News from ಕನ್ನಡಿಗರು

ರಾಜ ರಾಣಿ ಮುಗಿದ ನಂತರ ಶುರುವಾಗುತ್ತದೆ ಹೊಸ ರಿಯಾಲಿಟಿ ಶೋ, ಅದರಲ್ಲೂ ಸೃಜುನ್ ಮಿಂಚು. ವಿಶೇಷತೆ ಏನು ಗೊತ್ತೇ??

119

ನಮಸ್ಕಾರ ಸ್ನೇಹಿತರೇ ಕಲರ್ಸ್ ಕನ್ನಡ, ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳನ್ನು ನಡೆಸುವುದರಲ್ಲಿಯೂ ತುಂಬಾ ಫೇಮಸ್. ಹಾಗೆಯೇ ಕಲರ್ಸ್ ನಲ್ಲಿ ಬರುವ ಎಲ್ಲ ರಿಯಾಲಿಟಿ ಶೋಗಳೂ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ. ಅವುಗಳಲ್ಲಿ ಈಗ ಪ್ರಸಾರವಾಗುತ್ತಿರುವ ರಾಜ ರಾಣಿ ಶೋ ಕೂಡ ಒಂದು.

ರಾಜಾ ರಾಣಿ ಶೋ ಸೆಮಿಫೈನಲ್ ಎಪಿಸೋಡ್ ಗಳನ್ನು ಮುಗಿಸಿ ಫೈನಲ್ ನತ್ತ ಹೆಜ್ಜೆಹಾಕಿದೆ. ಇನ್ನು ಯಾರಾಗಲಿದ್ದಾರೆ ನಿಜವಾದ ರಾಜಾ ರಾಣಿ ಎಂಬುದು ಗೊತ್ತಾಗುವುದಷ್ಟೇ ಬಾಕಿ ಉಳಿದಿದೆ. ರಾಜಾ ರಾಣಿ ಶೋದಲ್ಲಿ ಸ್ಪರ್ಧಿಗಳ ಹಾಗೆ ಇನ್ನಷ್ಟು ಇಂಟರೆಸ್ಟಿಂಗ್ ಎನ್ನಿಸಿದ್ದು ಸೃಜನ್ ಲೋಕೇಶ್ ಹಾಗೂ ತಾರಮ್ಮ ಅವರ ಉಪಸ್ಥಿತಿ. ಇವರಿಬ್ಬರ ತೀರ್ಪಿನ ಜೊತೆಗೆ ಹಾಸ್ಯಗಳು ಜನರನ್ನು ಹೆಚ್ಚು ರಂಜಿಸಿದೆ. ಅದರಲ್ಲೂ ಸೃಜನ್ ಲೋಕೇಶ್ ಸದಾ ಹಾಸ್ಯ ಚಟಾಕಿ ಹಾರಿಸಿ ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದಾರೆ.

ಮಜಾ ಟಾಕೀಸ್ ಶೋವನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಸೃಜನ್ ಮಜಾ ಟಾಕೀಸ್ ನ್ನು ಅತ್ಯಂತ ಜನಪ್ರಿಯ ಶೋವನ್ನಾಗಿಸಿದ್ದಾರೆ. ಇದರಲ್ಲಿ ಅವರ ಡೈಲಾಗ್ ಗಳೇ ಹೆಚ್ಚು ಖುಷಿಕೊಡುತ್ತಿತ್ತು. ಹಾಗಾಗಿ ಸೃಜನ್ ಲೋಕೇಶ್ ಸದಾ ಟಿವಿ ಪರದೆಯ ಮೇಲೆ ಕಾಣಿಸಿಕೊಳ್ಳಲಿ ಎಂದೇ ಜನ ಬಯಸುತ್ತಾರೆ. ಇನ್ನು ಸೃಜನ್ ಲೋಕೇಶ್ ರಾಜಾ ರಾಣಿ ಶೋ ಮುಗಿದ ಮೇಲೆ ಮತ್ತೊಂದು ಶೋ ಹೋಸ್ಟ್ ಮಾಡಲು ತಯಾರಿ ನಡೆಸಿದ್ದಾರೆ. ಯಾವ ಶೋ ಗೊತ್ತಾ?

ಹೌದು ರಾಜಾ ರಾಣಿ ಶೋ ನಂತರ ಕಲರ್ಸ್ ಕನ್ನಡ ಅಮ್ಮಂದಿರಿಗಾಗಿ ನನ್ನಮ್ಮ ಸೂಪರ್ ಎಂಬ ಶೀರ್ಷಿಕೆ ಅಡಿಯಲ್ಲಿಒಂದು ಶೋ ವನ್ನು ನಡೆಸಲಿದೆ. ಇದಕ್ಕೆ ನಿರೂಪಣೆ ಮಾಡಲಿದ್ದಾರೆ ಸೃಜನ್ ಲೋಕೇಶ್. ಮಕ್ಕಳಿಗಾಗಿ ತಮ್ಮ ಜೀವವನ್ನೇ ಮುಡುಪಾಗಿಡುವ ಅಮ್ಮಂದಿರಿಗಾಗಿಯೇ ಈ ಶೋ ನಡೆಸಲಾಗುತ್ತಿದ್ದು ಅಮ್ಮಂದಿರ ಪ್ರತಿಭೆ ಇಲ್ಲಿ ಅನಾವರಣಗೊಳಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.

Leave A Reply

Your email address will not be published.