ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಇಬ್ಬರು ಪತ್ನಿಯರು ಯಾರು? ಈಗ ಹೇಗಿದ್ದಾರೆ. ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಪತ್ರಿಕೋದ್ಯಮ ಎಂಬುದು ಸಾಕಷ್ಟು ಘಟನೆಗಳನ್ನು ಹಾಗೂ ವಿಷಯಗಳನ್ನು ಜನರಿಗೆ ಪ್ರತಿನಿತ್ಯ ವಿವರವಾಗಿ ತಿಳಿಸುವ ಒಂದು ಮಾಧ್ಯಮ. ಹೌದು ಈ ಭೂಮಿ ಮೇಲೆ ನಡೆಯುವ ಸಾಕಷ್ಟು ಮಾತ್ರವಾದ ಘಟನೆಗಳು ಹಾಗೂ ಹಲವಾರು ವಿಷಯಗಳ ಬಗ್ಗೆ ಜನರಿಗೆ ಮನೆ ಮನೆಗೆ ತಲುಪಿಸುವ ಒಂದು ಸಾಧನವೇ ಪತ್ರಿಕೆ. ಇನ್ನು ಪತ್ರಿಕೆಯಲ್ಲಿ ಕೆಲಸ ಮಾಡುವವರು ಪ್ರತಿದಿನ ಎಲ್ಲ ಕಡೆ ಹೋಗಿ ಸುದ್ದಿಗಳನ್ನು ಕಲೆಹಾಕಿ ನಂತರ ಪತ್ರಿಕೆಗಳಲ್ಲಿ ಛಾಪಿಸುತ್ತಾರೆ.

ಇಂತಹ ಪತ್ರಿಕೋದ್ಯಮದಲ್ಲಿ ಸಾಕಷ್ಟು ಬರಹಗಾರರು ಹಾಗೂ ಸಂಪಾದಕರನ್ನು ನಾವು ಕಾಣಬಹುದು. ಇನ್ನೂ ಅದೆಷ್ಟು ಜನ ತಮ್ಮದೇ ಆದ ಸ್ವಂತ ಪತ್ರಿಕೆಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಅಂತಹ ಕ್ಯಾತ ಪತ್ರಕರ್ತರಲ್ಲಿ ರವಿಬೆಳಗೆರೆಯವರು ಕೂಡ ಒಬ್ಬರು. ಹೌದು ಹಾಯ್ ಬೆಂಗಳೂರು ಎಂಬ ಪತ್ರಿಕೆಯನ್ನು ಪ್ರಾರಂಭಿಸಿದವರು ಪತ್ರಿಕೋದ್ಯಮದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ.

ಹೌದು ಮೊದಮೊದಲು ಪತ್ರಿಕೆಗಳ ವಿತರಕರಾಗಿ ಕೆಲಸ ಪ್ರಾರಂಭಿಸಿದ ರವಿಬೆಳಗೆರೆ ಅವರು ಹಾಲಿನ ಭೂತ್ ಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ. ಹೀಗೆ ನಾನಾ ರೀತಿಯಲ್ಲಿ ಕೆಲಸ ಮಾಡುತ್ತಿದ್ದ ರವಿಬೆಳಗೆರೆಯವರು ಒಂದು ದಿನ ‘ಹಾಯ್ ಬೆಂಗಳೂರು’ ಎಂಬ ಪತ್ರಿಕೆಯನ್ನು ಹೊರತಂದರು. ಈ ಪತ್ರಿಕೆ ಕೆಲವೇ ಕೆಲವು ದಿನಗಳಲ್ಲಿ ನಮ್ಮ ಕನ್ನಡದ ಟಾಪ್ ಪತ್ರಿಕೆಯಾಗಿ ಬೆಳೆಯಿತು. ಇಂತಹ ಪತ್ರಿಕೆಯನ್ನು ಕನ್ನಡಕ್ಕೆ ನೀಡಿದ ಕೀರ್ತಿ ರವಿ ಬೆಳಗೆರೆ ಅವರಿಗೆ ಸಲ್ಲುತ್ತದೆ.

