ಐಪಿಎಲ್ ಗೆದ್ದ ತಕ್ಷಣವೇ ಸಿಹಿ ಸುದ್ದಿ ನೀಡಿದ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ದಂಪತಿಗಳು. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿ ಕಪ್ತಾನ ಎಂಬುದಾಗಿ ಈಗಾಗಲೇ ಮಹೇಂದ್ರ ಸಿಂಗ್ ಧೋನಿ ಯವರು ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ. ಹೌದು ಸ್ನೇಹಿತರೇ ಈಗಾಗಲೇ t20 ವರ್ಲ್ಡ್ ಕಪ್ ಏಕದಿನ ವರ್ಲ್ಡ್ ಕಪ್ 4 ಐಪಿಎಲ್ ಕಪ್ ಗಳು ಎರಡು ಚಾಂಪಿಯನ್ಸ್ ಲೀಗ್ ಕಪ್ಗಳು ಇಷ್ಟು ಮಾತ್ರವಲ್ಲದೆ ಒಂದು ಚಾಂಪಿಯನ್ಸ್ ಟ್ರೋಫಿ ಕೂಡ ಗೆದ್ದಿದ್ದಾರೆ ತಮ್ಮ ನಾಯಕತ್ವದ ಅವಧಿಯಲ್ಲಿ. ಇನ್ನು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ನಿನ್ನೆ ಎಷ್ಟು ಚೆನ್ನೈ ಸೂಪರ್ ಕಿಂಗ್ಸ್ ತಂಡ 2021 ಐಪಿಎಲ್ ಕಪ್ಪನ್ನು ಗೆದ್ದಿದೆ.

ನಿನ್ನೆ ನಡೆದ ಫೈನಲ್ ಪಂದ್ಯಾವಳಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ನಲ್ಲಿ ನಾಲ್ಕನೇ ಬಾರಿಗೆ ಕಪ್ಪನ್ನು ಎತ್ತಿದೆ. ಪಾಪ್ ಡುಪ್ಲೆಸಿಸ್ ಋತುರಾಜ ಗಾಯಕ್ವಾಡ್ ಹಾಗೂ ರಾಬಿನ್ ಉತ್ತಪ್ಪ ರವರ ಗಮನಾರ್ಹ ಪ್ರದರ್ಶನದ ಕಾರಣದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿನ್ನೆ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಹೇಳಬಹುದಾಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿಜೇತರಾದ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿ ಅವರಿಂದ ಗುಡ್ ನ್ಯೂಸ್ ಒಂದು ಹೊರಬಂದಿದೆ.

ಹೌದು ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕನೇ ಬಾರಿ ಪ್ರಶಸ್ತಿಯನ್ನು ಗೆದ್ದ ಸಂಭ್ರಮದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಕುಟುಂಬದಿಂದ ಗುಡ್ ನ್ಯೂಸ್ ಒಂದು ಹೊರಬಂದಿದೆ. ಅದೇನೆಂದರೆ ಮಹೇಂದ್ರ ಸಿಂಗ್ ಧೋನಿಯವರ ಪತ್ನಿ 4 ತಿಂಗಳ ಗರ್ಭವತಿ ಯಾಗಿದ್ದಾರೆ. ಈಗಾಗಲೇ ಜೀವ ಧೋನಿ ಎಂಬ ಮಗಳನ್ನು ಪಡೆದಿರುವ ಈ ದಂಪತಿಗಳು ಮುಂದಿನ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಿಮ್ಮ ಸದ್ಯದಲ್ಲೇ ಪ್ರಾರಂಭವಾಗುವ t20 ವರ್ಲ್ಡ್ ಕಪ್ ಭಾರತ ತಂಡಕ್ಕೆ ಮೆಂಟರ್ ಆಗಿ ಮಹೇಂದ್ರ ಸಿಂಗ್ ಧೋನಿಯವರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈಗ ಈ ಸುದ್ದಿ ಕೂಡ ಹೊರಬಂದಿದ್ದು ಅಭಿಮಾನಿಗಳಲ್ಲಿ ಸಂತೋಷದ ಮನೆಯನ್ನು ಉಂಟುಮಾಡಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.