ಕುಟುಂಬದ ಸಾಲವನ್ನು ತೀರಿಸಲು ವ್ಯಾಪಾರ ಪ್ರಾರಂಭ ಮಾಡಿದ ಆದರೆ ಇಂದು 8 ಕೋಟಿ ರೂಪಾಯಿ ಒಡೆಯ?? ಅಷ್ಟಕ್ಕೂ ಈತ ನಡೆಸಿದ ವ್ಯಾಪಾರ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕೆಲವೊಮ್ಮೆ ವಿಧಿಯನ್ನುವುದು ನಮ್ಮನ್ನು ಪಾತಾಳಕ್ಕೆ ಕೂಡ ಕಳಿಸಬಹುದು ಅಥವಾ ಸುಖದ ಸುಪ್ಪತಿಗೆಯಲ್ಲಿ ಕೂಡ ಕೂರಿಸಬಹುದು. ಇಂದು ನಾವು ಹೇಳಹೊರಟಿರುವ ನೈಜ ಘಟನೆ ಕೂಡ ಇದಕ್ಕೆ ಹೊರತಾಗಿಲ್ಲ. ಇಂಪಾಲದಲ್ಲಿ 2008 ರಲ್ಲಿ ರಾಗೇಶ್ ಕೀಶಮ್ ಎನ್ನುವ ವ್ಯಕ್ತಿ ಇದ್ದ. ಈತ ತನ್ನ ದತ್ತು ತಂಗಿಗೆ ಬಂದಂತಹ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಲು ದೊಡ್ಡಮಟ್ಟದ ಸಾಲವನ್ನು ಪಡೆದುಕೊಂಡಿದ್ದ. ಆದರೆ ಅಷ್ಟೊಂದ್ ಎಲ್ಲ ಖರ್ಚು ಮಾಡಿದ ಮೇಲೆ ಕೂಡ ಆತನ ತಂಗಿ ಬದುಕುಳಿಯಲಿಲ್ಲ.

ಇತ್ತ ಈಕಡೆ ಆಕೆಯನ್ನು ಉಳಿಸಲು ಪಡೆದಿದ್ದ ಸಾಲವನ್ನು ಕೂಡ ತೀರಿಸಬೇಕಾಗಿತ್ತು. ಕುಟುಂಬವನ್ನು ಸಾಲದ ಹೊರೆಯಿಂದ ಕೆಳಗಿಳಿಸಬೇಕು ಎಂಬುದಾಗಿ ರಾಗೇಶ್ ಹಲವಾರು ವ್ಯಾಪಾರಗಳಿಗೆ ಕೈ ಹಾಕುತ್ತಾರೆ. ಆದರೆ ಯಾವುದರಲ್ಲೂ ಕೂಡ ಅವರಿಗೆ ಯಶಸ್ಸೆಂಬುದು ಸಿಗುವುದಿಲ್ಲ. ದೂರದ ಉತ್ತರಾಖಂಡಕ್ಕೆ ಬಿದಿರನ್ನು ಸಾಗಿಸುವ ವ್ಯಾಪಾರವನ್ನು ಕೂಡ ಪ್ರಾರಂಭಿಸುತ್ತಾನೆ ಅದು ಕೂಡ ಲಾಸ್ ಆಗುತ್ತದೆ. ರಾಗೇಶ್ ನ ಊರಿನಲ್ಲಿ ದಿನಕ್ಕೆ ನಾಲ್ಕು ಗಂಟೆ ಮಾತ್ರ ಕರೆಂಟ್ ಬರುತ್ತಿತ್ತು. ಹೀಗಾಗಿ ಯಾವುದೇ ವ್ಯಾಪಾರವನ್ನು ಕೂಡ ಪ್ರಾರಂಭಿಸಲು ಆತನಿಗೆ ತೋಚುತ್ತಿರಲಿಲ್ಲ. ಕೊನೆಗೂ ಕೂಡ ಆತನಿಗೆ ಒಂದು ವ್ಯಾಪಾರದ ವಿಚಾರ ಹೊಳೆಯಿತು. ಅದರಿಂದಾಗಿ ಕೇವಲ ಸಾಲವನ್ನು ಮಾತ್ರವಲ್ಲದೆ ಈಗ 8 ಕೋಟಿ ರೂಪಾಯಿ ಒಡೆಯ ಕೂಡ ಆಗಿದ್ದಾನೆ. ಹಾಗಿದ್ದರೆ ಅದೇನು ಎಂಬುದನ್ನು ನಿಮಗೆ ಹೇಳುತ್ತೇವೆ.

