ಬಸ್ಸಿನಲ್ಲಿ ಸೀಟು ಸಿಗದ ಹುಡುಗನೊಬ್ಬ ನಾಲ್ಕು ನೂರು ಕೋಟಿ ರೂಪಾಯಿಗಳಿಸಿದ್ದು ಹೇಗೆ ಗೊತ್ತಾ??

Inspiring

ನಮಸ್ಕಾರ ಸ್ನೇಹಿತರೇ ಒಂದು ಸಣ್ಣ ಹಿನ್ನಡೆ ಮನುಷ್ಯನ ಜೀವನದಲ್ಲಿ ಎಂತಹದಾದರೂ ಮುನ್ನಡೆಯನ್ನ ನೀಡುತ್ತದೆ ಎಂಬುದಕ್ಕೆ ಈ ಕಥೆಯೇ ಸಾಕ್ಷಿ. ಮೊದಲಿನಿಂದಲೂ ಕೊನೆಯ ತನಕವೂ ಗಮನವಿಟ್ಟು ಓದಿ.2 004 ರಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಆಂದ್ರದ ನಿಜಾಮಾಬಾದ್ ನ ಹುಡುಗ ಫಣೀಂದ್ರ ಬೆಂಗಳೂರಿಗೆ ಕೆಲಸಕ್ಕೆಂದು ಬಂದು ಟ್ಯಾಕ್ಸಸ್ ಇನ್ವೆಸ್ಟ್ ಮೆಂಟ್ ಎಂಬ ಕಂಪನಿ ಸೇರಿಕೊಳ್ಳುತ್ತಾರೆ.

ದೀಪಾವಳಿಗೆಂದು ಆಫೀಸ್ ಗೆ ರಜೆ ಹಾಕಿ ತನ್ನ ಊರು ನಿಜಾಮಾಬಾದ್ ಗೆ ತೆರಳಲೆಂದು ರಾತ್ರಿ ಮೆಜೆಸ್ಟಿಕ್ ಗೆ ಬರುತ್ತಾರೆ. ಆದರೇ ಫಣೀಂದ್ರಗೆ ಯಾವ ಬಸ್ ನಲ್ಲಿ ಕೂಡ ಸಹ ಸೀಟ್ ಸಿಗುವುದೇ ಇಲ್ಲ. ಕೊನೆಗೆ ಆ ರಾತ್ರಿಯನ್ನ ಮೆಜೆಸ್ಟಿಕ್ ನಲ್ಲೇ ಕಳೆಯಬೇಕಾದ ಪರಿಸ್ಥಿತಿ ಬರುತ್ತದೆ. ಆಗ ಯೋಚಿಸುತ್ತಿದ್ದ ಫಣೀಂದ್ರ ಬಸ್ ಬುಕಿಂಗ್ ನ್ನು ಸಹ ನಾವೇಕೆ ಆನಲೈನ್ ನಲ್ಲೇ ಮಾಡಬಾರದು ಎಂದು ಯೋಚಿಸುತ್ತಾರೆ.

