ಪಂದ್ಯ ಮುಗಿದ ಬಳಿಕ ಸರಣಿ ಸೋತ ಬೇಸರದಲ್ಲಿ ನಾಯಕ ಕೆಎಲ್ ರಾಹುಲ್ ಹೇಳಿದ್ದೇನು ಗೊತ್ತೇ?? ನಾಯಕನಾಗಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಎಲ್ಲರಿಗೂ ಗೊತ್ತಿರುವಂತೆ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ಪ್ರವಾಸಕ್ಕೆ ಗೆಲ್ಲುವ ಹುಮ್ಮಸ್ಸಿನಲ್ಲಿ ಬಂದಿಳಿದಿತ್ತು. ಆದರೆ ಈಗಾಗಲೇ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಸೋತಿದ್ದು ಏಕದಿನ ಸರಣಿಯನ್ನು ಕೂಡ ವೈಟ್ ವಾಷ್ ನಲ್ಲಿ ಸೋಲು ಅಂತಹ ಆತಂಕವನ್ನು ಎದುರಿಸುತ್ತಿದೆ. ವಿರಾಟ್ ಕೊಹ್ಲಿ ಅವರು ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವವನ್ನು ತದನಂತರ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಏರ್ಪಟ್ಟಿದೆ.

ಸೌತ್ ಆಫ್ರಿಕಾ ಪ್ರವಾಸದಲ್ಲಿ ಭಾರತೀಯ ಕ್ರಿಕೆಟ್ ತಂಡ ಈ ಹೊಸ ಬದಲಾವಣೆಗಳಿಗೆ ಇನ್ನು ಕೂಡ ಒಗ್ಗಿಕೊಂಡಿಲ್ಲ ಎಂಬುದು ಓಪನ್ ಆಗಿ ತೋರುತ್ತಿದೆ. ಭಾರತೀಯ ಕ್ರಿಕೆಟ್ ತಂಡ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದಿದ್ದು ಬಿಟ್ಟರೆ ಮತ್ತೆ ಉಳಿದ ಎರಡು ಟೆಸ್ಟ್ ಪಂದ್ಯಗಳು ಹಾಗೂ ಎರಡು ಏಕದಿನ ಪಂದ್ಯಗಳನ್ನು ಸಾಲುಸಾಲಾಗಿ ಸೋಲುತ್ತ ಬಂದಿದೆ. ಇದು ಖಂಡಿತವಾಗಿಯೂ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳ ದೊಡ್ಡಮಟ್ಟದ ನಿರಾಸೆಗೆ ಕಾರಣವಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಈಗ ಕೆಎಲ್ ರಾಹುಲ್ ನೇತೃತ್ವದ ಏಕದಿನ ತಂಡ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಮುಖಭಂಗವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಬಹುದು ಎಂದು ಹೇಳಬಹುದಾಗಿದೆ.

rahul cricket | ಪಂದ್ಯ ಮುಗಿದ ಬಳಿಕ ಸರಣಿ ಸೋತ ಬೇಸರದಲ್ಲಿ ನಾಯಕ ಕೆಎಲ್ ರಾಹುಲ್ ಹೇಳಿದ್ದೇನು ಗೊತ್ತೇ?? ನಾಯಕನಾಗಿ ಹೇಳಿದ್ದೇನು ಗೊತ್ತೇ??
ಪಂದ್ಯ ಮುಗಿದ ಬಳಿಕ ಸರಣಿ ಸೋತ ಬೇಸರದಲ್ಲಿ ನಾಯಕ ಕೆಎಲ್ ರಾಹುಲ್ ಹೇಳಿದ್ದೇನು ಗೊತ್ತೇ?? ನಾಯಕನಾಗಿ ಹೇಳಿದ್ದೇನು ಗೊತ್ತೇ?? 2

ಎರಡನೇ ಏಕದಿನ ಪಂದ್ಯದ ಸೋಲಿನ ನಂತರ ತಂಡದ ನೂತನ ಏಕದಿನ ನಾಯಕನಾಗಿರುವ ಕೆಎಲ್ ರಾಹುಲ್ ರವರು ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಂಡದ ಸೋಲಿನ ಕಾರಣವನ್ನು ಕೂಡ ಹೇಳಿದ್ದಾರೆ. ಹೌದು ಗೆಳೆಯರೇ ಮೊದಲೇ ತಿಳಿಸಿರುವಂತೆ ಕೆ ಎಲ್ ರಾಹುಲ್ ಅವರು ಎರಡನೇ ಏಕದಿನ ಪಂದ್ಯದ ಸೋಲಿಗೂ ಕೂಡ ಕಾರಣವನ್ನು ಅದೇ ರೀತಿಯಾಗಿ ಹೇಳಿದ್ದಾರೆ ಎಂದು ಹೇಳಬಹುದಾಗಿದೆ. ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಮಧ್ಯಮ ಕ್ರಮಾಂಕದಲ್ಲಿ ನಾವು ಎಡವುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ. ರಿಷಬ್ ಪಂತ್ ಹಾಗೂ ಶಾರ್ದುಲ್ ಠಾಕೂರ್ ರವರ ಬ್ಯಾಟಿಂಗನ್ನು ಕೂಡ ಪ್ರಶಂಸಿಸಿದ್ದಾರೆ. ಈ ಪಂದ್ಯಗಳಲ್ಲಿ ನಾವು ಎಸಗಿರುವ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯದಲ್ಲಿ ನಾವು ಮತ್ತೊಮ್ಮೆ ಚಾಲೆಂಜ್ ಮಾಡಲು ಸಿದ್ಧರಾಗಿದ್ದೇವೆ ಎಂಬುದಾಗಿ ಕೆ ಎಲ್ ರಾಹುಲ್ ಅವರು ಹೇಳಿದ್ದಾರೆ.

Comments are closed.