ragesh | ಕುಟುಂಬದ ಸಾಲವನ್ನು ತೀರಿಸಲು ವ್ಯಾಪಾರ ಪ್ರಾರಂಭ ಮಾಡಿದ ಆದರೆ ಇಂದು 8 ಕೋಟಿ ರೂಪಾಯಿ ಒಡೆಯ?? ಅಷ್ಟಕ್ಕೂ ಈತ ನಡೆಸಿದ ವ್ಯಾಪಾರ ಏನು ಗೊತ್ತಾ??
ಕುಟುಂಬದ ಸಾಲವನ್ನು ತೀರಿಸಲು ವ್ಯಾಪಾರ ಪ್ರಾರಂಭ ಮಾಡಿದ ಆದರೆ ಇಂದು 8 ಕೋಟಿ ರೂಪಾಯಿ ಒಡೆಯ?? ಅಷ್ಟಕ್ಕೂ ಈತ ನಡೆಸಿದ ವ್ಯಾಪಾರ ಏನು ಗೊತ್ತಾ?? 2

ಹೌದು ಆತ ನಿಂಬೆ ಹುಲ್ಲಿನ ರಸದಿಂದ ಚಹಾ ಮಾಡುವ ಉಪಾಯವನ್ನು ಕೈಗೊಳ್ಳುತ್ತಾನೆ. SuiGenris Agronomy ಎಂಬ ಕಂಪನಿ ಕೆಳಗಡೆ 2010 ಯಲ್ಲಿ ಸಿಸಿ ಟೀ ಎನ್ನುವ ಕಂಪನಿಯನ್ನು ಪ್ರಾರಂಭಿಸುತ್ತಾನೆ. ಮೊದಮೊದಲಿಗೆ ಇವರು ತಯಾರಿಸುತ್ತಿದ್ದ 200 ಲಿಂಬೆ ಹುಲ್ಲಿನ ರಸದ ಟೀ ಪ್ಯಾಕೆಟ್ ಗಳು 5 ನಿಮಿಷದಲ್ಲಿ ಮಾರಾಟವಾಗಿದ್ದವು. ಕೇವಲ 5 ಲಕ್ಷ ರೂಪಾಯಿ ಬಂಡವಾಳ ಹೂಡಿ ಈಗ 8 ಕೋಟಿ ರೂಪಾಯಿ ವ್ಯವಹಾರದ ಒಡೆಯನಾಗಿದ್ದಾನೆ. ತನ್ನ ವಿಜ್ಞಾನಿ ಮಿತ್ರ ನಿಂದಾಗಿ ಇದರ ವಿಧಾನವನ್ನು ಕಂಡುಹಿಡಿದು ಇಂಡೋನೇಷ್ಯಾದ ಮಿತ್ರನಿಂದ 10000 ನಿಂಬೆ ಹುಲ್ಲನ್ನು ಪಡೆದು ರಾಗೇಶ್ ಈ ವ್ಯಾಪಾರವನ್ನು ಪ್ರಾರಂಭ ಮಾಡಿದ್ದ. ಖಂಡಿತವಾಗಿಯೂ ಈ ಕತೆ ಇಂದಿನ ಯುವ ಜನತೆಗೆ ಮಾದರಿ.

Comments are closed.