ದೇವರ ವಿಗ್ರಹ ತಯಾರಿಕೆಯಲ್ಲಿ ಸಾಲಿಗ್ರಾಮ ಶಿಲೆಯನ್ನು ಬಳಸೋದು ಯಾಕೆ ಗೊತ್ತಾ?? ನೀವರಿಯದ ಮಾಹಿತಿ

ನಮಸ್ಕಾರ ಸ್ನೇಹಿತರೇ ಸಾಲಿಗ್ರಾಮ ಎನ್ನುವ ಪೂಜನೀಯ ಶಿಲೆಯ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ, ಹಿಮಾಲಯದ ಗಂಡಕಿ ಎಂಬ ನದಿಯಲ್ಲಿ ಸಿಗುವ ಕಪ್ಪು ವರ್ಣ ಸಾಲಿಗ್ರಾಮ ಶಿಲೆಗೆ ನಮ್ಮ ಸಂಸ್ಕೃತದಲ್ಲಿ ತುಂಬಾನೇ ಮಹತ್ವದ ಸ್ಥಾನವಿದೆ. ಅನೇಕರು ಇದನ್ನು ಮನೆಯಲ್ಲಿ ಇಟ್ಟುಕೊಂಡು ಪೂಜಿಸುತ್ತಾರೆ. ಶೈವರು ಶಿವಲಿಂಗವನ್ನು ಎಷ್ಟು ಪರಮಪವಿತ್ರ ಎಂದು ಭಾವಿಸಿ ಅದಕ್ಕೆ ಅಭಿಷೇಕವನ್ನು ನೆರವೇರಿಸುತ್ತಾರೋ, ಹಾಗೆಯೇ ವೈಷ್ಣವರು ಸಾಲಿಗ್ರಾಮ ಶಿಲೆಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಇಷ್ಟೆಲ್ಲ ಮಹತ್ವವಿರುವ ಸಾಲಿಗ್ರಾಮ ಶಿಲೆಯ ವಿಶೇಷತೆಗಳೇನು? ಈ ಶಿಲೆಯ ಪುರಾಣ ಇತಿಹಾಸದಲ್ಲಿರುವ ಕಥೆಗಳು ಏನು ಎಂದು ತಿಳಿಯೋಣ.

ಹಿಮಾಲಯದ ತಪ್ಪಲಿನಲ್ಲಿರುವ ವಿಷ್ಣುವಿನ ಮಹಾಕ್ಷೇತ್ರ ಬದರಿಯಲ್ಲಿರುವ ನಾರಾಯಣನ ವಿಗ್ರಹ, ಉಡುಪಿಯಲ್ಲಿರುವ ಶ್ರೀಕೃಷ್ಣನ ಮೂರ್ತಿ ಸಾಲಿಗ್ರಾಮ ಶಿಲೆಯದೆಂದು ಹೇಳಲಾಗುತ್ತೆ. ಅಷ್ಟೇ ಯಾಕೆ ಪುರಿ ಮಂದಿರದಲ್ಲಿ ಆರಾಧಿಸುವ ಜಗನ್ನಾಥನ ಮರದ ಮೂರ್ತಿಯ ಒಳಭಾಗದಲ್ಲಿ ಸಾಲಿಗ್ರಾಮ ಶಿಲೆ ಇಡಲಾಗಿದೆ ಎಂಬ ನಂಬಿಕೆ ಇದೆ.

ಸಾಲಿಗ್ರಾಮ ಎನ್ನುವ ಇಂತಹ ಅಪರೂಪದ ಶಿಲೆ ಸಿಗುವುದು ಹಿಮಾಲಯದಲ್ಲಿ ಹರಿಯುವ ಗಂಡಕಿ ಎಂಬ ನದಿಯಲ್ಲಿ ಅಕಸ್ಮಾತ್ ಬೇರೆ ನದಿಗಳಲ್ಲಿ ಸಾಲಿಗ್ರಾಮಗಳು ಸಿಕ್ಕರು ಅವು ಅಷ್ಟೊಂದು ಪೂಜನೀಯ ಎನಿಸಿಕೊಳ್ಳುವುದಿಲ್ಲ.ಪುರಾಣದಲ್ಲಿ ಉಲ್ಲೇಖಿಸಿರುವಂತೆ ಗಂಡಕಿ ನದಿ ಅತ್ಯಂತ ಪ್ರಾಹಿಮಾಲಯ ಸೃಷ್ಟಿಯಾದ ಕಾಲವೇ ಈ ನದಿಯು ಸೃಷ್ಟಿಯಾಯಿತು ಎಂಬ ನಂಬಿಕೆ ಇದೆ.

