ರಾಜ್ಯ ರಾಜಕೀಯದಲ್ಲಿ ಸಂಚಲನ, ರೊಚ್ಚಿಗೆದ್ದ ಮೂವತ್ತಕ್ಕೂ ಹೆಚ್ಚು ಬಿಜೆಪಿ ಶಾಸಕರು ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ ಶಿಸ್ತಿನ ಪಕ್ಷದಲ್ಲಿ ಇದೀಗ ಅಶಿಸ್ತು ಕಾಣಿಸುತ್ತಿದೆ, ನೇರವಾಗಿ ಶಾಸಕರು ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುತ್ತಿದ್ದರೂ ಕೂಡ ಹೈಕಮಾಂಡ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಅಧಿಕಾರಕ್ಕೆ ಬರುವ ವರೆಗೂ ಸುಮ್ಮನಿದ್ದರೆ ಶಾಸಕರು ಇದೀಗ ಯಡಿಯೂರಪ್ಪನವರ ವಿರುದ್ಧ ತೊಡೆ ತಟ್ಟಲು ಆರಂಭಿಸಿದ್ದಾರೆ, ಇತ್ತ ಬಿಜೆಪಿ ಪಕ್ಷದ ವರಿಷ್ಠರು ಪಕ್ಷಕ್ಕೆ ಮುಜುಗರ ನೀಡುವಂತಹ ಹೇಳಿಕೆಗಳನ್ನು ನೀಡುತ್ತಿರುವ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ

ಇದನ್ನು ನೋಡಿದರೆ ಇಷ್ಟು ದಿವಸ ದೇಶದ ಎಲ್ಲೆಡೆ ಶಿಸ್ತಿನ ಪಕ್ಷ ಎನಿಸಿ ಕೊಂಡಿದ್ದ ಬಿಜೆಪಿ ಪಕ್ಷದಲ್ಲಿ ಕರ್ನಾಟಕ ರಾಜ್ಯದಲ್ಲಿ ಅಶಿಸ್ತು ಕಾಣಿಸಿಕೊಳ್ಳುತ್ತಿದೆ, ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನ ನಡೆದಿದ್ದು ಕೆಲವೊಂದು ಸಚಿವರ ವಿರುದ್ಧ ಮೂವತ್ತಕ್ಕೂ ಹೆಚ್ಚು ಶಾಸಕರು ರೊಚ್ಚಿಗೆದ್ದಿದ್ದಾರೆ.

ಹೌದು ಸ್ನೇಹಿತರೇ ಶಾಸಕ ರೇಣುಕಾಚಾರ್ಯ ರವರ ನೇತೃತ್ವದಲ್ಲಿ 30 ಶಾಸಕರು ರಾತ್ರೋರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದು ಸಚಿವ ಈಶ್ವರಪ್ಪ ಸೇರಿದಂತೆ ಆರಕ್ಕೂ ಹೆಚ್ಚು ಸಚಿವರ ವಿರುದ್ಧ ದೂರು ನೀಡಲಾಗಿದೆ, ಯಡಿಯೂರಪ್ಪನವರು ಶಾಸಕರ ಮನವಿಯ ಮೇರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅನುದಾನ ಬಿಡುಗಡೆ ಮಾಡಿರುವುದು ಈಶ್ವರಪ್ಪನವರ ಕೆಂಗಣ್ಣಿಗೆ ಗುರಿಯಾಗಿದೆ, ಈಶ್ವರಪ್ಪನವರು ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ಕಾರಣ ಅವರನ್ನು ಕೇಳದೆ ಅನುದಾನ ಬಿಡುಗಡೆಯಾಗಿರುವುದು ಈಶ್ವರಪ್ಪನವರಿಗೆ ಕಿಂಚಿತ್ತು ಇಷ್ಟವಿಲ್ಲ ಎಂದು ಹೇಳಲಾಗುತ್ತಿದೆ.

Comments are closed.