ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕನ್ನಡದ ಚೆಲುವೆ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇದೀಗ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನಸ್ಸು ಗೆದ್ದಿರುವ ಈ ಚೆಲುವೆಯರು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲದೆ ಅಂತಹ ನಟಿಯರು ಇದೀಗ ಪ್ರತಿಯೊಂದು ಸಿನಿಮಾದಲ್ಲಿ ಕಾಣಿಸಿಕೊಂಡು ಯಶಸ್ಸನ್ನು ಪಡೆಯುತ್ತಿದ್ದಾರೆ. ಇಂತಹ ನಟಿಯರಲ್ಲಿ ರಚಿತಾ ರಾಮ್, ಆಶಿಕಾ ರಂಗನಾಥ್, ಶ್ರೀಲೀಲಾ, ಅದಿತಿ ಪ್ರಭುದೇವ ಹೀಗೆ ಅನೇಕ ನಟಿಯರು ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಟಿಯರಾಗಿ ಗುರುತಿಸಿಕೊಂಡಿದ್ದಾರೆ.

ಇದೀಗ ಇವರ ಅಭಿನಯಿಸಿರುವ ಚಿತ್ರಗಳು ಸಾಕಷ್ಟು ಯಶಸ್ಸನ್ನು ಕಂಡಿದೆ. ಅಷ್ಟೇ ಅಲ್ಲದೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರು ಸಾಕಷ್ಟು ಫ್ಯಾನ್ ಪೇಜ್ ಗಳನ್ನು ಕೂಡ ಹೊದಿದ್ದು, ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಸಂಭಾವನೆ ಹಾಗೂ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ಚೆಲುವೆ ಯಾರು ಎಂಬುದು ಕೂಡ ಕೆಲವರಿಗೆ ಪ್ರಶ್ನೆಯಾಗಿದೆ.

ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ನಟರ ಸಮಾನವಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದಾರೆ. ಇನ್ನು ನಟಿ ಇಲ್ಲದೆ ಸಿನಿಮಾಗಳಿಲ್ಲ. ಸಾಕಷ್ಟು ಅಭಿಮಾನಿಗಳು ನಟಿಗಾಗಿಯೇ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುವುದು ಉಂಟು. ಕೆಲವು ನಟಿಯರು ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸಿ ಯಶಸ್ಸು ಪಡೆದು ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ.

ಇನ್ನೂ ಮತ್ತೆ ಕೆಲವು ನಟಿಯರು ಒಂದೇ ಸಿನಿಮಾದಲ್ಲಿ ನಟಿಸಿ ಮುಂದೆ ಅವಕಾಶಗಳಿಲ್ಲದೆ ಸಿನಿಮಾರಂಗದಿಂದ ದೂರ ಉಳಿದು ಬಿಡುತ್ತಾರೆ. ಮತ್ತೆ ಕೆಲವು ನಟಿಯರು ಕನ್ನಡ ಚಿತ್ರದಲ್ಲಿ ನಟಿಸಿ ಯಶಸ್ಸನ್ನು ಕಂಡು ಭಾಷೆಯ ಚಿತ್ರಗಳಲ್ಲಿ ಕೂಡ ಮಿಂಚುತ್ತಿದ್ದಾರೆ. ಇನ್ನು ನಟಿಯರ ಬೇಡಿಕೆ ಹೆಚ್ಚಿದಂತೆ ಅವರ ಸಂಭಾವನೆ ಕೂಡ ಹೆಚ್ಚುತ್ತಾ ಹೋಗುತ್ತದೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ನಟಿ ಯಾರು? ಅವರ ಸಂಭಾವನೆ ಎಷ್ಟು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಕನ್ನಡ ಚಿತ್ರರಂಗದಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅವರ ಜೋಡಿಯಾಗಿ ನಟಿ ರಶ್ಮಿಕ ಮಂದಣ್ಣ ಅವರು ಕಾಣಿಸಿಕೊಂಡಿದ್ದರು. ಈ ಚಿತ್ರದ ಮೂಲಕ ಯಶಸ್ಸನ್ನು ಪಡೆದ ಅವರು ನಂತರ ‘ಗೀತ ಗೋವಿಂದಂ’ ಎಂಬ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ‘ಮಿಷನ್ ಮಜ್ನು’ ಎಂಬ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟರು.

ಇದೀಗ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಹೀಗೆ ಭಾರತ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ರಶ್ಮಿಕ ಮಂದಣ್ಣ ಅವರು ಒಂದು ಚಿತ್ರಕ್ಕೆ ಸುಮಾರು 65 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹೌದು ಕೆಲವು ಮೂಲಗಳಿಂದ ತಿಳಿದುಬಂದ ಪ್ರಕಾರ ನಟಿ ರಶ್ಮಿಕಾ ಮಂದಣ್ಣ ಅವರು ಒಂದು ಚಿತ್ರದಲ್ಲಿ ನಟಿಸಲು 65 ಲಕ್ಷ ರೂಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಇನ್ನು ಪರಭಾಷೆಗಳಲ್ಲಿ ಇವರ ಸಂಭಾವನೆ ಅದಕ್ಕಿಂತ ಒಂದು ಪಟ್ಟು ಹೆಚ್ಚು ಇದೆ ಎಂದು ತಿಳಿದುಬಂದಿದೆ. ಇನ್ನು ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.