ್ಲಿ ಯಾವುದೇ ಮನ ರಂಜನೆ ಇಲ್ಲದೆ ಮನೆಯಲ್ಲಿ ಕುಳಿತಿದ್ದಜನರು ಇದೀಗ ತನ್ನ ಸಾಮಾನ್ಯ ಜೀವನದ ಜೊತೆ ಪ್ರತಿ ನಿತ್ಯ ಮನರಂಜನೆ ನೀಡುವ ಬಿಗ್ ಬಾಸ್ ಆರಂಭ ವಾಗಿರುವುದನ್ನು ನೋಡಿ ಫುಲ್ ಕುಶ್ ಆಗಿದ್ದಾರೆ. ಅದರಲ್ಲಿಯೂ ಹೊರಗಿನ ಪ್ರಪಂಚದಲ್ಲಿ ಸ್ಪರ್ದಿಗಳು ಜನರ ಪ್ರತಿಕ್ರಿಯೆ ನೋಡಿ ಮತ್ತೆ ಒಳಗಡೆ ಹೋಗಿರುವ ಕಾರಣ,

ಪ್ರತಿ ಸ್ಪರ್ದಿಗಳು ಕೂಡ ತಮ್ಮ ರೈಟ್ ಅಥವಾ ರಾಂಗ್ ಯಾವುದು ಎಂದು ತಿಳಿದು ಕೊಂಡು, ಮನೆಯಲ್ಲಿ ಆಟ ಆರಂಭ ಮಾಡಿರುವ ಕಾರಣ ಪ್ರೇಕ್ಷಕರಿಗೆ ಭರಪೂರಿತ ಮನರಂಜನೆ ಸಿಗುವುದು ಖಚಿತವಾಗಿದೆ. ಇಂತಹ ಸಮಯದಲ್ಲಿ ಮೊದಲ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆಯುತ್ತಿದ್ದು, ಈ ವಾರ ಮನೆಯಿಂದ ಒಬ್ಬರು ಸ್ಪರ್ದಿ ಹೊರ ಹೋಗುವುದು ಖಚಿತ. ಇಂತಹ ಸಮಯದಲ್ಲಿ ಮನೆಗೆ ಮತ್ತೊಬ್ಬರು ವಿಶೇಷ ಸ್ಪರ್ದಿ ಒಳ ಹೋಗುವ ಸಾಧ್ಯತೆ ಇದೆ.

ಹೌದು ಸ್ನೇಹಿತರೇ, ಇದೀಗ ಮತ್ತೊಬ್ಬರು ಸ್ಪರ್ದಿ ಹೋಟೆಲ್ ಒಂದ್ಲಿ ಕ್ವಾರಂಟೈನ್ ಆಗಿರುವ ಸುದ್ದಿ, ಕಿರುತೆರೆಯ ಮೂಲಗಳಿಂದ ತಿಳಿದು ಬಂದಿದೆ. ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಇಲ್ಲವಾದರೂ ಕೂಡ ಈ ಸುದ್ದಿ ಬಾರಿ ಸಂಖ್ಯೆಯಲ್ಲಿ ಹರಿದಾಡುತ್ತಿದೆ. ಅಂದಹಾಗೆ ಈ ನಟಿ ಸ್ಪರ್ದಿಯಾಗಿ ಮನೆಯ ಒಳಗಡೆ ಹೋಗುತ್ತಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಹೌದು, ಈ ಸ್ಪರ್ದಿಯು ಕೇವಲ ಒಂದೆರಡು ದಿನಗಳ ಕಾಲ ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿಯಾಗಿ ಹೋಗಲಿದ್ದಾರೆ ಎಂಬುದು ಕೇಳಿ ಬರುತ್ತಿರುವ ಸಂದೇಶ. ಅವರು ಯಾರು ಎಂಬುದನ್ನು ನೋಡುವುದಾದರೇ ಅವರು ಮರ್ಯಾರು ಅಲ್ಲದೇ, ಕನ್ನಡ ಟಾಪ್ ನಾರಿಯರಲ್ಲಿ ಒಬ್ಬರಾಗಿರುವ ರಾಧಿಕಾ. ಹೌದು ರಾಧಿಕಾ ರವರು ಅತಿಥಿಯಾಗಿ ಬಿಗ್ ಬಾಸ್ ಗೆ ಹೋಗಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

Comments are closed.