ಹೌದು ಈ ಪತ್ರಿಕೆಯ ಮೂಲಕ ರವಿಬೆಳಗೆರೆಯವರು ಸಾಕಷ್ಟು ವಿಷಯಗಳನ್ನು ಕಲೆಹಾಕಿ ಅನೇಕ ಸುದ್ದಿಗಳನ್ನು ಜನರಿಗೆ ತಲುಪಿಸಿದ್ದಾರೆ. ಇನ್ನು ಈ ಪತ್ರಿಕೆ ಹಾಗೂ ರವಿಬೆಳಗೆರೆ ಅವರು ಸಾಕಷ್ಟು ವಿವಾದಗಳಲ್ಲಿ ಕೂಡ ಕಂಡುಬಂದಿತ್ತು. ಭೀಮಾ ತೀರದಲ್ಲಿನ ವಿಷಯ ಸೇರಿದಂತೆ ಸಾಕಷ್ಟು ಸಂಘಟನೆಗಳಿಗೆ ಇದು ಸಾಕ್ಷಿಯಾಗಿತ್ತು. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಇರುವ ರೌ-ಡಿ-ಸಂ ಬಗ್ಗೆ ಕೂಡ ಇದರಲ್ಲಿ ಸಾಕಷ್ಟು ಲೇಖನಗಳು ಪ್ರಸ್ತಾಪಿಸಲಾಗಿತ್ತು.

ಇನ್ನೂ ರವಿಬೆಳಗೆರೆ ಅವರು ಖ್ಯಾತ ಪತ್ರಕರ್ತರು ಮಾತ್ರವಲ್ಲದೆ ಕಾದಂಬರಿಕಾರರು ಹಾಗೂ ಬರಹಗಾರರು ಕೂಡಾ ಹೌದು. ಇನ್ನು ಇವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಇವರು ಇಬ್ಬರು ಪತ್ನಿಯರನ್ನು ಹೊಂದಿದ್ದಾರೆ. ಹೌದು ಮೊದಲ ಪತ್ನಿ ಲಲಿತಾ ಬೆಳಗೆರೆ ಹಾಗೂ ಎರಡನೇ ಪತ್ನಿ ಯಶೋಮತಿ ಬೆಳಗೆರೆ. ಇನ್ನು ಈ ವಿಷಯ ಕೇವಲ ಆಪ್ತರಲ್ಲಿ ಮಾತ್ರ ಸೀಮಿತವಾಗಿತ್ತು. ಆದರೆ ರವಿಬೆಳಗೆರೆಯವರು ಒಂದು ಸಂದರ್ಭದಲ್ಲಿ ತಮಗೆ ಇಬ್ಬರು ಪತ್ನಿಯರು ಹಾಗೂ ನಾಲ್ಕು ಮಕ್ಕಳಿರುವ ವಿಚಾರ ಅಧಿಕೃತವಾಗಿ ಹೇಳಿಕೊಂಡಿದ್ದರು.

ಇನ್ನು ತಮ್ಮ ಎರಡನೇ ಪತ್ನಿ ಬಗ್ಗೆ ಹೇಳಿಕೊಂಡ ರವಿ ಬೆಳಗೆರೆಯವರು ತಮ್ಮ ದಾಂಪತ್ಯ ಜೀವನಕ್ಕೆ ಹುಟ್ಟಿದ ಮಗ ಹಿಮವಂತನಿಗೆ ನಾನು ಅಪ್ಪ. ಶಾಲಾ ದಾಖಲಾತಿ ಸೇರಿದಂತೆ ಎಲ್ಲ ಕಡೆ ನಾನೇ ಅಪ್ಪ ಎಂದು ನಮೂದಿಸಿರುವುದಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಎರಡನೇ ಮದುವೆಯ ವಿಚಾರವಾಗಿ ತಮ್ಮ ಮೊದಲ ಪತ್ನಿ ಹಾಗೂ ಮಕ್ಕಳಲ್ಲಿ ಕ್ಷಮೆಯಾಚಿಸಿದ್ದರು. ಅಷ್ಟೇ ಅಲ್ಲದೆ ಅವರು ದಿನಕ್ಕೆ ಒಂದು ಲಕ್ಷ ರೂಪಾಯಿ ದುಡಿಯುವುದಾಗಿ ಹಾಗೂ ಒಟ್ಟು 150 ಕೋಟಿ ಆಸ್ತಿ ಹೊಂದಿರುವುದಾಗಿ ಕೇಳಿಕೊಂಡಿದ್ದರು.

Comments are closed.