ಕರ್ನಾಟಕದ ಹೆಮ್ಮೆಯ ರಾಜಕಾರಣಿ ಸದಾನಂದ ಗೌಡರ ಕುಟುಂಬ ಹೇಗಿದೆ ಗೊತ್ತಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಇಂದು ನಾವು ಮಾತನಾಡಲು ಹೊರಟಿರುವುದು ಯಾವುದೇ ಸಿನಿಮಾ ಸೆಲೆಬ್ರಿಟಿಯ ಕುರಿತಂತೆ ಅಲ್ಲ ಬದಲಾಗಿ ನಮ್ಮ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಹೆಸರು ಮಾಡಿರುವ ಧೀಮಂತ ನಾಯಕರ ಕುರಿತಂತೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಡಿವಿ ಸದಾನಂದ ಗೌಡ ರವರ ಕುರಿತಂತೆ. ಡಿವಿ ಸದಾನಂದ ಗೌಡರಿಗೆ ಕೇವಲ ರಾಜ್ಯದ ಮುಖ್ಯಮಂತ್ರಿಯಾಗಿರುವ ಅನುಭವ ಮಾತ್ರವಲ್ಲದೆ ಕೇಂದ್ರದಲ್ಲಿಯೂ ಕೂಡ ಕೆಮಿಕಲ್ಸ್ ಆಗು ಫರ್ಟಿಲೈಜರ್ ಮಂತ್ರಿಯಾಗಿ ಹಾಗೂ ರೈಲ್ವೆ ಮಿನಿಸ್ಟರ್ ಆಗಿ ಕೂಡ ಕಾರ್ಯನಿರ್ವಹಿಸಿದ ಅನುಭವವಿದೆ.

ಹೌದು ಸ್ನೇಹಿತರೆ ಇವರು ಹುಟ್ಟಿದ್ದು ಸುಳ್ಯ ತಾಲೂಕಿನಲ್ಲಿ. ತುಳು ಗೌಡ ಕುಟುಂಬಕ್ಕೆ ಜನಿಸಿದವರು. ಇನ್ನು ಇವರು ಬೆಂಗಳೂರು ಉತ್ತರ ವಿಭಾಗದ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿನಿಧಿಸುತ್ತಾರೆ. ಯಾರ ತಂಟೆಗೂ ಕೂಡ ಹೋಗದಂತಹ ಅಜಾತಶತ್ರು ರಾಜಕಾರಣಿಯೆಂದರೂ ಕೂಡ ತಪ್ಪಾಗಲಾರದು. ತಮ್ಮ ಆಡಳಿತ ಅವಧಿಯಲ್ಲಿ ರಾಜ್ಯದ ಜನರಿಗೆ ಸಾಕಷ್ಟು ಉತ್ತಮ ಕ್ರಮಗಳನ್ನು ನೀಡುವ ಮೂಲಕ ಆಸರೆಯಾಗಿದ್ದಾರೆ. ಅದರಲ್ಲೂ ಸದಾನಂದ ಗೌಡರವರು ದಕ್ಷಿಣ ಕನ್ನಡ ಜನರಿಗೆ ಸಾಕಷ್ಟು ಸಹಾಯವನ್ನು ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಇವರಲ್ಲಿ ನಾಯಕತ್ವದ ಗುಣ ಚಿಕ್ಕನಿಂದಲೂ ಕೂಡ ಬೆಳೆದುಕೊಂಡು ಬಂದಿತ್ತು. ಲಾ ಕಾಲೇಜಿನಲ್ಲಿ ಓದುತ್ತಿರಬೇಕಾದರೆ ಯೂನಿಯನ್ ಪ್ರೆಸಿಡೆಂಟ್ ಆಗಿದ್ದರು.

ಇನ್ನು ಸದಾನಂದಗೌಡರ ವೈಯಕ್ತಿಕ ಜೀವನದ ವಿಚಾರಕ್ಕೆ ಬರುವುದಾದರೆ 1981 ರಲ್ಲಿ ದತ್ತಿ ಸದಾನಂದ ರವರೊಂದಿಗೆ ಮದುವೆಯಾಗುತ್ತಾರೆ. ಇನ್ನು ಇವರಿಗೆ ಕುಶಾಲ್ ಗೌಡ ಹಾಗೂ ಕಾರ್ತಿಕ್ ಗೌಡ ಎಂಬ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ. ಕಾರ್ತಿಕ್ ಗೌಡರವರು ಮದುವೆಯಾಗಿ ಈಗಾಗಲೇ ಸ್ವಂತದ ಬಿಸಿನೆಸ್ ಅನ್ನು ನಡೆಸುತ್ತಿದ್ದಾರೆ‌. ಇನ್ನು ಕುಶಾಲ್ ಗೌಡರವರು 2003ರಲ್ಲಿ ಕಾರ್ ಘಟನೆಯಲ್ಲಿ ಈ ಲೋಕವನ್ನು ತ್ಯಜಿಸಿದ್ದಾರೆ. ಸದಾನಂದ ಗೌಡರ ಕುಟುಂಬದ ಅಪರೂಪದ ಫೋಟೋಗಳನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ. ಇನ್ನು ಸದಾನಂದಗೌಡರ ಅವರ ಕುರಿತಂತೆ ನಿಮಗೆ ಇರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.