ಬ್ಯಾಟಿಂಗ್ ಮಾಡಲಿಲ್ಲ, ಬೌಲಿಂಗ್ ಮಾಡಲಿಲ್ಲ ಆದರೂ ಕೂಡ ನಿಮಿಷದಲ್ಲಿ ಲಕ್ಷ ರೂಪಾಯಿ ಗೆದ್ದ ಮಿಚೆಲ್ ಸ್ಯಾಂಟ್ನರ್. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇದೊಂದು ರೀತಿಯ ಅಪರೂಪದಲ್ಲಿ ಅಪರೂಪದ ಘಟನೆ ಎಂದು ಹೇಳಬಹುದು. ಕ್ರಿಕೇಟ್ ಪಂದ್ಯಗಳಲ್ಲಿ ಸಾಮಾನ್ಯವಾಗಿ ಅತ್ಯುತ್ತಮ ಆಟ ಪ್ರದರ್ಶಿಸಿದವರು ಮಾತ್ರ ಪಂದ್ಯ ಪುರುಷೋತ್ತಮ ಅಥವಾ ಇನ್ನಿತರ ಅವಾರ್ಡ್ ಗಳನ್ನು ಪಡೆಯುವುದನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೇ ನಿನ್ನೆ ನಡೆದ ಘಟನೆ ಸಂಪೂರ್ಣ ವಿಚಿತ್ರವಾಗಿತ್ತು.

india cricket 2 | ಬ್ಯಾಟಿಂಗ್ ಮಾಡಲಿಲ್ಲ, ಬೌಲಿಂಗ್ ಮಾಡಲಿಲ್ಲ ಆದರೂ ಕೂಡ ನಿಮಿಷದಲ್ಲಿ ಲಕ್ಷ ರೂಪಾಯಿ ಗೆದ್ದ ಮಿಚೆಲ್ ಸ್ಯಾಂಟ್ನರ್. ಹೇಗೆ ಗೊತ್ತೇ??
ಬ್ಯಾಟಿಂಗ್ ಮಾಡಲಿಲ್ಲ, ಬೌಲಿಂಗ್ ಮಾಡಲಿಲ್ಲ ಆದರೂ ಕೂಡ ನಿಮಿಷದಲ್ಲಿ ಲಕ್ಷ ರೂಪಾಯಿ ಗೆದ್ದ ಮಿಚೆಲ್ ಸ್ಯಾಂಟ್ನರ್. ಹೇಗೆ ಗೊತ್ತೇ?? 2

ನ್ಯೂಜಿಲೆಂಡ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದ ಏಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ , ಬದಲೀ ಆಟಗಾರರಾಗಿದ್ದರು. ಪ್ರಮುಖ ಆಟಗಾರ ಹೊರ ಹೊದ ಸಂದರ್ಭದಲ್ಲಿ ಕ್ಷೇತ್ರ ರಕ್ಷಣೆಗೆ ಒಂದು ಓವರ ಮಟ್ಟಿಗೆ ಕ್ರೀಡಾಂಗಣಕ್ಕೆ ಇಳಿದಿದ್ದರು. ಈ ವೇಳೆ ಬಿರುಸಿನಿಂದ ಆಡುತ್ತಿದ್ದ ಶ್ರೇಯಸ್ ಅಯ್ಯರ್ ರವರು ಭರ್ಜರಿ ಸಿಕ್ಸರ್ ಭಾರಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಈ ವೇಳೆ ಬೌಂಡರಿ ಲೈನ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಿಚೆಲ್ ಸ್ಯಾಂಟ್ನರ್ ಅದ್ಭುತವಾಗಿ ಕ್ಷೇತ್ರರಕ್ಷಣೆ ಮಾಡಿ ಸಿಕ್ಸರ್ ನ್ನು ತಡೆದರು. ಈ ಫೀಲ್ಡಿಂಗ್ ಕ್ರೀಡಾಂಗಣದ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು.

ನಂತರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸ್ಯಾಂಟ್ನರ್ ರವರಿಗೆ ಬೆಸ್ಟ್ ಸೇವ್ ಆಫ್ ದಿ ಮ್ಯಾಚ್ ಎಂಬ ಪ್ರಶಸ್ತಿ ದೊರಕಿತು. ಬರೋಬ್ಬರಿ ಒಂದು ಲಕ್ಷ ರೂಪಾಯಿ ಜೇಬಿಗಿಳಿಸಿದರು. ಹೀಗೆ ಪ್ರಶಸ್ತಿ ಪಡೆದ ಸ್ಯಾಂಟ್ನರ್ , ನ್ಯೂಜಿಲೆಂಡ್ ತಂಡದ ಆಡುವ ಹನ್ನೊಂದರ ಬಳಗದ ಭಾಗವಾಗಿರಲಿಲ್ಲ. ಆದರೂ ಒಂದು ಓವರ್ ಫೀಲ್ಡಿಂಗ್ ಮಾಡಿ. ಒಂದು ಲಕ್ಷ ರೂಪಾಯಿ ಜೇಬಿಗಿಳಿಸಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.