ಟೈಮ್ ಇಲ್ಲದೆ ಇದ್ದಾಗ ಕೇವಲ 10 ನಿಮಿಷದಲ್ಲಿ ಮನೆಯಲ್ಲಿಯೇ ಮಾಡಿ ದೋಸೆ, ಹೇಗೆ ಗೊತ್ತೇ???

ನಮಸ್ಕಾರ ಸ್ನೇಹಿತರೇ ಗೋದಿ ರವಾ ದೋಸೆ ಎಲ್ಲರಿಗೂ ಇಷ್ಟವಾಗುವುದಿಲ್ಲ. ಅದರೆ ಅದು ಕರೂಮ್ ಕುರುಮ್ ಅನ್ನುವಷ್ಟು ಗರಿಗರಿ ಯಾದರೆ!? ಇನ್ನೆರಡು ಜಾಸ್ತಿ ತಿನ್ನೋಣ ವೆನ್ನಿಸುತ್ತದೆ. ಹಾಗಾದ್ರೆ ರುಚಿಯಾದ ಈ ದೋಸೆಯನ್ನ ಮಾಡೋದು ಹೇಗೆ !? ಬನ್ನಿ ನೋಡೋಣ.

ಗೋದಿ ರವಾ ದೋಸೆ ಮಾಡಲು ಬೇಕಾಗಿರುವ ಸಾಮಗ್ರಿಗಳು: ಗೋದಿಹಿಟ್ಟು -ಒಂದು ಬಟ್ಟಲು, ಚಿರೋಟಿ ರವಾ- ಅರ್ಧ ಬಟ್ಟಲು, ರುಚಿಗೆ ತಕ್ಕಷ್ಟು ಉಪ್ಪು,ಮೊಸರು ಸ್ವಲ್ಪ, ಕಾಲು ಚಮಚ ಸಕ್ಕರೆ, ಕಾಲು ಚಮಚ ಅಡಿಗೆ ಸೋಡಾ, ದೋಸೆ ಮಾಡೋದಕ್ಕೆ ಸ್ವಲ್ಪ ಎಣ್ಣೆ ಅಥವಾ ತುಪ್ಪ.

ಗೋದಿ ರವಾ ದೋಸೆ ಮಾಡುವ ವಿಧಾನ: ಒಂದು ಪಾತ್ರೆಗೆ ಗೋದಿ ಹಿಟ್ಟು, ರವಾ, ಉಪ್ಪು, ಸಕ್ಕರೆ ಹಾಕಿ. ಇದಕ್ಕೆ ಸ್ವಲ್ಪ ಸ್ವಲ್ಲವೇ ನೀರನ್ನು ಹಾಕಿ ಕಲಸಿಕೊಳ್ಳಿ. ಗಂಟು ಗಂಟಾಗದಂತೆ ಕಲಸಿಕೊಳ್ಳಿ. ಒಂದು ವೇಳೆ ಸ್ವಲ್ಪ ಗಂಟಾಗಿದ್ದದೆ ಹಿಟ್ಟನ್ನು 10 ನಿಮಿಷಗಳ ಕಾಲ ನೆನೆಯಲು ಬಿಟ್ಟು ಮತ್ತೆ ಕಳಸಿದರೆ ಹಿಟ್ಟು ಸರಿಯಾದ ಹದಕ್ಕೆ ಬರುತ್ತದೆ. 10 ನಿಮಿಷ ನೆನೆಯಲು ಬಿಡಿ. 10 ನಿಮಿಷದ ನಂತರ ಸ್ವಲ್ಪ ಗಟ್ಟಿ ಮೊಸರು ಸೇರಿಸಿ.ಮೊಸರು ಸ್ವಲ್ಪ ಹುಳಿಯಾಗಿದ್ದರೂ ಬಳಸಬಹುದು. ನಂತರ ಅಡುಗೆ ಸೋಡಾವನ್ನು ಸೇರಿಸಿ ಮಿಕ್ಸ್ ಮಾಡಿ.

ಇನ್ನು ಒಂದು ತವಾವನ್ನು ಬಿಸಿ ಮಾಡಿ ದೋಸೆ ಹುಯ್ಯಿರಿ. ತೆಳುವಾಗಿ ಹಾಕಿದರೆ ಗರಿಗರಿಯಾದ ದೋಸೆಯಾಗಿತ್ತದೆ. ದೋಸೆ ಹುಯ್ದು, ಮೇಲಿಂದ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ. ಇದು ಗರಿಗರಿಯಾದ ಮೇಲೆ ತೆಗೆಯಿರಿ. ಈ ದೋಸೆಯನ್ನು ಯಾವುದೇ ಚಟ್ನಿ ಜೊತೆ ಸವಿಯಬಹುದು. ಸಂಜೆಯ ಸಮಯದಲ್ಲೂ ಕೂಡ ಧಿಡೀರ್ ಅಂತ ಈ ದೋಸೆಯನ್ನು ಮಾಡಿಕೊಂಡು ತಿನ್ನಬಹುದು.

Comments are closed.