ಸಂಕಷ್ಟದಲ್ಲಿ ಸಿಲುಕಿದ ಅಲ್ಲು ಅರ್ಜುನ್, ಕೊನೆಗೆ ಸಹಾಯಕ್ಕೆ ಬಂದು ಅಲ್ಲು ಕೈ ಹಿಡಿದ ‘ಕೆಜಿಎಫ್​ 2’ ನಟಿ ರವೀನಾ ಟಂಡನ್​ ಕುಟುಂಬ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತ ಚಿತ್ರರಂಗದಿಂದ ಪ್ಯಾನ್ ಇಂಡಿಯಾ ಚಿತ್ರಗಳ ಬಿಡುಗಡೆ ಹಾವಳಿ ಸಾಕಷ್ಟು ಹೆಚ್ಚಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ರವರ ಬಹುನಿರೀಕ್ಷಿತ ಪುಷ್ಪಾ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಪುಷ್ಪ ಚಿತ್ರ ಇದೇ ಡಿಸೆಂಬರ್ 17ಕ್ಕೆ ವಿಶ್ವಾದ್ಯಂತ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುವ ತಯಾರಿಯನ್ನು ನಡೆಸಿಕೊಳ್ಳುತ್ತಿದೆ.

ಆದರೆ ಹಲವಾರು ಸುದ್ದಿಗಳ ಪ್ರಕಾರ ಪುಷ್ಪ ಚಿತ್ರದ ಹಿಂದಿ ಅವತರಣಿಕೆ ಅಂದುಕೊಂಡ ದಿನದಂದೇ ಹಿಂದಿ ಪ್ರದೇಶಗಳಲ್ಲಿ ಬಿಡುಗಡೆಯಾಗುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಪುಷ್ಪ ಚಿತ್ರದ ಹಿಂದಿ ಅವತರಣಿಕೆಯನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಗೋಲ್ಡ್ ಮೈನ್ಸ್ ಕಂಪನಿ ಪಡೆದುಕೊಂಡಿತ್ತು. ಆದರೆ ಡಿಸೆಂಬರ್ 17ರಂದು ಬಿಡುಗಡೆ ಮಾಡುವುದು ಕಷ್ಟಕರ ಎಂದು ಭಾವಿಸಲಾಗಿತ್ತು. ಆದರೆ ಪುಷ್ಪ ಚಿತ್ರತಂಡಕ್ಕೆ ಹಿಂದಿಯಲ್ಲಿ ಬಿಡುಗಡೆ ಮಾಡಲು ಈಗ ಕೆಜಿಎಫ್ ಚಿತ್ರದ ನಟಿಯೊಬ್ಬರ ಪತಿ ಸಹಾಯ ಮಾಡುತ್ತಿದ್ದಾರಂತೆ.

allu ravina | ಸಂಕಷ್ಟದಲ್ಲಿ ಸಿಲುಕಿದ ಅಲ್ಲು ಅರ್ಜುನ್, ಕೊನೆಗೆ ಸಹಾಯಕ್ಕೆ ಬಂದು ಅಲ್ಲು ಕೈ ಹಿಡಿದ ‘ಕೆಜಿಎಫ್​ 2’ ನಟಿ ರವೀನಾ ಟಂಡನ್​ ಕುಟುಂಬ.
ಸಂಕಷ್ಟದಲ್ಲಿ ಸಿಲುಕಿದ ಅಲ್ಲು ಅರ್ಜುನ್, ಕೊನೆಗೆ ಸಹಾಯಕ್ಕೆ ಬಂದು ಅಲ್ಲು ಕೈ ಹಿಡಿದ ‘ಕೆಜಿಎಫ್​ 2’ ನಟಿ ರವೀನಾ ಟಂಡನ್​ ಕುಟುಂಬ. 2

ಹೌದು ಗೆಳೆಯರೇ ಕೆಜಿಎಫ್ ಚಿತ್ರದಲ್ಲಿ ನಟಿಸಿರುವ ರವೀನ ತಂಡನ್ ರವರ ಅತಿಯಾಗಿರುವ ಅನಿಲ್ ತಡಾನಿ ಅವರ ಎ ಎ ಫಿಲಂಸ್ ಸಂಸ್ಥೆ ಗೋಲ್ಡ್ ಮೈನ್ಸ್ ಕಂಪನಿ ಜೊತೆಗೆ ಸೇರಿ ಪುಷ್ಪ ಚಿತ್ರವನ್ನು ಡಿಸೆಂಬರ್ 17ರಂದು ಹಿಂದಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಸಹಾಯ ಮಾಡಲಿದೆ ಎಂಬುದಾಗಿ ಕೇಳಿಬರುತ್ತಿದೆ. ಇನ್ನು ಈಗಾಗಲೇ ಅನಿಲ್ ತಡಾನಿ ಯವರಿಗೆ ಬಾಹುಬಲಿ ಎಂತಹ ಅದ್ದೂರಿ ಮಟ್ಟದ ಚಿತ್ರವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಿ ಅನುಭವವಿದೆ. ಹೀಗಾಗಿ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಪುಷ್ಪ ಚಿತ್ರ ಡಿಸೆಂಬರ್ 17ರಂದು ಹಿಂದಿಯಲ್ಲಿ ಕೂಡ ಬಿಡುಗಡೆಯಾಗಲಿದೆ.

Comments are closed.