ಗಂಡಕಿ ನದಿಯಲ್ಲಿ ವಿವಿಧ ಆಕಾರದ ಸಾಲಿಗ್ರಾಮಗಳು ಸಿಗುತ್ತದೆ. ಶಂಖ,ಚಕ್ರ ಹಾಗು ವಿವಿಧ ದೇವತೆಗಳಿರುವ ಸಾಲಿಗ್ರಾಮ ಗಳಿಗೆ ಅವುಗಳದೇ ಆದ ಮಹತ್ವ ಗಳಿವೆ. ಪ್ರತಿಯೊಂದು ಸಾಲಿಗ್ರಾಮಕ್ಕೆ ವಿಶೇಷ ಶಕ್ತಿ ಇದೆ ಎಂಬುದು ನಮ್ಮ ನಂಬಿಕೆ. ಈ ಸಾಲಿಗ್ರಾಮಗಳ ರೂಪ ಹಾಗೂ ಆಕಾರಕ್ಕೆ ತಕ್ಕಂತೆ ಅವುಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ.ನಾರಾಯಣಿ ಹಿರಣ್ಯವತಿ ಎಂದು ಕರೆಯಲಾಗುತ್ತದೆ.

ಇನ್ನು ಈ ಕಪ್ಪು ಶಿಲೆಗೆ ಸಾಲಿಗ್ರಾಮ ಎಂಬ ಹೆಸರು ಬರಲು ಪ್ರಮುಖ ಕಾರಣ ಗಂಡಕಿ ನದಿಯ ಬಳಿ ಇರುವ ಸಾಲಿಗ್ರಾಮ ಎಂಬ ಸ್ಥಳ. ಆ ಸ್ಥಳದಲ್ಲಿ ಇಂತಹ ಅಪರೂಪ ಪೂಜೆಯ ಸಾಲಿಗ್ರಾಮಗಳು ಹೆಚ್ಚು ಸಿಗುವುದರಿಂದ ಇದನ್ನು ಸಾಲಿಗ್ರಾಮ ಎಂದು ಕರೆಯಲಾಗುತ್ತದೆ. ವ್ಯಕ್ತಿ ಸಾ’ಯುವ ಸಂದರ್ಭದಲ್ಲಿ ಗಂಗಾಜಲವನ್ನು ಕುಡಿಸಲಾಗುತ್ತದೆ. ಹಾಗೆಯೇ ಸಾಲಿಗ್ರಾಮಕ್ಕೆ ಅಭಿಷೇಕ ಮಾಡಿದ ಜಲವನ್ನು ಸಹ ಆತನಿಗೆ ಕುಡಿಸುವ ಪದ್ಧತಿ ಇದೆ.

ಸಾಲಿಗ್ರಾಮದ ಅಭಿಷೇಕ ಮಾಡಿದ ಜಲವು ಕೂಡ ಗಂಗಾಜಲದಷ್ಟೇ ಪರಮ ಪವಿತ್ರವಾದದ್ದು ಎಂದು ನಂಬಲಾಗುತ್ತದೆ. ಇದಕ್ಕಾಗಿಯೇ ಹಲವರು ಮನೆಯಲ್ಲಿ ಈ ಸಾಲಿಗ್ರಾಮವನ್ನು ಪೂಜಿಸಲ್ಪಡುತ್ತಾರೆ. ಇದರಿಂದಾಗಿ ಅನೇಕ ದೇವರ ವಿಗ್ರಹಗಳನ್ನು ಸಾಲಿಗ್ರಾಮದಿಂದ ಮಾಡುತ್ತಾರೆ. ಇದು ಸಾಲಿಗ್ರಾಮ ಶಿಲೆಗಳ ಬಗೆಗಿನ ಸಂಕ್ಷಿಪ್ತ ಮಾಹಿತಿ.

Comments are closed.