ಒಂದು ಕಾಲದ ಟಾಪ್ ನಟಿಯ ಜೀವನ ಯಾವ ಸ್ಥಿತಿಗೆ ಬಂದಿದೆ ಗೊತ್ತಾ?? ತಿಳಿದರೇ ನೀವು ಕೂಡ ದುಃಖ ಪಡ್ತೀರಾ??

Entertainment

ನಮಸ್ಕಾರ ಸ್ನೇಹಿತರೇ ಚಿತ್ರರಂಗವೇ ಹಂಗೆ ಇಲ್ಲಿ ಇರುವಷ್ಟು ದಿನ ಎಷ್ಟು ಬುದ್ಧಿವಂತಿಕೆಯಿಂದ ನಟಿಸಿ ಸಂಭಾವನೆಯನ್ನು ಗಳಿಸಿಕೊಳ್ಳುತ್ತೇವೆಯೋ ಅಲ್ಲಿಯವರೆಗೆ ನಿಮ್ಮ ಜೀವನ ಹಾಗೂ ಮುಂದಿನ ಜೀವನ ಸುಖಕರವಾಗಿರುತ್ತದೆ. ಒಮ್ಮೆ ನೀವು ಕಷ್ಟಕ್ಕೆ ಬಿದ್ದರೆ ಚಿತ್ರರಂಗವು ಕೂಡ ನಿಮ್ಮ ಸಹಾಯಕ್ಕೆ ಬರುವುದಿಲ್ಲ ಅಥವಾ ನಿಮ್ಮ ಸ್ನೇಹಿತರು ಅನಿಸಿಕೊಂಡಿರುವವರು ಕೂಡ ನಿಮ್ಮ ಸಹಾಯಕ್ಕೆ ಖಂಡಿತ ಬರುವುದಿಲ್ಲ.

ಹೌದು ಸ್ನೇಹಿತರೆ ನಾವು ಹೇಳುತ್ತಿರುವ ಈ ವಿಚಾರ ಇಂದು ನಾವು ಮಾತನಾಡಲು ಹೊರಟಿರುವ ನಟಿಯ ಜೀವನಕ್ಕೆ ಸರಿಹೊಂದುತ್ತದೆ. ನಿಮಗೆಲ್ಲಾ ಸಾಕ್ಷಿ ಶಿವಾನಂದ್ ಬಗ್ಗೆ ಗೊತ್ತಿರುತ್ತದೆ. ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ನಲ್ಲಿ ಕೂಡ ಬೇಡಿಕೆಯ ನಟಿಯಾಗಿ ಮೆರೆದವರು. 1995 ರಲ್ಲಿ ಬಾಲಿವುಡ್ನ ಜನಮ್ ಕುಂಡ್ಲಿ ಎಂಬ ಚಿತ್ರದ ಮೂಲಕ ಚಿತ್ರ ಲೋಕಕ್ಕೆ ಕಾಲಿಟ್ಟ ಸಾಕ್ಷಿ ಶಿವಾನಂದ್ ನಂತರ ದಕ್ಷಿಣ ಭಾರತ ಚಿತ್ರರಂಗದೆಡೆಗೆ ಮುಖ ಮಾಡಿದರು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಲಯಾಳಂ ಚಿತ್ರರಂಗದ ಮೆಗಾಸ್ಟಾರ್ ಮುಮ್ಮಟ್ಟಿ ಹಾಗೂ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆಗೆ ನಟಿಸುವ ಅವಕಾಶ ಕೂಡ ದೊರೆಯಿತು. ನಂತರ ಕನ್ನಡದಲ್ಲಿ ಕೂಡ ಶಿವರಾಜ್ಕುಮಾರ್ ರಮೇಶ್ ಅರವಿಂದ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ರವರ ಜೊತೆಗೆ ಕೂಡ ನಟಿಸುವ ಅವಕಾಶ ದೊರೆಯಿತು.

ಕನ್ನಡ ಚಿತ್ರರಂಗದಲ್ಲಿ ಅವರು ನಟಿಸಿದ ಪ್ರಮುಖ ಚಿತ್ರಗಳೆಂದರೆ ನಾನು ನಾನೇ ಕೋದಂಡರಾಮ ಗಲಾಟೆ ಅಳಿಯಂದ್ರು ಹಾಗೂ ಇತ್ಯಾದಿ. ಕ್ರಮೇಣವಾಗಿ ಬರಬರುತ್ತಾ ಸಾಕ್ಷಿ ಶಿವಾನಂದ್ ರವರಿಗೆ ಅವಕಾಶಗಳು ಕಡಿಮೆಯಾಗುತ್ತಿದ್ದವು ಇದಾದ ನಂತರ ಅವರ ಜೀವನವೇ ಸಂಪೂರ್ಣವಾಗಿ ಬದಲಾಗಿ ಹೋಯಿತು. ಚಿತ್ರರಂಗವನ್ನು ಬಿಟ್ಟು ಅಮೇರಿಕಾಗೆ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಲು ಅಮೆರಿಕಾಗೆ ಹಿಂದಿರುಗಿದ ಸಾಕ್ಷಿ ಶಿವಾನಂದ್ ರವರು ಅಲ್ಲಿ ಸಾಗರ ಎಂಬುವವರೊಂದಿಗೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಇದ್ದರು. ಸ್ವಲ್ಪ ಕಾಲದ ನಂತರ ಆ ಹುಡುಗ ಇವರ ದುಡ್ಡಿಗೆ ಆಸೆ ಪಡುತ್ತಿದ್ದಾನೆ ಹೊರತು ಇವರ ಮೇಲೆ ಪ್ರೀತಿ ಇಲ್ಲ ಎಂಬುದಾಗಿ ತಿಳಿದು ಅವರಿಂದ ದೂರ ಆದರು. ಇಷ್ಟೆಲ್ಲಾ ಆದ ನಂತರ ಮತ್ತೆ ನಾನು ಭಾರತಕ್ಕೆ ಹಿಂದಿರುಗುವುದಿಲ್ಲ ಎಂದು ಈಗ ಅಮೆರಿಕದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ಸಾಕ್ಷಿ ಶಿವಾನಂದ್ ಅವರು ಈಗ ಕಂಪನಿಯೊಂದರ ಕೆಲಸಗಾರರಾಗಿದ್ದಾರೆ.

Leave a Reply

Your email address will not be published. Required fields are marked *