ಸಿಂಗಂ ರವಿ ಡಿ ಚನ್ನಣ್ಣನವರ್ ಅವರ ತಿಂಗಳ ಸಂಬಳ ಎಷ್ಟು ಗೊತ್ತಾ?? ಸರ್ಕಾರ ಕೊಟ್ಟ ಸೌಲಭ್ಯಗಳು ಯಾವುವು ಗೊತ್ತಾ??

ನಮಸ್ಕಾರ ಸ್ನೇಹಿತರೇ ರವಿ ದ್ಯಾಮಪ್ಪ ಚನ್ನಣ್ಣನವರ್ ಗದಗದ ಖಡಕ್ ಆಫೀಸರ್. ಬಾಲ್ಯದಲ್ಲಿ ಕಡು ಬಡತನದಿಂದ ಕಷ್ಟಪಟ್ಟು ಓದಿ ಮೇಲೆ ಬಂದವರು. ಕರ್ನಾಟಕದ ಖಡಕ್ ಆಫೀಸರ್ ಗಳಲ್ಲಿ ಇವರು ಸಹ ಒಬ್ಬರು. ಐಪಿಎಸ್ ಅಧಿಕಾರಿ ಇಷ್ಟೊಂದು ಸರಳರಾಗಿ ಜನಾನುರಾಗಿ ಕೆಲಸ ಮಾಡಬಲ್ಲರು ಎಂದು ತೋರಿಸಿದ ವ್ಯಕ್ತಿ.

ಪೋಲಿಸ್ ಎಂದರೇ ಕೇವಲ ಅಪರಾಧ ಚಟುವಟಿಕೆಯನ್ನ ಮಾತ್ರ ತಡೆಯುವುದೇ ಅವರ ಕೆಲಸ ಎಂದು ಷರಾ ಬರೆದಿದ್ದವರಿಗೆ, ರವಿ ಚನ್ನಣ್ಣವರ್ ಪೋಲಿಸ್ ಎಂದರೇ ಬರೀ ಅಪರಾಧ ಚಟುವಟಿಕೆಗಳನ್ನ ತಡೆಯುವುದು ಮಾತ್ರವಲ್ಲದೇ, ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ, ಸಾಮಾಜಿಕ ಪಿಡುಗುಗಳನ್ನ ಹೋಗಲಾಡಿಸುವುದು, ವಿದ್ಯಾರ್ಥಿಗಳಿಗೆ ಕರಿಯರ್ ಗೈಡೆನ್ಸ್ ನೀಡುವುದು, ಹೀಗೆ ಹಲವಾರು ಸಮಾಜಮುಖಿ ಕೆಲಸಗಳ ಮೂಲಕ ರವಿ.ಡಿ.ಚನ್ನಣ್ಣನವರ್ ಅದೆಷ್ಟೋ ಯುವ ಸಮೂಹಕ್ಕೆ ಸ್ಪೂರ್ತಿಯಾಗಿದ್ದಾರೆ.

ಅಷ್ಟಕ್ಕೂ ರವಿ.ಡಿ.ಚನ್ನಣ್ಣನವರ್ ಅವರಿಗೆ ತಿಂಗಳ ಎಷ್ಟು ಸಂಬಳ ಎಂದು ಹಲವಾರು ಜನ ಕೇಳುತ್ತಿರುತ್ತಾರೆ. ಸರ್ಕಾರ ಇಂತಹ ಖಡಕ್ ಆಫೀಸರ್ ಗಳಿಗೆ ಸಂಬಳ ಮಾತ್ರವಲ್ಲದೇ ಹಲವಾರು ಸೌಲಭ್ಯಗಳನ್ನು ಸಹ ನೀಡುತ್ತಿದೆ. ಅವು ಯಾವುವು ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ. ರವಿ.ಡಿ.ಚನ್ನಣ್ಣನವರ್ ಅವರಿಗೆ ಸರ್ಕಾರ ತಿಂಗಳಿಗೆ ಒಂದು ಲಕ್ಷದ ಐದು ಸಾವಿರ ಸಂಬಳ ನೀಡುತ್ತದೆ.ಜೊತೆಗೆ ಉಚಿತ ಸರ್ಕಾರಿ ಬಂಗಲೆ ಸಹ ನೀಡುತ್ತದೆ. ಇಬ್ಬರು ಸಹಾಯಕರು ಹಾಗೂ ಇಬ್ಬರು ಡ್ರೈವರ್ ಗಳನ್ನು ನೀಡುತ್ತದೆ. ಇಬ್ಬರು ಅಂಗರಕ್ಷಕರು, ಇಬ್ಬರು ಅಡುಗೆ ಸಹಾಯಕರು, ಒಬ್ಬ ಮಾಲಿಯನ್ನು ನೀಡುತ್ತದೆ.

ಇದರ ಜೊತೆ ಪ್ರವಾಸ ಭತ್ಯೆ, ದಿನ ಭತ್ಯೆಗಳು ಸಹ ದೊರೆಯುತ್ತವೆ. ರವಿ.ಡಿ.ಚನ್ನಣ್ಣನವರ್ ಮಾಡುತ್ತಿರುವ ಸಮಾಜಮುಖಿ ಕೆಲಸಕ್ಕೆ ಈ ಸಂಬಳ ಕಡಿಮೆ ಅನಿಸಿದರೂ, ಅದು ಅತಿಶಯೋಕ್ತಿ ಅಲ್ಲ. ಆದರೇ ರವಿಯವರು ಹೇಳುವ ಪ್ರಕಾರ, ನನ್ನ ಕರ್ತವ್ಯಕ್ಕೆ ಸರ್ಕಾರ ನೀಡುತ್ತಿರುವ ಈ ಸವಲತ್ತುಗಳಿಗೆ ಚಿರರುಣಿಯಾಗಿದ್ದಾರೆ. ಜನರಿಗೆ ಸೇವೆ ಮಾಡಲು ಹಲವರಿಗೆ ಆಸೆ ಇರುತ್ತದೆ. ಆದರೇ ನನಗೆ ಅವಕಾಶ ಸಿಕ್ಕಿದೆ. ಅದಕ್ಕೆ ನಾನು ನನ್ನ ಸಾಮರ್ಥ್ಯಕ್ಕೂ ಮೀರಿ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. ದಕ್ಷ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Comments are closed.