ರಾಣಾ ದಗ್ಗುಬಾಟಿಯವರ ಫೇವರಿಟ್ ನಟ ಒಬ್ಬ ಕನ್ನಡದ ನಟನಂತೆ ಯಾರು ಗೊತ್ತೇ?? ಕನ್ನಡದ ಆ ಟಾಪ್ ನಟ ಯಾರು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ರಾಣಾ ದಗ್ಗುಬಾಟಿ. ತನ್ನ ನೀಳಕಾಯದಿಂದಲೇ ಎಲ್ಲರ ಗಮನ ಸೆಳೆದವರು. ತೆಲುಗಿನ ಖ್ಯಾತ ನಟ ವಿಕ್ಟರಿ ವೆಂಕಟೇಶ್ ರವರ ಅಳಿಯ. ರಾಣಾ ದಗ್ಗುಬಾಟಿ ಹುಟ್ಟಿದ್ದು ಡಿಸೆಂಬರ್ 14, 1984 ರಂದು. 2010ರಲ್ಲಿ ಬಂದ ಲೀಡರ್ ಎಂಬ ಚಿತ್ರದಿಂದ ರಾಣಾ ದಗ್ಗುಬಾಟಿಯವರ ಸಿನಿ ಕರಿಯರ್ ಶುರುವಾಯಿತು. ಅಲ್ಲಿಂದ ಶುರುವಾದ ರಾಣಾ ಹವಾ ಇಂದಿಗೂ ನಿಂತಿಲ್ಲ. ರಾಣಾ ಕೇವಲ ತೆಲುಗು ಮಾತ್ರವಲ್ಲದೇ ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ರಾಣಾ ನಟಿಸಿರುವ ತೆಲುಗು ಚಿತ್ರಗಳ ಪೈಕಿ ನೇನು ನಾ ರಾಕ್ಷಸಿ, ನಾ ಇಷ್ಟಂ, ಕೃಷ್ಣಂ ವಂದೇ ಜಗದ್ಗುರಂ, ಸಂಥಿಂಗ್ ಸಂಥಿಂಗ್, ದೊಂಗಾಟ, ರುದ್ರಮ್ಮ ದೇವಿ, ಬಾಹುಬಲಿ ಒಂದು ಮತ್ತು ಎರಡು, ಸೈಜ್ ಝೀರೋ ಸಿನಿಮಾಗಳು ಸೂಪರ್ ಹಿಟ್ ಸಾಲಿಗೆ ಸೇರಿವೆ. ಅದೇ ರೀತಿ ತಮಿಳು ಸಿನಿಮಾಗಳ ಪೈಕಿ ಆರಂಭಂ, ಬೆಂಗಳೂರು ನಾಟಿಕಲ್, ಹಿಂದಿ ಸಿನಿಮಾಗಳ ಪೈಕಿ ದಿ ಘಾಜಿ ಅಟ್ಯಾಕ್, ಬೇಬಿ, ಧಮ್, ಡಿಪಾರ್ಟ್ ಮೆಂಟ್, ವೆಲಕಮ್ ಟು ನ್ಯೂಯಾರ್ಕ್, ಹೌಸ್ ಫುಲ್ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ಮಾಡಿದ್ದ ಬಲ್ಲಾಳದೇವ ಪಾತ್ರ ಇವರಿಗೆ ನೇಮು ಹಾಗೂ ಫೇಮನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಮಾಡಿತು. ದಿನ ಬೆಳಗಾಗುವುದರಲ್ಲಿ ರಾಣಾ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದರು.

ಆ ಸಿನಿಮಾಕ್ಕಾಗಿ ಇವರು ದೇಹವನ್ನು ಹುರಿಗೊಳಿಸಿದ್ದು ಸಹ ಸಖತ್ ವೈರಲ್ ಆಗಿತ್ತು. ತೀರಾ ಇತ್ತಿಚಿಗೆ ಸಮಂತಾ ಅಕ್ಕಿನೇನಿ ನಡೆಸಿಕೊಡುವ ಟಾಕ್ ಶೋ ವೊಂದರಲ್ಲಿ ತಾವೀಗ ಅನಾರೋಗ್ಯದಿಂದ ಬಳಲುತ್ತಿದ್ದೆನೆ ಎಂದು ಹೇಳಿಕೊಂಡಿದ್ದಾರೆ. ಅಂದ ಹಾಗೆ ಕನ್ನಡದ ನಟರೊಬ್ಬರನ್ನ ರಾಣಾ ಸಖತ್ ಇಷ್ಟ ಪಡುತ್ತಾರಂತೆ. ಅವರು ಬೇರಾರು ಅಲ್ಲ, ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಇವರೆಂದರೇ ರಾಣಾಗೆ ಬಹಳ ಇಷ್ಟವಂತೆ. ಪ್ರೋ ಕಬ್ಬಡ್ಡಿ ಲೀಗ್ ನಲ್ಲಿ ಇವರ ಜೊತೆ ಕಳೆದ ಸಮಯ,ಹೆಚ್ಚು ಖುಷಿ ಕೊಟ್ಟಿತಂತೆ. ಪುನೀತ್ ಅಲ್ಲದೇ ರಾಣಾರವರಿಗೆ ಜೂನಿಯರ್ ಎನ್‌.ಟಿ.ಆರ್, ಅಲ್ಲು ಅರ್ಜುನ್, ನಿರ್ದೇಶಕ ರಾಜಮೌಳಿ ಸಹ ಬಹಳ ಇಷ್ಟವಂತೆ. ಕಲೆ ಎಂಬುದು ಭಾಷೆಗಳಿಂದ ಬಹಳ ಹೊರತಾಗಿರುತ್ತದೆ. ಕನ್ನಡದ ಸೂಪರ್ ಸ್ಟಾರ್ ಗೆ ಆಂದ್ರದ ಸೂಪರ್ ಸ್ಟಾರ್ ಅಭಿಮಾನಿಯಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಅಲ್ವಾ ಸ್ನೇಹಿತರೇ‌.

Leave a Reply

Your email address will not be published. Required fields are marked *