ಹಬ್ಬ ಮುಗಿಸಿ ಬೆಂಗಳೂರಿಗೆ ಬಂದ ನಂತರ ಈ ಬಗ್ಗೆ ಕೊಂಚ ಸೀರಿಯಸ್ ಆಗಿ ಯೋಚಿಸಿದ ಫಣೀಂದ್ರ, ತಾವೇ ಬಸ್ ಬುಕಿಂಗ್ ಸಂಭಂದಿತ ಟಿಕೇಟ್ ಬುಕ್ಕಿಂಗ್ ವೆಬಸೈಟ್ ಪ್ರಾರಂಭಿಸುತ್ತಾರೆ. ಬಸ್ ಬುಕ್ಕಿಂಗ್ ಸಂಭಂದ ಹೆಚ್ಚಿನ ಗ್ರೌಂಡ್ ಮಾಹಿತಿ ಇಲ್ಲದ ಕಾರಣ , ಬಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗನ ಹತ್ತಿರ ಸಹಾಯ ಪಡೆಯುತ್ತಾನೆ. ಆತ ಬಸ್ ಬುಕ್ಕಿಂಗ್ ಸಂಭಂದಿತ ಎಲ್ಲಾ ಮಾಹಿತಿಗಳನ್ನು ಫಣೀಂದ್ರರವರಿಗೆ ನೀಡುತ್ತಾನೆ. ಈ ಎಲ್ಲಾ ವಿಷಯಗಳನ್ನು ಸಂಗ್ರಹಿಸಿದ ಫಣೀಂದ್ರ ರೆಡ್ ಬಸ್ ಎಂಬ ವೆಬ್ ಸೈಟ್ ಆರಂಭಿಸಲು ನಿರ್ಧರಿಸುತ್ತಾರೆ. ಈ ಬಗ್ಗೆ ತಮ್ಮ ಸ್ನೇಹಿತರಿಗೂ ತಿಳಿಸಿ 5 ಲಕ್ಷ ಬಂಡವಾಳದಿಂದ ರೆಡ್ ಬಸ್ ಆನಲೈನ್ ಬುಕಿಂಗ್ ವೆಬ್ ಸೈಟ್ ಆರಂಭಿಸಿ ತಮ್ಮ ರೂಮ್ ನ್ನೇ ಆಫೀಸ್ ಮಾಡಿಕೊಳ್ಳುತ್ತಾರೆ.

ಮುಂದೆ ತಮ್ಮ ಸ್ನೇಹಿತರ ಬಳಗದಲ್ಲಿರುವವರಿಗೆ ಈ ವೆಬ್ಸೈಟ್ ಪರಿಚಯಿಸಿ, ಹೀಗೆ ಚೈನ್ ಲಿಂಕ್ ಮೂಲಕ ವೆಬ್ಸೈಟ್ ಜನಪ್ರಿಯವಾಗುತ್ತದೆ. ಮುಂದೆ ಭಾರತದಲ್ಲಿ ಡಿಜಿಟಲ್ ಕ್ರಾಂತಿ ಹಂತಹಂತವಾಗಿ ಬೆಳೆದ ನಂತರ ರೆಡ್ ಬಸ್ ಅಪ್ಲಿಕೇಶನ್ ನನ್ನು ಮೊಬೈಲ್ ನಲ್ಲಿ ಸಹ ಬಳಸುವ ವ್ಯವಸ್ಥೆ ಮಾಡಿದರು. ಹೀಗೆ ನೋಡ ನೋಡುತ್ತಿದ್ದಂತೆ ರೆಡ್ ಬಸ್ ಅಪ್ಲಿಕೇಶನ್ ಜನಪ್ರಿಯವಾಯಿತು.

ಮುಂದೆ 2013 ರಲ್ಲಿ ಈ ಜನಪ್ರಿಯವಾಗಿದ್ದ ಕಂಪನಿಯನ್ನ ಒಂದು ದೊಡ್ಡ ಕಂಪನಿ ಬರೋಬ್ಬರಿ ನಾಲ್ಕು ನೂರು ಕೋಟಿ ರೂಪಾಯಿಗೆ ಕೊಂಡು ಕೊಂಡಿತು. ಹೀಗೆ ಐದು ಲಕ್ಷ ರೂಪಾಯಿಯಲ್ಲಿ ಶುರುವಾದ ಕಂಪನಿ ಏಳು ವರ್ಷದೊಳಗೆ ತನ್ನ ಮೌಲ್ಯವನ್ನ ನಾಲ್ಕುನೂರು ಕೋಟಿ ರೂಪಾಯಿಗೆ ಬಿಕರಿಯಾಯಿತು. ಬಸ್ ತಪ್ಪಿದ್ದರಲ್ಲೇ ಧನಾತ್ಮಕ ಅಂಶವನ್ನ ಹುಡುಕಿ ಬದುಕಿಗೊಂದು ದಾರಿ ಕಂಡುಕೊಂಡ ಫಣೀಂದ್ರ ಮತ್ತವರ ಸ್ನೇಹಿತರು ಇಂದು ಕೋಟಿ ಕೋಟಿಗೆ ಒಡೆಯರು. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Leave a Reply

Your email address will not be published. Required fields are marked *