ವಿಚ್ಚೇದನದ ಬೆನ್ನಲ್ಲೇ ತನ್ನ ಸಂಭಾವನೆ ಏರಿಸಿಕೊಂಡ ಸಮಂತಾ, ಹೊಸ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಮಂತಾ ಹಾಗೂ ನಾಗ ಚೈತನ್ಯ ಬೇರೆ ಬೆರೆಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಇದಕ್ಕೆ ಸರಿಯಾದ ಕಾರಣ ಮಾತ್ರ ಯಾರಿಗೂ ತಿಳಿದಿಲ್ಲವಾದರೂ ಕಳೆದ ಒಂದೆರಡು ತಿಂಗಳುಗಳಿಂದ ನಾಗ ಚೈತನ್ಯ ಹಾಗೂ ಸಮಂತಾ ತಮ್ಮ ನಾಲ್ಕು ವರ್ಷದ ವೈವಾಹಿಕ ಜೀವನಕ್ಕೆ ತೆರೆ ಎಳೆಯುತ್ತಿದ್ದಾರೆ ಎಂಬ ವಿಷಯ ತುಂಬಾನೇ ಸದ್ದು ಮಾಡಿತ್ತು. ಕೊನೆಗೂ ಅಧಿಕೃತವಾಗಿ ವಿಚ್ಛೇಧನ ಪಡೆದು ದೂರವಾಗಿದ್ದಾರೆ ಸಮಂತಾ ಹಾಗೂ ನಾಗ ಚೈತನ್ಯ.

ಸಮಂತಾ ಹಾಗೂ ವಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದರೂ ಅದರ ಬಗ್ಗೆ ಯಾವತ್ತೂ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ತಮ್ಮ ವೃತ್ತಿ ಜೀವನದಲ್ಲಿಯೇ ಬ್ಯುಸಿಯಾಗಿದ್ದರು. ಸಮಂತಾ ಫ್ಯಾಮಿಲಿ ಮ್ಯಾನ್ 2ನಲ್ಲಿ ಅದ್ಭುತವಾಗಿ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದರೆ, ನಟ ನಾಗ ಚೈತನ್ಯ ತಮ್ಮ ಹೊಸ ಚಿತ್ರ ’ಲವ್ ಸ್ಟೋರಿ’ಯ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದರು.

ಇನ್ನು ನಟಿ ಸಮಂತಾ ವಿಚ್ಛೇಧನದ 200 ಕೋಟಿ ರೂಪಾಯಿಗಳನ್ನು ಬೇಡ ಎಂದು ಹೇಳಿ, ನಾಗ ಚೈತನ್ಯ ಅವರನ್ನ ಹಣಕ್ಕಾಗಿ ಎಂದೂ ಜೊತೆಯಾಗಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಇನ್ನು ಸಮಂತಾ ತಾವು ತಮ್ಮ ಖಾಸಗಿ ಬದುಕಿನಲ್ಲಿ ಮುಂದುವರೆಯಲು ಎಲ್ಲರ ಸಹಾಯ ಬೇಕು ಎಂದು ವಿಚ್ಛೇಧನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇನ್ನು ನಟ ನಾಗಾರ್ಜುನ ಕೂಡ ಸೊಸೆ ಅಕ್ಕಿನೇನಿ ಕುಟುಂಬವನ್ನು ಬಿಡುತ್ತಿರುವುದಕ್ಕೆ ಬೇಸರವನ್ನು ವ್ಯಕ್ತಪಡಿಸಿದರು.

ಇನ್ನು ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಯೋಚಿಸುತ್ತಿರುವ ನಟಿ ಸಮಂತಾ ಮಹಿಳಾ ಪ್ರಧಾನ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಇನ್ನೂ ಈ ಚಿತ್ರಕ್ಕೆ ಹೆಸರು ಪಕ್ಕಾ ಆಗದಿದ್ದರೂ ಸಮಂತಾ 3.5 ಕೋಟಿ ಹಣವನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ತುಂಬಾ ಹರಿದಾಡುತ್ತಿದೆ. ಇನ್ನು ಮುಂಬರುವ ಚಿತ್ರದಲ್ಲಿ ಸಮಂತಾ ಇನ್ನಷ್ಟು ಉತ್ತಮ ನಟನೆಯನ್ನು ತೋರಿಸಿದರೆ ದಕ್ಷಿಣ ಭಾರತದ ಬ್ಯುಸಿ ನಟಿಯಾಗೋದ್ರಲ್ಲಿ ನೋ ಡೌಟ್!

Comments are closed.